ವಿಜಯಪುರ | ದೇಶ ಭಕ್ತಿಯನ್ನು ಬಿಜೆಪಿಯವರಿಗೆ, ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ: ಶಾಸಕ ಲಕ್ಷ್ಮಣ ಸವದಿ

Date:

Advertisements

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾದಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶ ಉಳಿಸಿ ಬೆಳೆಸಿದವರ ಕೊಡುಗೆ ಬಹಳವಿದೆ. ಈಗ ಹತ್ತು ವರ್ಷದಿಂದ ದೇಶ ಪ್ರೇಮವನ್ನು ಕಲಿಸಿಕೊಡಲಾಗುತ್ತಿದೆ. ಮೋದಿಯವರ ರೊಟ್ಟಿ ತವೆ ಮೇಲೆ ಹೊತ್ತುತ್ತಿದೆ. ಅದನ್ನು ತಿರುವಿ ಹಾಕಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ನಾವು ಬಿಜೆಪಿಯಲ್ಲಿದ್ದಾಗ ಏನೇನೊ ಹೇಳಿ ತಲೆ ಕೆಡಿಸಲಾಗುತ್ತಿತ್ತು. ಆರ್‌ಎಸ್‌ಎಸ್ ಮೂಲದವರಿಂದ ನಮಗೆ ಭಾಷಣ ಹೇಗೆ ಮಾಡಬೇಕು ಎಂದು ಕಲಿಸಲಾಗುತ್ತಿತ್ತು. ಇದನ್ನು ನಂಬಿ ನಾವು ಸ್ವಿಸ್ ಬ್ಯಾಂಕ್, ದೇಶದ ಸಾಲ, ಅಕೌಂಟಿಗೆ ಹದಿನೈದು ಲಕ್ಷ, ಚಿನ್ನದ ರೋಡು  ಅಂತೆಲ್ಲ ಮಾತಾಡುತ್ತಿದ್ದೆವು. ಇದೆಲ್ಲ ಅವರ ರಾಷ್ಟ್ರ ಭಕ್ತಿ. ಅದು ಸುಳ್ಳಿನ ಬುಲೆಟ್ ಟ್ರೇನಾಗಿತ್ತು. ಆ ಭ್ರಮೆಯಿಂದ ನಾವೆಲ್ಲ ಹೊರ ಬಂದೆವು. ನೀವೂ ಕೂಡ ಬಿಜೆಪಿ ಬಿತ್ತಿರುವ ಸುಳ್ಳುಗಳಿಂದ ಹೊರಗೆ ಬನ್ನಿ ಎಂದು ಹೇಳಿದರು.

Advertisements

ರಾಜ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ಹೇಳಿದಂತೆ ನಡೆದುಕೊಂಡಿದೆ. ಈ ಬೆಲೆ ಏರಿಕೆ ಬೇಗುದಿಯಿಂದ ಹೊರಬರಲು ಸಾಮಾನ್ಯರಿಗೆ ಸಾಧ್ಯವಾಗಿದೆ. ನೀವು ರಾಜು ಆಲಗೂರರಿಗೆ ಓಟು ಹಾಕಿ ಎನ್ನಲು ನಮಗೆ ನೈತಿಕ ಹಕ್ಕಿದೆ. ನಿಮ್ಮ ಕಡೆ ಬರದೇ ಇದ್ದ ಜಿಗಜಿಣಗಿಯವರಿಗಿಂತ ನಮ್ಮ ಅಭ್ಯರ್ಥಿ ಅಭಿವೃದ್ಧಿ ಪರ ಚಿಂತಕರಾಗಿದ್ದಾರೆ. ನೀವು ಈ ಸಲ ಬದಲಾವಣೆ ತನ್ನಿ, ದೇಶದಲ್ಲೂ ಬದಲಾವಣೆ ಖಂಡಿತ ಆಗಲಿದೆ. ಯಾವ ಕೆಲಸವೂ ಮಾಡದೇ ಇರುವ ಕಾರಣ ಮೋದಿಯವರ ವರ್ಚಸ್ಸು ಮುಗಿದಿದೆ ಎಂದು ಹೇಳಿದರು.

