ದ.ಕನ್ನಡ | ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ ಸಹಿಸಲು ಸಾಧ್ಯವೇ? ಬಿಜೆಪಿಗೆ ಮತ ಹಾಕಲು ‘ಬಂಟ ಬ್ರಿಗೇಡ್’ ಹೆಸರಲ್ಲಿ ಕರಪತ್ರ!

Date:

Advertisements

ಏಪ್ರಿಲ್ 26ರಂದು ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ಪೈಕಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕೂಡ ಒಂದು. ಮತದಾನ ಪ್ರಕ್ರಿಯೆಗೆ 48 ಗಂಟೆಗಳಷ್ಟೇ ಬಾಕಿ ಇದೆ. ಈ ನಡುವೆ ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಮತ ಹಾಕುವಂತೆ ‘ಬಂಟ ಬ್ರಿಗೇಡ್’ ಹೆಸರಲ್ಲಿ ಕರಪತ್ರವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್‌ ಅಭ್ಯರ್ಥಿಯನ್ನು ಉಲ್ಲೇಖಿಸಿ, “ಶೂದ್ರ ವರ್ಗದ ಆಳಲು ಹೊರಟರೆ ನಾವು ಸಹಿಸಲು ಸಾಧ್ಯವೇ?” ಎಂಬಂತಹಾ ಹಲವು ಅಂಶಗಳನ್ನು ಒಳಗೊಂಡಿದ್ದು, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ತಿಳಿಸಲಾಗಿದೆ.

ಈ ಕರಪತ್ರವು ಕರಾವಳಿಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಬಾರಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಬಿಲ್ಲವ ಸಮುದಾಯದ ಪದ್ಮರಾಜ್ ಪೂಜಾರಿ ಹಾಗೂ ಬಿಜೆಪಿಯಿಂದ ಬಂಟ ಸಮುದಾಯದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸ್ಪರ್ಧಿಸುತ್ತಿದ್ದಾರೆ. ಮೊದಲ ಬಾರಿಗೆ ಇಬ್ಬರು ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಯುತ್ತಿರುವ ಕಾರಣ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಪ್ರಚಾರದ ವಿಚಾರದಲ್ಲಿ ಈ ಬಾರಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಅಬ್ಬರ ಕಾಣುತ್ತಿರುವುದರಿಂದ ಬಿಜೆಪಿಗೆ ಸಹಜವಾಗಿಯೇ ಸೋಲಿನ ಭಯ ಕಾಡುತ್ತಿದೆ ಎಂಬುದು ಕಾಂಗ್ರೆಸ್ ಪರ ಒಲವುಳ್ಳವರ ಅಭಿಪ್ರಾಯ. ಈ ಎಲ್ಲ ಬೆಳವಣಿಗೆಯ ನಡುವೆಯೇ ‘ಬಂಟ ಬ್ರಿಗೇಡ್, ದಕ್ಷಿಣ ಕನ್ನಡ, ಮಂಗಳೂರು’ ಎಂಬ ಹೆಸರಿನಲ್ಲಿ ಕರಪತ್ರವೊಂದು ಹರಿದಾಡುತ್ತಿದೆ.

Advertisements

ಈ ಕರಪತ್ರದಲ್ಲಿ, “ನಿಮ್ಮ ವಾರ್ಡ್, ಗ್ರಾಮ ವ್ಯಾಪ್ತಿಯಲ್ಲಿ ಮತವನ್ನು ದುಡ್ಡು ನೀಡಿ ಖರೀದಿಸುವ ಆವಕಾಶ ಸಿಕ್ಕರೆ, ಮತದಾರರಿಗೆ ಆಮಿಷ ಒಡ್ಡಿಯಾದರೂ ಕಾಂಗ್ರೆಸ್ಸಿಗೆ ಬೀಳುವ ಮತವನ್ನು ಬಿಜೆಪಿಗೆ ಹಾಕಿಸುವ ಕೆಲಸ ಮಾಡುವ ಮೂಲಕ ನಮ್ಮ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿಯನ್ನು ಮಾಡುತ್ತಿದ್ದೇವೆ” ಎಂದು ಉಲ್ಲೇಖಿಸಲಾಗಿದೆ.

