ದಾವಣಗೆರೆ | ಮೇ.4ರಂದು ಪ್ರಿಯಾಂಕಾ ಗಾಂಧಿ ಪ್ರಚಾರ: ಸಚಿವ ಮಲ್ಲಿಕಾರ್ಜುನ

Date:

Advertisements

ರೈತರು ದೇಶದ ಬೆನ್ನೆಲುಬು, ದಾವಣಗೆರೆ ಕಾಂಗ್ರೆಸ್ ಪಕ್ಷಕ್ಕೆ ರೈತರು ಬೆನ್ನೆಲುಬಾಗಿರುವುದು ಸಂತಸದ ಸಂಗತಿ. ರೈತ ಸಂಘದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿಗೆ ಆನೆ ಬಲ ಬಂದಂತಾಗಿದೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರುಗಳು ನಗರದ ಎಂಸಿಸಿಬಿ ಬ್ಲಾಕ್‌ನ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

“ಎಲ್ಲೇ ಹೋದರೂ ಕೂಡಾ ರೈತ ಸಂಘದವರು ನಮಗೆ ಚಿರಪರಿಚಿತರು. ಆನಗೋಡು ಗ್ರಾಮದಲ್ಲಿ ರೈತರ ಹುತಾತ್ಮ ಭವನ ಮಾಡಬೇಕು. ರೈತರ ಸಮುದಾಯ ಭವನ ನಿರ್ಮಿಸಬೇಕು. ಕೈಗೆಟುಕುವ ದರದಲ್ಲಿ ಕೃಷಿ ಸಾಮಾಗ್ರಿಗಳು ಸಿಗಬೇಕು ಎಂಬ ಹಲವು ಬೇಡಿಕೆಗಳಿವೆ. ಅವುಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ದೊಡ್ಡ ರೈತರಿಗೆ ಉಪಯೋಗವಾಗಿದೇಯೇ ಹೊರತು ಸಣ್ಣ ಹಾಗೂ ಬಡ ರೈತರಿಗೆ ಉಪಯೋಗವಾಗಿಲ್ಲ” ಎಂದು ದೂರಿದರು.

Advertisements

“ಕಾಂಗ್ರೆಸ್ ಅಭ್ಯರ್ಥಿ ಡಾ‌ ಪ್ರಭಾ ಮಲ್ಲಿಕಾರ್ಜುನ ಅವರು ರೈತನ ಮಗಳು, ರೈತರ ಕಷ್ಟಗಳನ್ನು ಕಣ್ಣಾರೆ ಕಂಡವರು. ಕೃಷಿ ಪರಿಣಿತರಾಗಿರುವ ಅವರಿಗೆ ರೈತರ ಪ್ರತಿಯೊಂದು ವಿಚಾರಗಳಲ್ಲಿ ಅಪಾರವಾದ ಕಾಳಜಿ ಇದೆ. ನಾನು ಹಾಗೂ ನಮ್ಮ ತಂದೆಯವರಿಗಿಂತ ಹೆಚ್ಚಿನ ರೀತಿಯಲ್ಲಿ ಸಮಸ್ಯೆಗಳನ್ನು ಫಾಲೋಅಪ್ ಮಾಡಿ ಸರಿಪಡಿಸುವರು” ಎಂದು ಭರವಸೆ ವ್ಯಕ್ತಪಡಿಸಿದರು.

“ರೈತರ ಪ್ರತಿ ಹೋರಾಟದಲ್ಲಿ ನಾವುಗಳು ನಿಮ್ಮ ಜತೆ ಇರುತ್ತೇವೆ ಎಂದ ಅವರು ಮೇ.4ರಂದು ಜಿಲ್ಲೆಗೆ ಪ್ರಿಯಾಂಕಾಗಾಂಧಿ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ತಾವುಗಳೆಲ್ಲ ಕುಟುಂಬ ಸಮೇತರಾಗಿ ಹಸ್ತದ ಗುರುತಿಗೆ ಮತ ನೀಡಿ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.

“ಯಲೋದಹಳ್ಳಿ ಬಡ ರೈತ ಕಾಳೇಶ್ ಅವರು ಸಭೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಚುನಾವಣಾ ಖರ್ಚಿಗಾಗಿ ₹20,000 ದೇಣಿಗೆ ನೀಡಿದರು. ಬಡ ರೈತನಾಗಿದ್ದರೂ ಯಲೋದಹಳ್ಳಿ ಕಾಳೇಶ್ ಅವರ ಸಹಾಯ ದೊಡ್ಡದು ಅವರ ಅಭಿಮಾನಕ್ಕೆ ಕೋಟಿ ಕೊಟ್ಟರೂ ಸಾಲದು. ಇದು ಗೆಲುವಿನ ಶುಭಸಂಕೇತ” ಎಂದು ರೈತನ ಸೇವೆ ಸ್ಮರಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ರಾಮಮಂದಿರ ಉದ್ಘಾಟನೆಗೆ ಹೋಗಿದ್ದರೆ ಗಂಗಾ ಜಲದಿಂದ ಶುದ್ಧಿಗೊಳಿಸುತ್ತಿದ್ದರು : ಮಲ್ಲಿಕಾರ್ಜುನ ಖರ್ಗೆ

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಜಿಲ್ಲಾ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ್, ಜಿಲ್ಲಾ ಸಂಚಾಲಕ ಟಿ ಆರ್ ಗಿರಿಯಾಪುರ ಲಕ್ಷ್ಮಣ, ಚನ್ನಗಿರಿ ತಾಲೂಕು ಅಧ್ಯಕ್ಷ ಯಲ್ಲೋದಹಳ್ಳಿ ಕಾಳೇಶ್, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕು ಅಧ್ಯಕ್ಷ ಮಾಸಡಿ ಬರಮಪ್ಪ, ದಾವಣಗೆರೆ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್, ಜಿಲ್ಲೆಯ ವಿವಿಧ ಭಾಗದ ಮುಖಂಡರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ...

ಕಲಬುರಗಿ | ಬೆಳೆ ಹಾನಿ: ಎಕರೆಗೆ 25 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಎಐಕೆಕೆಎಂಎಸ್‌ ಪ್ರತಿಭಟನೆ

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಬಿಡುಗಡೆ...

ಚಿಕ್ಕಬಳ್ಳಾಪುರ | ಮಂತ್ರಾಲಯದಲ್ಲಿ ಡಾ.ಕೈವಾರ ಶ್ರೀನಿವಾಸ್‌ರವರಿಗೆ ಕನ್ನಡಸಿರಿ ಪ್ರಶಸ್ತಿ ಪ್ರದಾನ

ಮಂತ್ರಾಲಯದ ಸದ್ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಪ್ರಪ್ರಥಮ ಅಂತಾರಾಜ್ಯ ಕನ್ನಡ...

ಕೋಲಾರ | ರಸ್ತೆ ವಿಸ್ತರಣೆಗೆ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ; ಕುರ್ಕಿ ರಾಜೇಶ್ವರಿ ಆರೋಪ

ಕೋಲಾರ ತಾಲೂಕಿನ ನರಸಾಪುರ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ...

Download Eedina App Android / iOS

X