ಈ ದಿನ ಸಮೀಕ್ಷೆ | ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಿಜವಾಗಿಯೂ ಅಭಿವೃದ್ಧಿ ಕೆಲಸಗಳು ನಡೆದಿವೆಯೇ?

Date:

Advertisements

18-25 ವರ್ಷದೊಳಗಿನವರು ಶೇ.42.86ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳ ಕುರಿತು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದರೆ, ಶೇ.28.57ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇ.28.57ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಸಾಧಾರಣವಾಗಿವೆ ಎಂದು ತಿಳಿಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಬೃಹತ್ ಅಭಿವೃದ್ಧಿ ಕೆಲಸಗಳನ್ನು ನಡೆಸಿರುವ ಕುರಿತು ಮತದಾರರು ತಮ್ಮ ವ್ಯತಿರಿಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಈ ದಿನ.ಕಾಮ್‌ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ವಯೋಮಾನವಾರು ಮತದಾರರು

Advertisements

ಎಲ್ಲ ರೀತಿಯ ವಯೋಮಾನದವರಲ್ಲಿ ಶೇ. 44ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಸಾಧಾರಣವಾಗಿರುವುದಾಗಿ ತಿಳಿಸಿದ್ದರೆ, ಶೇ.24ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.16ರಷ್ಟು ಮತದಾರರು ಮೋದಿ ಆಡಳಿತದ ಕುರಿತು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದಾರೆ. ಇನ್ನು ಶೇ.8ರಷ್ಟು ಮತದಾರರು ಮೋದಿ ಆಡಳಿತ ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ.8ರಷ್ಟು ಇತರೆ ಮತದಾರರು ಮೋದಿ ಆಡಳಿತ ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

25-35ರೊಳಗಿನವರು: ಶೇ. 66.67ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಸಾಧಾರಣವಾಗಿರುವುದಾಗಿ ತಿಳಿಸಿದ್ದರೆ, ಶೇ. 16.67ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳ ಕುರಿತು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದಾರೆ. ಇನ್ನು ಶೇ. 16.67ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

35-45ರೊಳಗಿನವರು: ಶೇ.50ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದರೆ, ಶೇ.33.33ರಷ್ಟು ಮತದಾರರು ಸಾಧಾರಣವಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇ. 16.67ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

45-55ರೊಳಗಿನವರು: ಶೇ.100ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಸಾಧಾರಣವಾಗಿರುವುದಾಗಿ ತಿಳಿಸಿದ್ದಾರೆ.

55-70ವರ್ಷದೊಳಗಿನವರು: ಶೇ.100ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

70-100ವರ್ಷದೊಳಗಿನವರು: ಶೇ. 33.33ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಉತ್ತಮವಾಗಿರುವುದಾಗಿ ತಿಳಿಸಿದ್ದರೆ, ಶೇ.33.33ರಷ್ಟು ಮತದಾರರು ಸಾಧಾರಣವಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇ.33.33ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

ಒಟ್ಟು ಮತದಾರರ ಪ್ರಕಾರ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು ಸಾಧಾರಣವಾಗಿವೆಯೆಂದು ಶೇ.35.7ರಷ್ಟು ಮತದಾರರು ತಿಳಿಸಿದ್ದರೆ, ಶೇ.33.83ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.12.3ರಷ್ಟು ಮತದಾರರು ಮೋದಿ ಆಡಳಿತ ಕಳಪೆಯಾಗಿರುವದಾಗಿ ತಿಳಿಸಿದ್ದರೆ, ಶೇ.9.24ರಷ್ಟು ಮತದಾರರು ಮೋದಿ ಆಡಳಿತದ ಕುರಿತು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದಾರೆ. ಶೇ. 8.94ರಷ್ಟು ಮತದಾರರು ಮೋದಿ ಆಡಳಿತ ತೀವ್ರ ಕಳಪೆಯಾಗಿರುವುದಾಗಿ ಹೇಳಿರುವ ಮಾಹಿತಿಗಳು ಈ ದಿನ.ಕಾಮ್‌ ಸಮೀಕ್ಷೆಯಿಂದ ತಿಳಿದುಬಂದಿದೆ.