ಜೊತೆಗೆ, “ಈ ಪತ್ರವನ್ನು ನಮ್ಮ ಸಮಾಜಕ್ಕೆ ಸೇರಿದವರಿಗೆ ಮಾತ್ರ ನೀಡತಕ್ಕದ್ದು. ಈ ಪತ್ರವನ್ನು ಯಾರಿಗೂ ನೀವು ಹಸ್ತಾಂತರಿಸಬಾರದು” ಎಂಬ ವಿಶೇಷ ಸೂಚನೆಯನ್ನೂ ಕೂಡ ನೀಡಲಾಗಿದೆ.

Banta BRIGADE LETTER
ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ‘ಬಂಟ ಬ್ರಿಗೇಡ್’ ಹೆಸರಿನ ಕರಪತ್ರ

ಕರಪತ್ರದಲ್ಲಿ ಏನಿದೆ?

ಪ್ರೀತಿಯ ಸ್ವಜಾತಿ ಬಾಂಧವರೇ, ಚುನಾವಣೆಯ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ನಮ್ಮ ಸಮಾಜಕ್ಕೆ ಸೇರಿದ ಬ್ರಿಜೇಶ್ ಚೌಟರವರು ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಯಾಗಿದ್ದಾರೆ. ಒಂದು ಕಾಲದಲ್ಲಿ ಬಂಟ ನಾಯಕರನ್ನು ಮೂಲೆಗೆ ಸರಿಸಿ ಬಿಲ್ಲವರು ಮೆರೆದಾಡಿದ್ದ ಕ್ಷೇತ್ರ ನಂತರದ ದಿನದಲ್ಲಿ ನಮ್ಮ ಬಂಟರ ತೆಕ್ಕೆಗೆ ಬಂದಿದೆ. ನಳಿನ್ ಕುಮಾರ್ ಕಟೀಲ್ ಸತತ ಮೂರು ಬಾರಿ ಗೆಲ್ಲುವ ಮೂಲಕ ನಾವು ನಮ್ಮ ಒಗ್ಗಟ್ಟನ್ನು ಸಾಬೀತುಪಡಿಸಿದ್ದೇವೆ.

ಆದರೆ ಒಂದು ಕಾಲದಲ್ಲಿ ನಮ್ಮ ಒಕ್ಕಲಿನಲ್ಲಿದ್ದ ಬಿಲ್ಲವರು, ಜನಾರ್ದನ ಪೂಜಾರಿಯವರು ಸಂಸದರಾದ ನಂತರ ದೊಡ್ಡ ದೊಡ್ಡ ಉದ್ಯಮದಲ್ಲಿ ತೊಡಗಿಸಿಕೊಂಡು ಊರಿಗೆ, ಜಿಲ್ಲೆಗೆ, ಪರ ಊರಿನಲ್ಲಿ ಪ್ರಭಾವಿಯಾಗಿದ್ದ ನಮ್ಮ ಸಮಾಜದವರ ಪ್ರಭಾವವನ್ನು ತಗ್ಗಿಸಿ ಮೆರೆದಾಡತೊಡಗಿದ್ದರು. ಇಂತಹ ಶೂದ್ರ ವರ್ಗದ ಜನರು ನಮ್ಮನ್ನು ಆಳಲು ಹೊರಟರೆ ಅದನ್ನು ಸ್ವಾಭಿಮಾನಿಗಳಾದ ನಾವು ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಸೇಂದಿ ತೆಗೆದು, ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದವರು. ಇಂದು ನಮ್ಮ ಮೇಲೆ ಅಧಿಕಾರವನ್ನು ಚಲಾಯಿಸಲು ಹೊರಟರೆ ಅವರ ಕೈಕೆಳಗೆ ಬಾಳುವುದಕ್ಕೆ ನಮಗೆ ಸಾಧ್ಯವಿದೆಯೇ ಎನ್ನುವುದನ್ನು ಸ್ವಾಭಿಮಾನಿಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜನಾರ್ದನ ಪೂಜಾರಿಯ ನಂತರ ಮತ್ತೊಮ್ಮೆ ಅವರ ಶಿಷ್ಯನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ನಮ್ಮ ಬಂಟ ಸಮಾಜಕ್ಕೆ ಸವಾಲನ್ನು ಎಸೆದಿದೆ. ಈ ಸವಾಲನ್ನು ನಾವು ಸ್ವೀಕರಿಸುವ ಮೂಲಕ ನಮ್ಮ ಸಮಾಜಕ್ಕೆ ಸೇರಿದ ಬ್ರಿಜೇಶ್ ಚೌಟರನ್ನು ಲಕ್ಷ ಲಕ್ಷ ಬಹುಮತದಿಂದ ಗೆಲ್ಲಿಸುವುದಕ್ಕೆ ರಾತ್ರಿ ಹಗಲೆನ್ನದೆ ದುಡಿಯಬೇಕಾಗಿದೆ.

