ಈ ದಿನ ಸಮೀಕ್ಷೆ | ಮೋದಿ ಆಡಳಿತದಲ್ಲಿ ಜನರನ್ನು ಬಾಧಿಸಿದೆ ಬೆಲೆ ಏರಿಕೆ!

Date:

Advertisements

ಈ ದಿನ.ಕಾಮ್‌ ನಡೆಸಿದ ಸಮೀಕ್ಷೆಗೆ ಒಳಪಟ್ಟ ಶೇ 85.30% ಮತದಾರರು ಬೆಲೆಯೇರಿಕೆ ಆಗಿದೆ ಎಂದರೆ ಕೇವಲ 9.16% ಮಂದಿ ಮಾತ್ರ ಬೆಲೆ ಏರಿಕೆ ಆಗಿಲ್ಲ ಎಂದಿದ್ದಾರೆ!


ಭಾರತದ
21 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದೆ. ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇವೆ. ರಾಜ್ಯದಲ್ಲಿ ಮತದಾರರ ಒಲವು ಕಾಂಗ್ರೆಸ್‌ ಪರವಾಗಿದೆ ಎಂಬುದು ಈದಿನ.ಕಾಮ್‌ ಸಮೀಕ್ಷೆಯಲ್ಲಿ ಕಂಡುಬಂದಿದೆ. ಇದೇ ಟ್ರೆಂಡ್‌ ಮುಂದುವರೆದರೆ, ಕೈ ಪಡೆ ಸುಮಾರು 20 ಸ್ಥಾನಗಳನ್ನು ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ.

ಇನ್ನು, ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಭ್ರಷ್ಟಾಚಾರ ಹೆಚ್ಚಳವಾಗಿದೆ ಎಂದು ಮತದಾರರು ಹೇಳುತ್ತಿದ್ದಾರೆ.

Advertisements

ಸಮೀಕ್ಷೆಗೆ ಒಳಪಟ್ಟವರಲ್ಲಿ 85.30% ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದರಿಂದ ಭಾರೀ ಪರಿಣಾಮ ಎದುರಿಸುವಂತಾಗಿದೆ ಎಂದು ಹೇಳುತ್ತಿದ್ದಾರೆ. ಕೇವಲ 9.16% ಮಂದಿ ಮಾತ್ರ ಬೆಲೆ ಏರಿಕೆ ಆಗಿಲ್ಲ ಎಂದು ಹೇಳಿದ್ದಾರೆ. ಉಳಿದಂತೆ 5.54% ಜನರು ಗೊತ್ತಿಲ್ಲ ಎಂದಿದ್ದಾರೆ.

ಸಮೀಕ್ಷೆ ಒಟ್ಟು

ಅದರಲ್ಲೂ, ಹೆಚ್ಚಿನ ಮಹಿಳೆಯರು ಬೆಲೆ ಏರಿಕೆ ವಿಪರೀತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಮಹಿಳೆಯರಲ್ಲಿ 85.89% ಮಂದಿ ಬೆಲೆ ಏರಿಕೆಯಾಗಿದೆ ಎಂದಿದ್ದರೆ, 8.05% ಮಂದಿ ಆಗಿಲ್ಲ ಎಂದಿದ್ದಾರೆ. 6.06% ಮಹಿಳೆಯರು ಮಾತ್ರ ಗೊತ್ತಿಲ್ಲ ಎಂದಿದ್ದಾರೆ.

ಪುರುಷರಲ್ಲಿ, 84.81% ಮಂದಿ ಬೆಲೆ ಏರಿಕೆ ಹೆಚ್ಚಾಗಿದೆ ಎಂದಿದ್ದಾರೆ. 10.09% ಮಂದಿ ಪುರುಷರು ಆಗಿಲ್ಲ ಎಂದು ಹೇಳಿದರೆ, 5.10% ಮಂದಿ ಗೊತ್ತಿಲ್ಲ ಎಂದಿದ್ದಾರೆ.

ಬೆಲೆ ಏರಿಕೆ ಬಗ್ಗೆ ಮಾತನಾಡಿದ ಉದ್ಯೋಗಿಗಳು
ಸಮೀಕ್ಷೆ ಉದ್ಯೋಗ

ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಪೈಕಿ ‘ಕೃಷಿ ಕೂಲಿ ಕಾರ್ಮಿಕ ಅಥವಾ ಇತರ ಕೂಲಿ ಕೆಲಸ’ ಮಾಡುತ್ತಿರುವ ಉದ್ಯೋಗಿಗಳು ಬೆಲೆ ಏರಿಕೆ ಹೆಚ್ಚು ಬಾಧಿಸಿದೆ ಎಂದು ಹೇಳಿದ್ದಾರೆ. ಅವರಲ್ಲಿ, 86.97% ಮಂದಿ ಬೆಲೆ ಏರಿಕೆ ಹೆಚ್ಚಾಗಿದೆ ಎಂದಿದ್ದಾರೆ. ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ನಿಗದಿತ ಸಂಬಳವಿರುವ ಉದ್ಯೋಗಿಗಳು (ಸರಕಾರಿ ಅಥವಾ ಖಾಸಗಿ) ಸುಮಾರು 16.83% ಮಂದಿ ಬೆಲೆ ಏರಿಕೆ ಆಗಿಲ್ಲ ಎಂದಿದ್ದಾರೆ. ಬೆಲೆ ಏರಿಕೆ ಆಗಿಲ್ಲ ಎಂದವರಲ್ಲಿ ಈ ಉದ್ಯೋಗಿಗಳೇ ಹೆಚ್ಚಿನವರಾಗಿದ್ದಾರೆ.