ಅಭಿವೃದ್ಧಿ

ಮಹಿಳಾ ಮತದಾರರು ಏನಂತಾರೆ?

ಶೇ. 36.77ರಷ್ಟು ಮಹಿಳಾ ಮತದಾರರು ಮೋದಿ ಆಡಳಿತ ಸಾಧಾರಣವಾಗಿರುವುದಾಗಿ ತಿಳಿಸಿದ್ದರೆ, ಶೇ.31.05ರಷ್ಟು ಮಹಿಳಾ ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.12.15ರಷ್ಟು ಮತದಾರರು ಮೋದಿ ಆಡಳಿತ ಕಳಪೆಯಾಗಿರುವದಾಗಿ ತಿಳಿಸಿದ್ದಾರೆ. ಶೇ. 11.49ರಷ್ಟು ಮಹಿಳಾ ಮತದಾರರು ಮೋದಿ ಆಡಳಿತದ ಕುರಿತು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದರೆ, ಶೇ. 8.54ರಷ್ಟು ಮಹಿಳಾ ಮತದಾರರು ಮೋದಿ ಆಡಳಿತ ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

ಪುರುಷ ಮತದಾರರು ಹೇಳೋದೇನು?

ಶೇ. 36.12ರಷ್ಟು ಪುರುಷ ಮತದಾರರು ಮೋದಿ ಆಡಳಿತ ಉತ್ತಮವಾಗಿರುವುದಾಗಿ ತಿಳಿಸಿದ್ದರೆ, ಶೇ. 34.18ರಷ್ಟು ಪುರುಷ ಮತದಾರರು ಸಾಧಾರಣವಾಗಿರುವುದಾಗಿ ತಿಳಿಸಿದ್ದಾರೆ. ಶೇ.12.42ರಷ್ಟು ಪುರುಷ ಮತದಾರರು ಮೋದಿ ಆಡಳಿತ ಕಳಪೆಯಾಗಿದೆ ಎಂದಿದ್ದಾರೆ. ಶೇ.9.26ರಷ್ಟು ಮತದಾರರು ಮೋದಿ ಆಡಳಿತ ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದರೆ. ಶೇ. 7.38ರಷ್ಟು ಪುರುಷ ಮತದಾರರು ಮೋದಿ ಆಡಳಿತದ ಕುರಿತು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದಾರೆ.

ಇತರೆ ಮತದಾರರು : ಶೇ. 44ರಷ್ಟು ಇತರೆ ಮತದಾರರು ಮೋದಿ ಆಡಳಿತ ಸಾಧಾರಣವಾಗಿರುವುದಾಗಿ ತಿಳಿಸಿದ್ದರೆ, ಶೇ.24ರಷ್ಟು ಇತರೆ ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.16ರಷ್ಟು ಇತರೆ ಮತದಾರರು ಮೋದಿ ಆಡಳಿತ ಕುರಿತು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದಾರೆ. ಶೇ.8ರಷ್ಟು ಇತರೆ ಮತದಾರರು ಮೋದಿ ಆಡಳಿತ ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ.8ರಷ್ಟು ಇತರೆ ಮತದಾರರು ಮೋದಿ ಆಡಳಿತ ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

ವಯೋಮಾನ

 

ಶಿಕ್ಷಣ : ಏಳನೇ ತರಗತಿ ಪಾಸಾದ 10ನೇ ತರಗತಿ ಪಾಸಾಗದ ಮತದಾರರ ಪ್ರಕಾರ

ಶೇ.38.47ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಸಾಧಾರಣವಾಗಿರುವುದಾಗಿ ತಿಳಿಸಿದ್ದರೆ, ಶೇ.27.11ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.14.31ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ. 11.15ರಷ್ಟು ಮತದಾರರು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದರೆ, ಶೇ.8.97ರಷ್ಟು ಮತದಾರರು ತೀವ್ರ ಕಳಪೆಯಾಗಿರುವುದಾಗಿತಿಳಿಸಿದ್ದಾರೆ.

