“ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ” ಯಾವ ಸರ್ಕಾರ ಏನೇ ಮಾಡಿದರೂ 32 ವರ್ಷಗಳ ಕೆಳಗೆ ಬಂಗಾರಪ್ಪನವರು ಮಾಡಿದ ಕೆಲಸಗಳನ್ನು ಯಾರ ಕೈಯಿಂದಲು ಮೀರಿಸಲು ಸಾಧ್ಯವಿಲ್ಲವೆಂದು ಎಂದು ತಿಮ್ಲಾಪುರದ ಮಹಿಳೆಯರು ಸಂತಸ ಪಟ್ಟರು.
ಸಚಿವ ಮಧು ಬಂಗಾರಪ್ಪನವರು ಶಿವಮೊಗ್ಗಕ್ಕೆ ಹೋಗುವ ದಾರಿ ಮಧ್ಯ ಶಿಕಾರಿಪುರ ತಾಲೂಕಿನ ತಿಮ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ಯಾರೆಂಟಿ ಕಾರ್ಡ್‌ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭ ಸ್ಥಳೀಯ ಗ್ರಾಮಸ್ಥರು ಹಾಗೂ ಮಹಿಳೆಯರು ಅಂದು ಪಂಪ್‌ಸೆಟ್‌ಗಳಿಗೆ ಶೆಡ್ಡು ಹೊಡೆದು ಅಂದು ನೀಡಿದ ಉಚಿತ ವಿದ್ಯುತ್ ಯೋಜನೆ ಇವತ್ತು ನಮ್ಮ ಮನೆ ಮನೆಗಳ ನಂದಾದೀಪವಾಗಿದೆ.
ಬಂಗಾರಪ್ಪನವರಿಂದ ನಮ್ಮ ಮನೆಗಳು ಸ್ಮರಣೀಯವಾಗಿ ಬೆಳಗುತ್ತಿದೆ. ಅದಕ್ಕಾಗಿ ನಿಮಗೆ ಹೃದಯಪೂರ್ವಕ ಸ್ವಾಗತ ನೀಡುತ್ತೇವೆಂದು ಆರತಿ ಮಾಡಿ ಸ್ವಾಗತಿಸಿದರು.
ಈ ಸಂದರ್ಭ ಬಂಗಾರಪ್ಪನವರ ಸ್ಮರಣೆ ಮಾಡಿದ ಗ್ರಾಮಸ್ಥರ ಜತೆಗೆ ಮಧುಬಂಗಾರಪ್ಪ ಮಾತನಾಡಿ, “ಅಂದು ಗ್ರಾಮೀಣ ಕೃಪಂಕಾ, ಆರಾಧನಾ, ಉಚಿತ ವಿದ್ಯುತ್ ಸೇರಿ ಹಲವು ಯೋಜನೆಗಳು ಯಶಸ್ವಿಯಾಗಿದ್ದು, ಇಂದಿಗೂ ಕೂಡ ಯಾವ ಸರ್ಕಾರವು ಅವರ ಜನಪರ ಯೋಜನೆಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಹೃದಯದಲ್ಲೂ ಬಂಗಾರಪ್ಪನವರು ಇದ್ದಾರೆ. ಈ ಬಾರಿ ಬಂಗಾರಪ್ಪನವರ ಮಗಳಾದ ಗೀತಕ್ಕನವರಿಗೆ ನಿಮ್ಮ ಮತ ನೀಡಿ” ಎಂದು ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥರು, “ಯಾರ ಬಗ್ಗೆಯೂ ಟೀಕೆ ಮಾಡದೆ ಬಂಗಾರಪ್ಪನವರ ಋಣ ತೀರಿಸಲು ನಮಗೆ ಒಳ್ಳೆಯ ಸುವರ್ಣ ಅವಕಾಶ. ಮಧು ಬಂಗಾರಪ್ಪನವರೇ ಈ ಬಾರಿ ನಿಮ್ಮ ತಂದೆಯವರ ಋಣ ತೀರಿಸಿಯೇ ತೀರಿಸುತ್ತೇವೆ” ಎಂದು ಮಧು ಬಂಗಾರಪ್ಪನವರಿಗೆ ಚೈತನ್ಯ ನೀಡಿದರು.
ಉತ್ತರಿಸಿದ ಮಧು ಬಂಗಾರಪ್ಪನವರು, “ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ ಇದೆ. ಗೀತಕ್ಕ ಈ ಬಾರಿ ಗೆದ್ದು ನಿಮ್ಮೆಲ್ಲರ ಸಮಸ್ಯೆಗಳ ಪರವಾಗಿ ನಿಲ್ಲುತ್ತಾರೆ. ಅವರ ಜೊತೆ ನಾನು ನಿಂತು ಕೈ ಜೋಡಿಸುತ್ತೇನೆ. ಹೆದರಬೇಡಿ ಧೈರ್ಯವಾಗಿರಿ” ಎಂದು ಭರವಸೆ ನೀಡಿದರು.
ಸ್ಥಳೀಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಧು ಬಂಗಾರಪ್ಪನವರಿಗೆ ಸ್ಥಳೀಯರು ಗೌರವ ಸಮರ್ಪಿಸಿದರು.
ಈ ಸುದ್ದಿ ಓದಿದ್ದೀರಾ? ಪುತ್ತೂರು | ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋದ ಯುವಕ: ಪ್ರಕರಣ ದಾಖಲು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ, ಮುಖಂಡ ನಾಗರಾಜ್ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಮಾರವಳ್ಳಿ ಉಮೇಶ್, ರೇಣುಕಸ್ವಾಮಿ, ರಾಘವೇಂದ್ರ ನಾಯಕ್, ಶಿವು ಹುಲ್ಮಾರ್, ಸ್ಥಳೀಯ ಮುಖಂಡರಾದ ಷಣ್ಮುಖಪ್ಪ, ಚಿಕ್ಕಣ್ಣ, ಮಂಜುನಾಥ್, ಗದಿಗೆಮ್ಮ, ಹಳದಪ್ಪ ಸೇರಿದಂತೆ ಇತರರು ಇದ್ದರು.
