ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪಕರ ಭತ್ಯೆ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (ಕೆಎಸ್‌ಇಎಬಿ) ಹೇಳಿದೆ.
ಭತ್ಯೆ ಪರಿಷ್ಕರಣೆಯಿಂದಾಗಿ ಮೌಲ್ಯ ಮಾಪನ ಕೇಂದ್ರಗಳ ಜಂಟಿ ಮುಖ್ಯ ಪರೀಕ್ಷಕರ ಸಂಭಾವನೆ 7,270 ರೂ.ನಿಂದ 7,634 ರೂ.ಗೆ ಹೆಚ್ಚಿಸಲಾಗಿದೆ. ಉಪ ಮುಖ್ಯ ಮೌಲ್ಯಮಾಪಕರ ಭತ್ಯೆ 5,464 ರಿಂದ ₹5,737 ವರೆಗೂ ಹೆಚ್ಚಳ ಆಗಲಿದೆ.
ಈ ಹಿಂದೆ ಪ್ರತಿ ಪತ್ರಿಕೆಗೆ ₹23ನೀಡಲಾಗುತ್ತಿತ್ತು. ಈಗ ತಲಾ ಒಂದು ಪ್ರಥಮ ಭಾಷೆ ಉತ್ತರ ಪತ್ರಕೆಗಳಿಗೆ ₹24 ನೀಡಲಾಗುತ್ತದೆ. ದ್ವಿತೀಯ, ತೃತೀಯ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ₹21 ಇದ್ದ ಮೌಲ್ಯಮಾಪನ ದರ ₹22ಕ್ಕೆ ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ ಮೌಲ್ಯಮಾಪಕರ ದೈನಂದಿನ ಭತ್ಯೆಯನ್ನು 596 ರೂ.ನಿಂದ 626 ರೂ.ಗೆ ಮತ್ತು ಇತರ ನಗರಗಳಲ್ಲಿಶಿಕ್ಷಕರ ಭತ್ಯೆ ₹469 ನಿಂದ ₹492 ಹೆಚ್ಚಿಸಲಾಗಿದೆ. ಸ್ಥಳೀಯ ಭತ್ಯೆ ಬೆಂಗಳೂರಿಗೆ ₹234 ರಿಂದ ₹246ಕ್ಕೆ ಮತ್ತು ಇತರ ನಗರಗಳಲ್ಲಿ ಸ್ಥಳೀಯ ಭತ್ಯೆಯನ್ನು ₹189 ರಿಂದ ₹198 ಮಾಡಲಾಗಿದೆ
ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ ₹4,515 ರೂ.ನಿಂದ ₹4,741ಗೆ ಹೆಚ್ಚಿಸಲಾಗಿದೆ ಮತ್ತು ಕ್ಯಾಂಪ್ ಸಹಾಯಕರ ಸಂಭಾವನೆ ₹1,260 ರಿಂದ ₹1,323 ಏರಿಕೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ?: ದ್ವಿತೀಯ ಪಿಯುಸಿ | ಪೂರಕ ಪರೀಕ್ಷೆ: ಅರ್ಜಿ ಸಲ್ಲಿಕೆಗೆ ಏ. 28 ಅಂತಿಮ ದಿನ