ಪದವೀಧರರ (ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ) ಮತದಾರರ ಪ್ರಕಾರ 

ಶೇ.44.69ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಉತ್ತಮವಾಗಿವೆ ಎಂದು ತಿಳಿಸಿದ್ದರೆ, ಶೇ.32.05ರಷ್ಟು ಮತದಾರರು ಸಾಧಾರಣವಾಗಿರುವುದಾಗಿ ತಿಳಿಸಿದ್ದಾರೆ. ಶೇ.11.24ರಷ್ಟು ಮತದಾರರು ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ.7.23ರಷ್ಟು ಮತದಾರರು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ. ಶೇ.4.79ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳ ಕುರಿತು ಗೊತ್ತಿಲ್ಲ ಅಥವಾ ಹೇಳಲಾಗುವುದಿಲ್ಲವೆಂದು ತಿಳಿಸಿದ್ದಾರೆ.

ಅನಕ್ಷರಸ್ಥ ಅಥವಾ ಶಾಲೆಗೆ ಹೋಗದ ಮತದಾರರ ಪ್ರಕಾರ

ಶೇ.36.28ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಸಾಧಾರಣವಾಗಿವೆಯೆಂದು ತಿಳಿಸಿದ್ದರೆ, ಶೇ.24.93ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.17.64ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳ ಕುರಿತು ಗೊತ್ತಿಲ್ಲ ಅಥವಾ ಹೇಳಾಗುವುದಿಲ್ಲವೆಂದು ತಿಳಿಸಿದರೆ, ಶೇ.12.17ರಷ್ಟು ಮತದಾರರು ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇ.8.98ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

ಸ್ನಾತಕೋತ್ತರ ಪದವಿ(ಎಂಎ, ಎಂಎಸ್ಸಿ, ಎಂಕಾಂ ಇತ್ಯಾದಿ) ಮತದಾರರ ಪ್ರಕಾರ

ಶೇ.44.52ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಉತ್ತಮವಾಗಿರುವುದಾಗಿ ತಿಳಿಸಿದ್ದರೆ, ಶೇ.29.11ರಷ್ಟು ಮತದಾರರು ಸಾಧಾರಣವಾಗಿರುವುದಾಗಿ ತಿಳಿಸಿದ್ದಾರೆ. ಶೇ.9.93ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ.8.56ರಷ್ಟು ಮತದಾರರು ಗೊತ್ತಿಲ್ಲ ಅಥವಾ ಹೇಳಲಾಗುವುದಿಲ್ಲವೆಂದು ತಿಳಿಸಿದ್ದಾರೆ. ಇನ್ನು ಶೇ.7.88ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

ವೃತ್ತಿಪರ ಪದವಿ(ಬಿಟೆಕ್‌, ಎಂಬಿಬಿಎಸ್‌, ಬಿಎಎಂಎಸ್‌, ಎಲ್‌ಎಲ್‌ಬಿ, ಪಿಎಚ್‌ಡಿ) ಮತದಾರರ ಪ್ರಕಾರ

ಶೇ.50.59ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಉತ್ತಮವಾಗಿವೆಯೆಂದು ತಿಳಿಸಿದ್ದರೆ, ಶೇ.23.53ರಷ್ಟು ಮತದಾರರು ಸಾಧಾರಣವಾಗಿರುವುದಾಗಿ ತಿಳಿಸಿದ್ದಾರೆ. ಶೇ.11.76ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ. ಶೇ.9.41ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ.4.71ರಷ್ಟು ಮತದಾರರು ಗೊತ್ತಿಲ್ಲ ಅಥವಾ ಹೇಳಲಾಗುವುದಿಲ್ಲವೆಂದು ತಿಳಿಸಿದ್ದಾರೆ.