ಪಕ್ಷದ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಮಾತನಾಡಿ, ರಾಜ್ಯದ ಸಿದ್ದರಾಮಯ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಬಹು ದೊಡ್ಡ ಕೆಲಸ ಮಾಡಲಾಗಿದೆ. ನಾವು ಬಸವ ನಾಡಿನವರು, ಕಾಂಗ್ರೆಸ್ ಪಕ್ಷ ಕೂಡ ಬಸವಣ್ಣನವರ ಹಾದಿಯಲ್ಲಿ ನಡೆಯುತ್ತಿದ್ದು, ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಶ್ರಮಿಸುತ್ತಿದ್ದೇವೆ. ಈಗಿನ ಕೇಂದ್ರ ಸರ್ಕಾರದ ಮೋದಿ ಹಾಗೂ ಇಲ್ಲಿನ ಸಂಸದ ಜಿಗಜಿಣಗಿಯವರು ಏನೊಂದು ಕೆಲಸ ಮಾಡಿಲ್ಲ. ಬರೀ ಅಧಿಕಾರದಲ್ಲಿ ಇದ್ದದ್ದೇ ಇವರ ಸಾಧನೆಯಾಗಿದೆ. ಮೂರು ಸಲ ಸಂಸದರಾದರೂ ಜಿಲ್ಲೆ ಹಾಗೇ ಉಳಿದಿದೆ. ಈ ಬಾರಿ ಬದಲಾವಣೆ ತಂದರೆ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧ ಎಂದರು.

ಸ್ಥಳೀಯ ಶಾಸಕ ಅಶೋಕ ಮನಗೂಳಿ ಮಾತನಾಡಿ, ಈ ಜಿಲ್ಲೆಗೆ ನೀರಾವರಿ ಸೇರಿದಂತೆ ಕಾಂಗ್ರೆಸ್ ಬಹುಪಾಲು ಕೆಲಸವನ್ನು ಮಾಡಿದೆ. ಗ್ಯಾರಂಟಿಗಳ ಮೂಲಕ ಹೆಣ್ಣುಮಕ್ಕಳ, ಸಾಮಾನ್ಯ ಜನರ ಬಾಳು ಬೆಳಗಲಾಗಿದೆ. ಅದೇ ರೀತಿ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬಕ್ಕೆ ಲಕ್ಷ ರೂ, ರೈತರ ಸಾಲ ಮನ್ನಾ ಹಾಗೂ ಬೆಳೆದ ಬೆಳೆಗೆ ಒಂದೇ ಬೆಲೆ ನಿಗದಿ ಕಾರ್ಯಗಳು ಆಗಲಿವೆ. ನಮ್ಮವರೇ ಸಂಸದರಾದರೆ ಜಿಲ್ಲೆಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಮಾತನಾಡಿ, ಕಾಂಗ್ರೆಸ್‌ಗೆ ಯಾಕೆ ಮತ ನೀಡಬೇಕು ಎಂದು ತಿಳಿ ಹೇಳುತ್ತ ನಮಗೆ ಕೆಲಸ ಮಾಡುವ ಸಂಸದ ಬೇಕು. ಮೋದಿಯವರ ಸಾಧನೆ ಶೂನ್ಯವಾಗಿರುವಾಗ ಅವರ ಮುಖ ನೋಡಿ ಹೇಗೆ ಮತ ನೀಡಬೇಕು ಎಂದು ಕೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪ್ರಾಸ್ತಾವಿಕ ಮಾತನಾಡಿ, ಜಿಗಜಿಣಗಿಯವರು ನಿಷ್ಕ್ರಿಯ ಸಂಸದರಾಗಿ ಹೆಸರು ಮಾಡಿದ್ದಾರೆ. ಒಂದು ಗ್ರಾಮವನ್ನು ದತ್ತು ಪಡೆದು ಅದನ್ನೂ ಉದ್ಧಾರ ಮಾಡದೇ ಹೋದರು. ಈ ಸಲ ಆಲಗೂರವರ ಜಯ ನಿಶ್ಚಿತ ಎಂದರು.

ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ಸಿದ್ದಗೊಂಡ ಪೂಜಾರಿ, ಜಕ್ಕಪ್ಪ ಹತ್ತಳ್ಳಿ, ಮಲ್ಲಣ್ಣ ಸಾಲಿ, ಕಾಮೇಶ ಉಕ್ಕಲಿ, ಗುರಣ್ಣಗೌಡ ಪಾಟೀಲ, ಶ್ರೀಮಂತ ಲೋಣಿ, ಅಪ್ಪಣ್ಣ ಕಲ್ಲೂರ, ಮಹಾದೇವ ಗಡ್ಡದ, ರವಿಕುಮಾರ ಚವ್ಹಾಣ, ಸುರೇಶ ಗೊಣಸಗಿ, ಸಾದಿಕ್ ಸುಂಬಡ, ಚಿಕ್ಕಪ್ಪ, ಸಿದ್ದು ಹತ್ತಳ್ಳಿ, ಬಿ.ಎಂ.ಪಾಟೀಲ, ಅಶೋಕ ಲಾಗಲೋಟಿ ಸೇರಿದಂತೆ ಅನೇಕರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X