ಮೊದಲ ಹಾಗೂ ಎರಡನೇ ಹಂತದ ಶೇಕಡವಾರು ಮತದಾನದ ವಿವರಗಳನ್ನು ಗಮನಾರ್ಹವಾಗಿ ತಡ ಮಾಡಿದ ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಶೇಕಡವಾರನ್ನು ಚುನಾವಣೆ ನಡೆದ 11 ದಿನದ ನಂತರ ಏಕೆ ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕರ ದೃಷ್ಟಿಯಲ್ಲಿ ಆಯೋಗದ ವಿಶ್ವಾರ್ಹತೆ ಹಾಗೂ ಸಕಾಲಿಕ ಮಾಹಿತಿ ಮುಖ್ಯವಾಗಿದೆ ಎಂದು ತಿಳಿಸಿದರು.
“ಇವಿಎಂ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧಾರ ಪ್ರಕಟಿಸಿದ್ದು, ಪ್ರತಿ ನಾಗರಿಕನು ಚುನಾವಣಾ ಆಯೋಗದ ಮೇಲೆ ನಂಬಿಕೆಯಿಡಬೇಕು ಎಂದು ಕೋರ್ಟ್ ಹೇಳಿದೆ. ಆದರೆ ಆಯೋಗವು ನಂಬಿಕಾರ್ಹವಾಗಿದೆಯೆ? ಮೊದಲ ಹಂತದ ಮತದಾನ ನಡೆದ 11 ದಿನಗಳ ನಂತರ ಚುನಾವಣಾ ಆಯೋಗವು ಮತದಾನದ ಶೇಕಡವಾರು ಅಂಕಿಅಂಶಗಳನ್ನು ಪ್ರಕಟಿಸಿದೆ. ಇದು ಕೇವಲ ಶೇಕಡವಾರನ್ನು ಪ್ರಕಟಿಸಲಾಗಿದೆ. ಅಂಕಿಅಂಶ ಪ್ರಕಟಿಸಲಾಗಿಲ್ಲ. ಚುನಾವಣಾ ಆಯೋಗವು ಏಕೆ 11 ದಿನದ ನಂತರ ಪ್ರಕಟಿಸಲಾಗಿದೆ ಎಂಬುದಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೋಟಾವನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಲು ಇದು ಸಕಾಲ
“ನಾನು ಹಿಂದಿನ ಚುನಾವಣಾ ಆಯೋಗದ ಆಯುಕ್ತರ ಜೊತೆ ಮಾತನಾಡಿದ್ದು, ಅವರು ಹೇಳಿಕೆಯ ಪ್ರಕಾರ ಮತದಾನ ಮುಗಿನ ನಂತರ ಅಂದಿನ ರಾತ್ರಿ ಅಥವಾ ಮರುದಿನ ಪ್ರಕಟಿಸಬೇಕು ಎಂದು ಹೇಳಿದ್ದರು. ಮತ್ತೆ 11 ದಿನಗಳ ತಡವೇಕೆ. ಅನುಮಾನಗಳು ಹುಟ್ಟಿಕೊಂಡರೆ ಜನರ ನಂಬಿಕೆಯೂ ಕಡಿಮೆಯಾಗುತ್ತದೆ” ಎಂದು ಕಪಿಲ್ ಸಿಬಲ್ ಆಯೋಗದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಈ ನಡುವೆ ಸುಪ್ರೀಂ ಕೋರ್ಟ್ ಕಳೆದ ವಾರ ಇವಿಎಂ ಮೂಲಕ ಮತದಾನ ಮಾಡಿದ ನಂತರ ವಿವಿಪ್ಯಾಡ್‌ನಲ್ಲಿ ಪರಿಶೀಲನಾ ಚೀಟಿಗಾಗಿ ಪ್ರಶ್ನಿಸಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು. ಅಲ್ಲದೆ ಮತಚೀಟಿಯ ಮೂಲಕ ನಡೆಯುವ ಮತದಾನಕ್ಕೂ ನಿರಾಕರಿಸಿತ್ತು.
ಚುನಾವಣಾ ಆಯೋಗವು ಏ.30 ರಂದು ಮೊದಲ ಹಂತದಲ್ಲಿ ಶೇ.66.14 ಹಾಗೂ ಎರಡನೇ ಹಂತದಲ್ಲಿ ಶೇ.66.71 ರಷ್ಟು ಮತದಾನವಾಗಿದೆ ಎಂದು ಪ್ರಕಟಣೆ ಹೊರಡಿಸಿತ್ತು.