ಶಿಕ್ಷಿತರ ಪ್ರಕಾರ ಅಭಿವೃದ್ಧಿ

ಪಿಯುಸಿ/ಐಟಿಐ/ಡಿಪ್ಲೊಮಾ(ಉನ್ನತ ಶಿಕ್ಷಣ ಪಡೆಯದ) ಮತದಾರರ ಪ್ರಕಾರ

ಶೇ. 36.92ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳು ಸಾಧಾರಣವಾಗಿರುವುದಾಗಿ ತಿಳಿಸಿದ್ದರೆ, 35.71ರಷ್ಟು ಮತದಾರರು ಉತ್ಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.12.58ರಷ್ಟು ಮತದಾರರು ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ.8.18ರಷ್ಟು ಮತದಾರರು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ. ಶೇ.6.61ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳ ಕುರಿತು ಗೊತ್ತಿಲ್ಲ ಅಥವಾ ಹೇಳಲಾಗುವುದಿಲ್ಲವೆಂದು ತಿಳಿಸಿದ್ದಾರೆ.

7ನೆಯ ತರಗತಿಯ ತನಕ, ಆದರೆ 7ನೆಯ ತರಗತಿ ತೇರ್ಗಡೆಯಾಗಿಲ್ಲದ ಮತದಾರರ ಪ್ರಕಾರ

ಶೇ. 39.67ರಷ್ಟು ಮತದಾರರಲ್ಲಿ ಮೋದಿ ಆಡಳಿತದ ಕೆಲಸಗಳು ಸಾಧಾರಣವಾಗಿವೆಯೆಂದು ತಿಳಿಸಿದ್ದರೆ, ಶೇ.27.9ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.12.08ರಷ್ಟು ಮತದಾರರು ಮೋದಿ ಆಡಳಿತದ ಅಭಿವೃದ್ಧಿ ಕೆಲಸಗಳ ಕುರಿತು ಗೊತ್ತಿಲ್ಲ ಅಥವಾ ಹೇಳಲಾಗುವುದಿಲ್ಲವೆಂದು ತಿಳಿಸಿದ್ದಾರೆ. ಶೇ.12.08ರಷ್ಟು ಮತದಾರರು ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ. 8.26ರಷ್ಟು ಮತದಾರರು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

ಉದ್ಯೋಗಿಗಳು

ಪ್ರತಿ ತಿಂಗಳು ನಿಗದಿತ ಸಂಬಳವಿರುವ ಉದ್ಯೋಗ (ಸರಕಾರಿ ಅಥವಾ ಖಾಸಗಿ, ಸಂಬಳ 10 ರಿಂದ 25 ಸಾವಿರ) ಮತದಾರರ ಪ್ರಕಾರ

ಶೇ.53.85ರಷ್ಟು ಮತದಾರರು ಮೋದಿ ಆಡಳಿತದ ಅಭಿವೃದ್ಧಿ ಕೆಲಸಗಳು ಸಾಧಾರಣವಾಗಿವೆಯೆಂದು ತಿಳಿಸಿದರೆ, ಶೇ.34.62ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.7.69ರಷ್ಟು ಮತದಾರರು ಅಭಿವೃದ್ಧಿ ಕಾರ್ಯಗಳು ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ.3.85ರಷ್ಟು ಮತದಾರರು ಅಭಿವೃದ್ಧಿ ಕುರಿತು ಗೊತ್ತಿಲ್ಲ ಅಥವಾ ಹೇಳಲಾಗುವುದಿಲ್ಲವೆಂದು ತಿಳಿಸಿದ್ದಾರೆ.

