ಮದುವೆ ಲಗ್ನ ಪತ್ರಿಕೆಯ ಮೂಲಕ ರಾಜಕೀಯ ಪ್ರಚಾರ ಮಾಡಲು ಹೊರಟ ವರನೊಬ್ಬನಿಗೆ ಈಗ ಸಂಕಷ್ಟ ಎದುರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಮದುವೆ ನರನ ವಿರುದ್ಧ ದೂರು ದಾಖಲಿಸಿದ್ದಾರೆ.
ಮದುವೆ ವರನಿಗೆ ಇವೆಲ್ಲ ಕಾರಣವಾಗಿದ್ದು ಮೋದಿಗೆ ಮತ ಹಾಕಿ ಎಂಬ ಅಡಿಬರಹ.’ ನೀವು ದಂಪತಿಗೆ ಅತ್ಯುತ್ತಮವಾದ ಉಡುಗೊರೆ ನೀಡುವುದೆಂದರೆ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಚುನಾಯಿಸುವುದು” ಎಂದು ಲಗ್ನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು.
ಪೊಲೀಸ್ ವರದಿಯ ಪ್ರಕಾರ ವರನ ಸಂಬಂಧಿಕರೊಬ್ಬರು ಈ ಅಡಿಬರಹ ಮುದ್ರಿಸಿರುವುದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಾಟ್ಸ್ಯಾಪ್ ಯೂನಿವರ್ಸಿಟಿಯ ಭಕ್ತರೂ ಮತ್ತು ಮಹಾಪ್ರಭು ಮೋದಿಯೂ
ದೂರಿನ ಆಧಾರದ ಮೇಲೆ ಚುವಾವಣಾ ಆಯೋಗದ ಅಧಿಕಾರಿಗಳು ಪುತ್ತೂರು ತಾಲೂಕಿನಲ್ಲಿರುವ ವರನ ಮನೆಗೆ ಏ.14ರಂದು ಭೇಟಿ ನೀಡಿದ್ದರು. ಮದುವೆ ಗಂಡು ಮಾರ್ಚ್ 1ರಂದು ಚುನಾವಣೆ ದಿನಾಂಕವನ್ನು ಪ್ರಕಟಿಸುವ ಮುನ್ನವೇ ಲಗ್ನ ಪತ್ರಿಕೆಯನ್ನು ಮುದ್ರಿಸಿದ್ದೇವೆ. ಮೋದಿ ಮೇಲಿನ ಪ್ರೀತಿಯಿಂದಾಗಿ ಈ ರೀತಿ ಮಾಡಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ್ದ.
ವರನ ಹೇಳಿಕೆಯ ಹೊರತಾಗಿಯೂ ಚುನಾವಣಾ ಆಯೋಗದ ಅಧಿಕಾರಿಗಳು ಉಪ್ಪಿನಂಗಡಿಯ ಪೊಲೀಸ್ ಠಾಣೆಗೆ ಏ.26 ರಂದು ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಿಸಲಾಗಿದೆ. ಲಗ್ನ ಪತ್ರಿಕೆಯನ್ನು ಮುದ್ರಿಸಿಕೊಟ್ಟ ಪ್ರಿಂಟಿಂಗ್ ಪ್ರೆಸ್ ಮಾಲೀಕನು ಕೂಡ ನೀತಿ ಸಂಹಿತೆಯ ಉಲ್ಲಂಘನೆ ಕಾರಣನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ವಿಚಾರವೆಂದರೆ ಮದುವೆ ಏಪ್ರಿಲ್ 18 ರಂದು ಮುಗಿದು ಹೋಗಿದೆ.
