- ಅಪಘಾತಗಳನ್ನು ಕಡಿಮೆ ಮಾಡಿ, ಅತ್ಯಮೂಲ್ಯವಾದ ಜೀವ ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ರ‍್ಯಾಪಿಡೋ
- ರ‍್ಯಾಪಿಡೋ ತನ್ನ ಅಭಿಯಾನದ ಭಾಗವಾಗಿ, ಬೆಂಗಳೂರಿನಲ್ಲಿ ಆಟೋಗಳನ್ನು ಸೀಟ್ ಬೆಲ್ಟ್‌ಗಳೊಂದಿಗೆ ಸಜ್ಜುಗೊಳಿಸುತ್ತಿದೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೆ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಮೂರು ತಿಂಗಳಿನಲ್ಲಿ 205 ಮಂದಿ ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದಾರೆ. ನಗರದಲ್ಲಿರುವ ಕೆಟ್ಟ ರಸ್ತೆಗಳು, ಅತಿ ವೇಗದ ಚಾಲನೆ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದು ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆ ಮಾಡದಿರುವುದು ಅಪಘಾತಗಳಿಗೆ ಕಾರಣವಾಗಿದೆ.
ಈ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಭಾರತದ ಪ್ರಮುಖ ಆಟೋ-ಟೆಕ್ ಅಗ್ರಿಗೇಟರ್ ಆಗಿರುವ ರ‍್ಯಾಪಿಡೋ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ #RapidoSafetyFirst ಎಂಬ ರಾಷ್ಟ್ರವ್ಯಾಪಿ ಸುರಕ್ಷತಾ ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ರ‍್ಯಾಪಿಡೋದ ದೈನಂದಿನ ರೈಡ್ ಸುರಕ್ಷತಾ ವೈಶಿಷ್ಟ್ಯಗಳನ್ನು ರಾಷ್ಟ್ರವ್ಯಾಪಿ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದೆ ಹಾಗೂ ಬೆಂಗಳೂರಿನ ಆಟೋ ರಿಕ್ಷಾಗಳಿಗೆ ಸೀಟ್ ಬೆಲ್ಟ್‌ಗಳನ್ನು ಅಳವಡಿಸುವುದಾಗಿ ಹೇಳಿದೆ.
ಅಪಘಾತಗಳನ್ನು ಕಡಿಮೆ ಮಾಡಿ, ಅತ್ಯಮೂಲ್ಯವಾದ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರ‍್ಯಾಪಿಡೋ ಈ ಹೆಜ್ಜೆ ಇಟ್ಟಿದೆ.
ರ‍್ಯಾಪಿಡೋ ತನ್ನ ಅಭಿಯಾನದ ಭಾಗವಾಗಿ, ಬೆಂಗಳೂರಿನಲ್ಲಿ ಆಟೋಗಳನ್ನು ಸೀಟ್ ಬೆಲ್ಟ್‌ಗಳೊಂದಿಗೆ ಸಜ್ಜುಗೊಳಿಸುತ್ತಿದೆ. ನಗರದಲ್ಲಿ ಅಧಿಕ ಜನದಟ್ಟಣೆ, ವಾಹನದಟ್ಟಣೆ ಇರುವಂತಹ ಪ್ರದೇಶಗಳಲ್ಲಿ ಹಠಾತ್ ನಿಲುಗಡೆಗಳು ಅಥವಾ ಘರ್ಷಣೆಯ ಸಮಯದಲ್ಲಿ ಅಪಘಾತಗಳು, ಸಾವುಗಳು ಮತ್ತು ಗಾಯಗಳ ಅಪಾಯದಿಂದ ಪ್ರಯಾಣಿಕರನ್ನು ಸೀಟ್‌ಬೆಲ್ಟ್ ರಕ್ಷಿಸುತ್ತದೆ ಎಂದು ರ‍್ಯಾಪಿಡೋ ಕಂಪನಿ ತಿಳಿಸಿದೆ.
“ಪ್ರಯಾಣಿಕರ ಸುರಕ್ಷತೆಗಾಗಿ ರ‍್ಯಾಪಿಡೋ ತನ್ನ ಚಾಲಕರನ್ನು ಆಯ್ಕೆ ಮಾಡುವಾಗ 4 ಹಂತಗಳಲ್ಲಿ ಚಾಲಕರ ಹಿನ್ನೆಲೆ, ನಿಯಮಿತ ವಾಹನ ತಪಾಸಣೆ ಪರಿಶೀಲಿಸಿ ಆಯ್ಕೆ ಮಾಡಲಾಗುವುದು. ಮಹಿಳಾ ಪ್ರಯಾಣಿಕರ ವಿಳಾಸಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಲೈವ್ ರೈಡ್ ಟ್ರ್ಯಾಕಿಂಗ್ ಹಾಗೂ ರೈಡ್‌ಗಳಿಗೆ 24/7 ಆನ್-ಗ್ರೌಂಡ್ ಬೆಂಬಲವನ್ನು ನೀಡುವುದಾಗಿ” ರ‍್ಯಾಪಿಡೋ ಕಂಪನಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ರಸ್ತೆ ಅಪಘಾತ | ಮೂರು ತಿಂಗಳಿನಲ್ಲಿ 205 ಮಂದಿ ಸಾವು
“ಸುರಕ್ಷತಾ ಅಭಿಯಾನಕ್ಕೆ ಸಾರ್ವಜನಿಕರ ಬೆಂಬಲ ಅಗತ್ಯ. ಆಟೋಗಳಲ್ಲಿ ನೀಡಿರುವ ಸೀಟ್ ಬೆಲ್ಟ್‌ಗಳನ್ನು ಧರಿಸಿ ನಮ್ಮ ಅಭಿಯಾನಕ್ಕೆ ಬೆಂಬಲ ನೀಡಿ” ಎಂದು ರ‍್ಯಾಪಿಡೋ ಸಂಸ್ಥೆ ಮನವಿ ಮಾಡಿದೆ.
ರಾಪಿಡೋ ಆಟೋ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಮಾತನಾಡಿ, “ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ರಸ್ತೆ ಸುರಕ್ಷತೆ ನಮ್ಮ ಪ್ರಮುಖ ಕಾಳಜಿಯಾಗಿದೆ. ರಸ್ತೆ ಸುರಕ್ಷತೆಯ ಮಹತ್ವ ಮತ್ತು ಜಾಗೃತಿಯನ್ನು ಉತ್ತೇಜಿಸಲು, ಅಪಘಾತಗಳು, ಸಾವು-ನೋವು ಕಡಿಮೆ ಮಾಡಲು ರ‍್ಯಾಪಿಡೋ ಈ ಅಭಿಯಾನವನ್ನು ಪರಿಚಯಿಸುತ್ತಿದೆ. ಮುಖ್ಯವಾಗಿ #RapidoSafetyFirst ಅಭಿಯಾನವು ಗ್ರಾಹಕರ ಡೇಟಾ ಮತ್ತು ಸುರಕ್ಷತೆಗಾಗಿ ಸೀಟ್ ಬೆಲ್ಟ್ ಜೊತೆಗೆ 360 ಡಿಗ್ರಿ ಪರಿಹಾರಗಳನ್ನು ಒಳಗೊಂಡಿದೆ” ಎಂದರು.