ಅಶ್ಲೀಲ ಚಿತ್ರವೊಂದನ್ನು ಹಂಚಿಕೊಂಡಿರುವ ರಾಜ್ಯ ಯುವ ಘಟಕ ಜಾತ್ಯಾತೀತ ಜನತಾದಳ ಹೆಸರಿನ ಫೇಸ್‌ಬುಕ್ ಪೇಜ್ – ಆ ಚಿತ್ರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರದ್ದು ಎಂದು ಆರೋಪಿಸಿದೆ. ಚಿತ್ರವನ್ನು ಹಂಚಿಕೊಂಡು, “ಯಾರಿರಬಹುದು ಕಾಮೆಂಟ್ ಬಾಕ್ಸ್ ನಿಮ್ಮದೇ..! ಸಿಡಿ ಶಿ….ಕುಮಾರನ ಸಂತತಿಗಳೇ ಹು ಶುರು ಮಾಡಿ ನೀವು HD ವಿಡಿಯೋ ರಿಲೀಸ್ ಮಾಡಿ ನಾವು FullHD ರಿಲೀಸ್ ಮಾಡ್ತೀವಿ … ಅಬ್ಬಬಾ ರುಚಿಕರ ಸಂಭಾಷಣೆ.. ವಿಡಿಯೋ ತುಂಬಾ ಕಾಸ್ಟ್ಲಿ ಯಾರು ಕೇಳಬೇಡಿ ಅವರು ಬಿಟ್ಟರೆ ನಾವು ಬಿಡೋಣ. ಈಗಲೇ ಬಿಟ್ಟರೆ ಏನು ಮಜ…ಬಿಡ್ರೋ ಬಿಡ್ರಿ ನೋಡೋಣ…” ಎಂಬ ಹೇಳಿಕೆಯನ್ನು ಪೋಸ್ಟ್ ಮಾಡಿಲಾಗಿದೆ.
ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಹಲವರು, ಅದು ಡಿಕೆ ಶಿವಕುಮಾರ್ ಅವರದ್ದು ಎಂದು ಸಾಬೀತು ಮಾಡಿ ನೋಡಣ ಎಂದು ಸವಾಲು ಹಾಕಿದ್ದಾರೆ. ಇನ್ನೂ, ಕೆಲವರು ಅದು ಶಿವಕುಮಾರ್ ಅವರದ್ದೇ ಇರಬಹುದು ಎಂದೂ ಹೇಳುತ್ತಿದ್ದಾರೆ. ಫೋಟೊದಲ್ಲಿ ಕಂಡುಬರುವ ವ್ಯಕ್ತಿ ನಿಜವಾಗಿಯೂ ಡಿ.ಕೆ.ಶಿವಕುಮಾರ್ ಅವರೇ? ಸತ್ಯವೇನು ಪರಿಶೀಲಿಸೊಣ.
ಪ್ರತಿಪಾದನೆ: ಅಶ್ಲೀಲ ಚಿತ್ರ ಡಿಕೆ ಶಿವಕುಮಾರ್ ಅವರದ್ದು
ಸತ್ಯ: ಅದು ಡಿಕೆ ಶಿವಕುಮಾರ್ ಅವರದ್ದಲ್ಲ, ದಿಯು-ದಮನ್‌ನ ಬಿಜೆಪಿ ಅಧ್ಯಕ್ಷನ ಚಿತ್ರ
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೊವನ್ನು ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ ಇದೇ ಚಿತ್ರವನ್ನು ಹೋಲುವ ಹಲವು ಪೋಸ್ಟ್‌ಗಳು ಲಭ್ಯವಾದವು.
ಮತ್ತಷ್ಟು ಗೂಗಲ್ ಸರ್ಚ್ ಮಾಡಿದಾಗ, 3 ನವೆಂಬರ್ 2019ರಲ್ಲಿ democraticaccent.com ಎಂಬ ಸುದ್ದಿ ತಾಣ ಮಾಡಿದ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ, ದಮನ್ ಮತ್ತು ದಿಯು – ಕೇಂದ್ರಾಡಳಿತ ಪ್ರದೇಶ – ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲ್ ತಾಂಡೇಲ್ ಅವರು ಮಹಿಳೆಯೊಬ್ಬರೊಂದಿಗೆ ಇರುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಅಸಲಿಗೆ ಇದು ಡಿ.ಕೆ ಶಿವಕುಮಾರ್‌ಗೆ ಸಂಬಂಧಿಸಿದ ಫೋಟೋಗಳಲ್ಲ. ಬದಲಿಗೆ ಇದು ಬಿಜೆಪಿ ನಾಯಕ ಗೋಪಾಲ್ ತಂಡೇಲ್ ಫೋಟೋಗಳಾಗಿವೆ. ದ ಫೋಟೋಗಳು ಹೊರಬಿದ್ದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ಸಹ ನೀಡಿದ್ದರು. ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರೇ ಖುದ್ದು ಗೋಪಾಲ್‌ರವರ ರಾಜಿನಾಮೆಯನ್ನು ಸ್ವೀಕರಿಸಿದ್ದರು ಈಗ ಆ ಫೋಟೋಗಳನ್ನು ಡಿ.ಕೆ. ಶಿವಕುಮಾರ್ ಅವರದ್ದೇ ಎಂಬಂತೆ ಬಿಂಬಿಸಿ ಹರಿಬಿಡಲಾಗುತಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ಈ ನಕಲಿ ಫೋಟೋಗಳನ್ನು ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.
ಅಂತಿಮವಾಗಿ ಹೇಳುವುದಾದರೆ, ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಡಲು ಹೋಗಿ, ತಮ್ಮದೇ ಮೈತ್ರಿ ಪಕ್ಷದ(BJP) ನಾಯಕನ ಅಶ್ಲೀಲ ಫೋಟೋವನ್ನು ಹಂಚಿಕೊಂಡು ಜೆಡಿಎಸ್ ಯುವ ಘಟಕ ಮುಜುಗರಕ್ಕೆ ಒಳಗಾಗಿದೆ.