ಕೃಷಿ ಕೂಲಿ ಕಾರ್ಮಿಕ ಅಥವಾ ಇತರ ಕೂಲಿ ಕೆಲಸ ಮತದಾರರ ಪ್ರಕಾರ

ಶೇ.37.99ರಷ್ಟು ಮತದಾರರು ಮೋದಿ ಆಡಳಿತದ ಅಭಿವೃದ್ಧಿ ಕೆಲಸಗಳು ಸಾಧಾರಣವಾಗಿವೆಯೆಂದು ತಿಳಿಸಿದ್ದರೆ, ಶೇ.26.06ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದಾರೆ. ಶೇ.16.74ರಷ್ಟು ಮತದಾರರು ಮೋದಿ ಆಡಳಿತದ ಅಭಿವೃದ್ಧಿ ಕೆಲಸಗಳ ಕುರಿತು ಗೊತ್ತಿಲ್ಲ ಅಥವಾ ಹೇಳಲಾಗುವುದಿಲ್ಲವೆಂದು ತಿಳಿಸಿದ್ದಾರೆ.

ಮೋದಿ ಅಭಿವೃದ್ಧಿ 1

ಇನ್ನು ಶೇ.11.94ರಷ್ಟು ಮತದಾರರು ಕಳಪೆಯಾಗಿರುವುದಾಗಿ ತಿಳಿಸಿದ್ದರೆ, ಶೇ.7.28ರಷ್ಟು ಮತದಾರರು ಅಭಿವೃದ್ಧಿ ಕೆಲಸಗಳು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

ರೈತ: 2 ರಿಂದ 5 ಎಕರೆ ಜಮೀನು ಹೊಂದಿರುವ ಮತದಾರರ ಪ್ರಕಾರ

ಶೇ.37.98ರಷ್ಟು ಮತದಾರರು ಉತ್ತಮವಾಗಿರುವುದಾಗಿ ತಿಳಿಸಿದ್ದರೆ, ಶೇ.32.56ರಷ್ಟು ಮತದಾರರು ಸಾಧಾರಣವಾಗಿವೆಯೆಂದು ತಿಳಿಸಿದ್ದಾರೆ. ಶೇ.13.18ರಷ್ಟು ಮತದಾರರು ಅಭಿವೃದ್ಧಿ ಕೆಲಸಗಳ ಕುರಿತು ಗೊತ್ತಿಲ್ಲ ಅಥವಾ ಹೇಳುವುದಿಲ್ಲವೆಂದು ತಿಳಿಸಿದ್ದರೆ, ಶೇ.11.63ರಷ್ಟು ಮತದಾರರು ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇ.4.65ರಷ್ಟು ಮತದಾರರು ಅಭಿವೃದ್ಧಿ ಕಾರ್ಯಗಳು ತೀವ್ರ ಕಳಪೆಯಾಗಿರುವುದಾಗಿ ತಿಳಿಸಿದ್ದಾರೆ.

“ನಮ್ಮ ಸರ್ಕಾರವು ದೇಶ ಕಟ್ಟುವ ಧ್ಯೇಯೋದ್ಧೇಶದಿಂದ ಬೃಹತ್ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆಯೇ ಹೊರತು ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಅಲ್ಲ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿ ಭಾಷಣಗಳನ್ನು ಮಾಡುತ್ತಾರೆ. ರಾಜ್ಯದಲ್ಲಿ ಮೋದಿ ಮುಂದಿಟ್ಟುಕೊಂಡು ಮೋದಿ ಅಲೆಯೆಂದು ರಾಜಕೀಯ ನಡೆಸುತ್ತಿದ್ದರೂ ಕೂಡ ರಾಜ್ಯದ ಮತದಾರರು ಮೋದಿ ಆಡಳಿತದ ಅಭಿವೃದ್ಧಿ ಕೆಲಸಗಳ ಕುರಿತು ಸಾಧಾರಣ, ಉತ್ತಮ, ಕಳಪೆ, ತೀವ್ರ ಕಳಪೆಯ ಅಭಿಪ್ರಾಯಗಳನ್ನು ಈ ದಿನ.ಕಾಮ್‌ ಸಮೀಕ್ಷೆಯಲ್ಲಿ ಹಂಚಿಕೊಂಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X