Janardhana poojary
ಜನಾರ್ದನ ಪೂಜಾರಿ

 

ಒಂದು ವೇಳೆ ಶೂದ್ರ ವರ್ಗಕ್ಕೆ ಸೇರಿದವ ಗೆದ್ದು ಬಂದರೆ ಮುಂದಿನ ದಿನದಲ್ಲಿ ಇತರ ಶೂದ್ರ ವರ್ಗಕ್ಕೆ ಸೇರಿದವರು ಗೌಡರು, ಕುಲಾಲ್, ಕೊಟ್ಟಾರಿ, ಗಾಣಿಗ, ಭಂಡಾರಿ, ನಾಯ್ಕ, ಎಸ್ಸಿ-ಎಸ್ಟಿಗಳು ಒಗ್ಗಟ್ಟಾಗಿ ನಮ್ಮನ್ನು ಆಳಲು ಹೊರಟರೆ, ಬೇರೆ ಬೇರೆ ಚುನಾವಣೆಗಳಲ್ಲಿ ಸ್ಪರ್ಧಿಸಿ ನಮ್ಮವರನ್ನು ಮೂಲೆಗುಂಪು ಮಾಡಿದರೆ ಅದನ್ನು ನಮಗೆ ಸಹಿಸುವುದಕ್ಕೆ ಸಾಧ್ಯವಿದೆಯೇ? ಊರಿಗೆ ಪಟೇಲರಾಗಿ ವಿವಿಧ ಸ್ಥರಗಳಲ್ಲಿ ಜನಪ್ರತಿನಿಧಿಗಳಾಗಿ ಮೆರೆದಿದ್ದ ನಮ್ಮ ಸಮಾಜ ಇಂತಹ ಸಮಾಜದ ಶೂದ್ರರ ಮುಂದೆ ಕೈಕಟ್ಟಿಕೊಂಡು ನಿಲ್ಲಬೇಕೆ?

ಒಂದು ಕಾಲದಲ್ಲಿ ಗರಡಿಗಳಿಗೆ, ದೇವಸ್ಥಾನಗಳಿಗೆ ಪ್ರವೇಶವೇ ಇಲ್ಲದ ಇಂತಹ ಶೂದ್ರ ಜಾಸಿಯವರು ಜನಾರ್ದನ ಪೂಜಾರಿಗೆ ಅಧಿಕಾರ ಸಿಕ್ಕ ಮೇಲೆ ನಮ್ಮ ಗರಡಿಗಳ ಮೇಲೆ, ನಮ್ಮ ದೇವಸ್ಥಾನಗಳ ಮೇಲೆ ಯಾವ ರೀತಿಯ ಪಾರಮ್ಯ ಮೆರೆದು ದೇವಸ್ಥಾನಗಳಿಗೆ ಪ್ರವೇಶವನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನುವ ಸತ್ಯವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ. ಜನಾರ್ದನ ಪೂಜಾರಿ ಗೆದ್ದ ನಂತರದ ಪರಿಸ್ಥಿತಿ ಅವರ ಶಿಷ್ಯ ಗೆದ್ದ ನಂತರ ನಮಗೆ ಬಾರದಿರಲಿ ಎನ್ನುವುದಾದರೆ ನಮ್ಮ ಸಮಾಜದ ಸೈನಿಕ ಬ್ರಿಜೇಶ್ ಚೌಟ ಗೆಲ್ಲಲೇಬೇಕು.

