ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26ರಂದು ಮತದಾನ ಮಾಡಲು ಜನರು ತಮ್ಮ ತಮ್ಮ ಊರಿನತ್ತ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಪ್ರಯಾಣ ದರ ಏರಿಕೆ ಮಾಡಿದ್ದಾರೆ.
ಏ.26ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರಕ್ಕೆ ತೆರಳುವ ಮತದಾರರು ಮತದಾನಕ್ಕಾಗಿ ಏ.25ರ ರಾತ್ರಿಯೇ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಯೋಜಿಸಿದ್ದಾರೆ. ಹೀಗಾಗಿ, ಬಸ್ ಮಾಲೀಕರು ಪ್ರಯಾಣ ದರ ಏರಿಕೆ ಮಾಡಿದ್ದು, ಜನರು ಕಂಗಾಲಾಗಿದ್ದಾರೆ.
ರಾಜಕೀಯ ಪಕ್ಷಗಳು ಕರಾವಳಿ ಭಾಗಕ್ಕೆ 300ಕ್ಕೂ ಅಧಿಕ ಖಾಸಗಿ ಬಸ್ ಬುಕ್ ಮಾಡಿವೆ. ಇನ್ನು ಹೆಚ್ಚುವರಿ ಬಸ್‌ಗಳನ್ನು ನೀಡುವಂತೆ ಖಾಸಗಿ ಬಸ್ ಮಾಲೀಕರ ಸಂಘಕ್ಕ ಬೇಡಿಕೆ ಇಟ್ಟಿವೆ. ಅಲ್ಲದೆ, ಮತದಾನ ಮಾಡಲು ಜನರು ತಮ್ಮ ಊರಿನತ್ತ ತೆರಳುತ್ತಿದ್ದಾರೆ. ಖಾಸಗಿ ಬಸ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಮಾಲೀಕರು ಪ್ರಯಾಣ ದರವನ್ನು ₹500 ವರೆಗೂ ಹೆಚ್ಚಳ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರ | 16 ಕಡೆ ಶೋಧ ಕಾರ್ಯ: 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಪತ್ತೆ
ಬೆಂಗಳೂರಿನಿಂದ ಮಂಗಳೂರಿಗೆ ₹1600 – ₹1950, ಉಡುಪಿಗೆ ₹1650 – ₹1950, ಚಿಕ್ಕಮಗಳೂರಿಗೆ ₹1100 -₹1600 ಹಾಸನಕ್ಕೆ ₹1200 – ₹1600, ಚಿತ್ರದುರ್ಗಕ್ಕೆ ₹800 – ₹1200 ದರವಿದೆ.