ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಬಿಜೆಪಿ ಸ್ಟಾರ್ ಪ್ರಚಾರಕಿ, ನಟಿ ಶೃತಿ ಕೂಡ ವಿವಾದದ ಹೇಳಿಕೆ ನೀಡಿದ್ದಾರೆ. “ಫ್ರೀ ಬಸ್ ಬಿಟ್ಟ ತಕ್ಷಣ ಹೆಣ್ಣುಮಕ್ಕಳು ತೀರ್ಥಯಾತ್ರೆ ಹೋಗ್ತೇವೆಂದು ಹೇಳಿ, ಎಲ್ಲಿಗ್ ಹೋಗ್ತಿದ್ದಾರೆ ಅಂತ ಗೊತ್ತಾಗ್ತಿಲ್ಲ” ಎಂದು ಹೇಳಿರುವ ಶೃತಿ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಶಕ್ತಿ ಸಿಂಧು ಮಹಿಳಾ ಸಮಾವೇಶದಲ್ಲಿ ಹೇಳಿಕೆ ನೀಡಿದ ಅವರು, “ದಿನ ನಿತ್ಯ ಗಂಡಸರು ಅಳತಾ ಇದ್ದಾರೆ. ನನ್ನ ಹೆಂಡತಿ ಎಲ್ಲಿ ಹೋದ್ಲು ಅಂತ, ಮಕ್ಕಳು ಮನೇಲಿ ಉಪವಾಸ ಬಿದ್ದಿದ್ದಾರೆ ಅಂತ ಗೋಳಾಡುತ್ತಿದ್ದಾರೆ. ಫ್ರೀ ಬಸ್ ಕೊಟ್ಟ ತಕ್ಷಣ ಮಹಿಳೆಯರು ಎಲ್ಲೆಲ್ಲೋ ಹೋಗುತ್ತಿದ್ದಾರೆ. ತೀರ್ಥಯಾತ್ರೆ ಹೋಗಬೇಕು ಅನ್ನುವ ನೆಪದಲ್ಲಿ ಎಲ್ಲಿಗೆ ಹೋಗಬೇಕು ಅನ್ನೋದು ಗೊತ್ತಿಲ್ಲ. ಗೊತ್ತು ಗುರಿಯಿಲ್ಲದೆ ಇರುವ ಹಾಗೇ ಮಾಡಿದ್ದಾರೆ” ಎಂದಿದ್ದಾರೆ.
ಅತಿ ಹೆಚ್ಚು ಉಚಿತ ಕೊಟ್ಟ ತಮಿಳುನಾಡಿನಲ್ಲಿ 35% ಗ್ರಾಮೀಣ ಮಹಿಳೆಯರು ದುಡಿಯುತ್ತಿದ್ದಾರೆ. ಆದರೆ ಇಡೀ ಗ್ರಾಮೀಣ ಭಾರತದ ಸರಾಸರಿ ಕೇವಲ 15% ಮಾತ್ರ ಇದೆ. ಅಂದರೆ ತಮಿಳುನಾಡಿನಲ್ಲಿ ಉಚಿತ ಯೋಜನೆಗಳು ಫಲ ಕೊಟ್ಟಿವೆ. ಹಾಗಾಗಿ ನಮ್ಮ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಡಬೇಡ. pic.twitter.com/sANBGdn7Qr
— Mutturaju (@Mutturaju7) April 24, 2024
”ಫ್ರೀ ಬಸ್ ಹೆಸರಿನಲ್ಲಿ ನಾವು ಯಾವತ್ತು ಸಂಸ್ಕೃತಿ ದಾಟಿದ್ದೆ ಇಲ್ಲ. ಹೆಣ್ಣು ಮಕ್ಕಳ ಮೇಲೆ ಯಾವಾಗಲೂ ಒಂದು ದೂಷಣೆ ಇದೆ. ಆದರೆ, ನಾವು ಹೆಣ್ಣು ಮಕ್ಕಳು ಜಗಳ ಆಡಿದ್ದು ಇತಿಹಾಸದಲ್ಲೇ ಇಲ್ಲ. ಆದರೆ ಕೆಲವರು ಸೀಟ್‌ಗೋಸ್ಕರ ಜುಟ್ಟು ಹಿಡಿದುಕೊಂಡು ಜಗಳ ಆಡೋ ಹಾಗೇ ಮಾಡಿದ್ದಾರೆ. ಆಟೋ ಓಡಿಸೊ ಜನರು ಕಣ್ಣೀರು ಹಾಕತಾ ಇದಾರೆ” ಎಂದು ಹೇಳಿದ್ದಾರೆ.
”ಯಾವುದೇ ಯೋಜನೆ ಕೊಟ್ಟರೂ ಅದು ಮಹಿಳೆಯರ ರಕ್ಷಣೆಗೆ ಕೊಡಬೇಕೇ ಹೊರತು ಕೇವಲ ಆಕರ್ಷಣೆಗೋಸ್ಕರ ಆಗಿರಬಾರದು. ಭಾರತದ ಸಂಸ್ಕೃತಿ, ಪರಂಪರೆಯ ಲಕ್ಷ್ಮಣ ರೇಖೆಯನ್ನ ನೀವು ದಾಟಿ ಹೋದರೇ, ಕಾಂಗ್ರೆಸ್ ಪಕ್ಷದವರು ನಿಮ್ಮನ್ನು ಅಪಹರಣ ಮಾಡುತ್ತಾರೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಊರಿಗೆ ಹೊರಟ ಮತದಾರರು; ಸುಲಿಗೆಗಿಳಿದ ಖಾಸಗಿ ಬಸ್‌ಗಳು
”ಯಾಕೆ ಕಾಂಗ್ರೆಸ್ ಅವರು ಕೇವಲ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಈ ರೀತಿಯ ಯೋಜನೆ ಕೊಡತಾ ಇದಾರೆ ಎಂಬ ಬಗ್ಗೆ ಯೋಚನೆ ಮಾಡಿ” ಎಂದರು.
ಬೈಂದೂರು ಕ್ಷೇತ್ರದ ಅಪಾರ ಸಂಖ್ಯೆಯ ತಾಯಂದಿರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿದ ‘ಶಕ್ತಿ ಸಿಂಧು’ ಮಹಿಳಾ ಸಮಾವೇಶದ ಕ್ಷಣಗಳು.@BJP4India | @BJP4Karnataka#LokSabhaElection2024 #shivamoggaloksabhaconstituency #ಮತ್ತೊಮ್ಮೆಮೋದಿಸರ್ಕಾರ pic.twitter.com/GJC0KCTU5i
— B Y Raghavendra (Modi Ka Parivar) (@BYRBJP) April 22, 2024
ಬಿಜೆಪಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ವೈ ರಾಘವೇಂದ್ರ, ಬೈಂದೂರು ಬಿಜೆಪಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.