ಸತ್ಯಜಿತ್ ಸುರತ್ಕಲ್, ಬಿರುವೆರ್ ಕುಡ್ಲದ ಉದಯ ಪೂಜಾರಿ ಬಲ್ಲಾಲ್ ಭಾಗ್ ಇಂತಹವರು ವಿವಿಧ ಸಂಘಟನೆಗಳನ್ನು ಕಟ್ಟಿಕೊಂಡು ನಮ್ಮವರಿಗೆ ಯಾವ ರೀತಿಯಲ್ಲಿ ಮಗ್ಗುಲ ಮುಳ್ಳಾಗಿದ್ದಾರೆ ಎನ್ನುವುದನ್ನು ನಾವು ಮರೆಯಲಾಗುತ್ತದೆಯೇ?

ನಮ್ಮ ಸಮಾಜದ ಒಬ್ಬ ಯುವಕನನ್ನು ಗೆಲ್ಲಿಸುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ನಮ್ಮ ಸಮಾಜದ ಹಿರಿಯರ ಸೂಚನೆಯಂತೆ ಕೆಲಸ ಮಾಡಲಾಗಿದೆ. ನಮ್ಮ ಅಭ್ಯರ್ಥಿಯಾದ ಚೌಟರಿಗೆ ದೊಡ್ಡ ಮೊತ್ತದ ಹಣದ ನೆರವನ್ನು ಕೂಡ ನೀಡಲಾಗಿದೆ. ಇದು ಸಾಲದು. ನಮ್ಮ ಕೃಷಿ ಕಾರ್ಯದಲ್ಲಿ, ನಮ್ಮ ಮನೆಯ ಕೂಲಿ ಕೆಲಸದಲ್ಲಿ, ನಮ್ಮ ಉದ್ಯಮಗಳಲ್ಲಿ, ನಮ್ಮಲ್ಲಿ ಒಕ್ಕಲು ಇರುವವರನ್ನು ನಮ್ಮ ಪ್ರಭಾವವನ್ನು ಬಳಸಿಕೊಂಡು ಚೌಟರಿಗೆ ಮತದಾನ ಮಾಡಿಸುವ ದೊಡ್ಡ ಜವಾಬ್ದಾರಿಯನ್ನು ನಮ್ಮ ಸಮಾಜದವರು ನಿರ್ವಹಣೆ ಮಾಡಿ, ಶೂದ್ರನೊಬ್ಬ ನಮ್ಮನ್ನು ಆಳದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

ನಿಮ್ಮ ವಾರ್ಡ್, ಗ್ರಾಮ ವ್ಯಾಪ್ತಿಯಲ್ಲಿ ಮತವನ್ನು ದುಡ್ಡು ನೀಡಿ ಖರೀದಿಸುವ ಆವಕಾಶ ಸಿಕ್ಕರೆ, ಮತದಾರರಿಗೆ ಆಮಿಷ ಒಡ್ಡಿಯಾದರೂ ಕಾಂಗ್ರೆಸ್ಸಿಗೆ ಬೀಳುವ ಮತವನ್ನು ಬಿಜೆಪಿಗೆ ಹಾಕಿಸುವ ಕೆಲಸ ಮಾಡುವ ಮೂಲಕ ನಮ್ಮ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿಯನ್ನು ಮಾಡುತ್ತಿದ್ದೇವೆ. ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿಯನ್ನು ಮಾಡುತ್ತಿದ್ದೇವೆ ಎಂದು ಕರಪತ್ರದಲ್ಲಿ ಬರೆಯಲಾಗಿದೆ.

ಈಗ ವೈರಲಾಗುತ್ತಿರುವ ಈ ಪತ್ರವನ್ನು ‘ಬಂಟ ಬ್ರಿಗೇಡ್’ ಹೆಸರಲ್ಲಿ ಮುದ್ರಿಸಲಾಗಿದೆ. ಆದರೆ ಇದರ ಸೃಷ್ಟಿಕರ್ತ ಯಾರು ಎಂಬ ಬಗ್ಗೆ ಎಲ್ಲೂ ಉಲ್ಲೇಖ ಮಾಡಿಲ್ಲ. ಇದು ಲೋಕಸಭಾ ಚುನಾವಣೆಯಲ್ಲಿ ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X