ಬೆಲೆ ಏರಿಕೆ ಬಗ್ಗೆ ಮಾತನಾಡಿದವರ ವಯಸ್ಸಿನ ಆಧಾರದ ಮೇಲೆ ವರ್ಗೀಕರಣ
ಸಮೀಕ್ಷೆ ವಯಸ್ಸು

ವಯಸ್ಸಿನ ಆಧಾರದಲ್ಲಿ ನೋಡಿದರೆ ಪ್ರತಿಕ್ರಿಯಿಸಿದ ಎಲ್ಲ ವಯೋಮಾನದವರು ಬೆಲೆ ಏರಿಕೆ ಆಗಿದೆ ಎಂದೇ ಹೇಳಿದ್ದಾರೆ. ಆದರೆ, ಈಗಷ್ಟೇ ಶಿಕ್ಷಣ ಮುಗಿಸಿ ಉದ್ಯೋಗದ ಕಡೆಗೆ ಮುಖ ಮಾಡುತ್ತಿರುವ 18ರಿಂದ 25 ವರ್ಷ ವಯಸ್ಸಿನವರಲ್ಲಿ 11.77% ಬೆಲೆ ಏರಿಕೆ ಆಗಿಲ್ಲ ಎಂದಿದ್ದಾರೆ. ಎಲ್ಲ ವಯೋಮಾನದವರಲ್ಲಿ ಬೆಲೆ ಏರಿಕೆ ಆಗಿಲ್ಲ ಎಂದವರಲ್ಲಿ ಈ ವಯೋಮಾನದವರೇ ಹೆಚ್ಚಿನವರಾಗಿದ್ದಾರೆ.

ಬೆಲೆ ಏರಿಕೆ ಬಗ್ಗೆ ಮಾತನಾಡಿದವರ ಶಿಕ್ಷಣದ ಆಧಾರದ ಮೇಲೆ ವರ್ಗೀಕರಣ
ಸಮೀಕ್ಷೆ ಶಿಕ್ಷಣ

ಪ್ರತಿಕ್ರಿಯಿಸಿದವರನ್ನು ಅವರು ಪಡೆದಿರುವ ಶಿಕ್ಷಣದ ಆಧಾರದ ಮೇಲೆ ವರ್ಗೀಕರಿಸಿದಾಗ, ಅನಕ್ಷರಸ್ಥರೂ ಅಥವಾ ಶಾಲೆಗೆ ಹೋಗದವರೂ ಕೂಡ ಬೆಲೆ ಏರಿಕೆ ಆಗಿರುವ ಬಗ್ಗೆ ಅರಿವು ಹೊಂದಿದ್ದಾರೆ. ಬೆಲೆ ಏರಿಕೆ ಹೆಚ್ಚಾಗಿದೆ ಎಂದವರಲ್ಲಿ 7ನೇ ತರಗತಿವರೆಗೆ ಓದಿದ್ದು, 2ನೇ ತರಗತಿ ಪಾಸಾಗದೇ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ, 86.59% ಮಂದಿ ಬೆಲೆ ಏರಿಕೆ ಬಾಧಿಸಿದೆ ಎಂದಿದ್ದಾರೆ. ಆದರೆ, ಬೆಲೆ ಏರಿಕೆ ಆಗಿಲ್ಲ ಎಂದವರಲ್ಲಿ ವೃತ್ತಿಪರ ಪದವಿ (ಬಿಟೆಕ್, ಎಂಬಿಬಿಎಸ್, ಬಿಎಎಂಎಸ್, ಎಲ್ಎಲ್ ಬಿ, ಪಿಎಚ್ಡಿ) ಪಡೆದವರೇ ಹೆಚ್ಚಿನವರಾಗಿದ್ದಾರೆ. ಅವರಲ್ಲಿ, 20% ಮಂದಿ ಬೆಲೆ ಏರಿಕೆ ಆಗಿಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಬೆಲೆ ಏರಿಕೆ ಹೆಚ್ಚಾಗಿ ಜನರನ್ನು ಬಾಧಿಸಿದೆ ಎಂದು ಜನರು ಒಪ್ಪಿಕೊಂಡಿದ್ದಾರೆ. ಮೋದಿ ಸರ್ಕಾರವು ಹಣದುಬ್ಬರ – ಬೆಲೆ ಏರಿಕೆಯಲ್ಲಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X