ಸಮೂಹ ಅತ್ಯಾಚಾರಿ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನಿಗೆ ಜರ್ಮನಿಗೆ ಹಾರಲು ಸಹಾಯ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಮಹಿಳೆಯರಿಗೂ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.
ಶಿವಮೊಗ್ಗದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅವರು, ದೇಶದ ಎಲ್ಲ ಸಂಸ್ಥೆಗಳ ನಿಯಂತ್ರಣ ಹೊಂದಿರುವ ನರೇಂದ್ರ ಮೋದಿ ಅವರು ಪ್ರಜ್ವಲ್ ರೇವಣ್ಣಗೆ ಜರ್ಮನಿಗೆ ಹೋಗಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು.
“ಇದು ಲೈಂಗಿಕ ಹಗರಣವಲ್ಲ, ಇದೊಂದು ಸಮೂಹ ಅತ್ಯಾಚಾರ. 400 ಮಹಿಳೆಯರನ್ನು ಅತ್ಯಾಚಾರ ಮಾಡಿರುವ ಪ್ರಜ್ವಲ್‌ಗೆ ಮೋದಿ ಚುನಾವಣಾ ಪ್ರಚಾರ ಮಾಡಿರುವುದು ನಾಚಿಕೆಗೇಡು” ಎಂದು ಛೀಮಾರಿ ಹಾಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೋಟಾವನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಲು ಇದು ಸಕಾಲ
ಬಿಜೆಪಿ ಸಮೂಹ ಅತ್ಯಾಚಾರಿಯನ್ನು ರಕ್ಷಿಸುತ್ತಿದೆ.ಇದು ಮೋದಿಯ ಗ್ಯಾರಂಟಿ. ಆದರೆ ಕಾಂಗ್ರೆಸ್ ಅತ್ಯಾಚಾರಿಯ ವಿರುದ್ಧ ಕ್ರಮ ಕೈಗೊಳ್ಳಲಿದೆ. ದೇಶದ ಇತಿಹಾಸದಲ್ಲಿಯೇ ಯಾವ ಪ್ರಧಾನಿಯೂ ಸಮೂಹ ಅತ್ಯಾಚಾರಿಯ ಪರವಾಗಿ ಮತದಾರರ ಬೆಂಬಲ ಕೇಳಿರಲಿಲ್ಲ. ಆದರೆ ಮತಯಾಚಿಸಿರುವ ನರೇಂದ್ರ ಮೋದಿ ದೇಶದ ಮಹಿಳೆಯರನ್ನು ಅವಮಾನಿಸಿದ್ದಾರೆ. ಹಾಗಾಗಿ ಮೋದಿ ಮಹಿಳೆಯರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
“ಒಂದು ವೇಳೆ ಸಂವಿಧಾನ ಬದಲಾದರೆ ದಲಿತರು, ಒಬಿಸಿಗಳು ತಮ್ಮ ಜಮೀನುಗಳನ್ನು ಕಳೆದುಕೊಳ್ಳಲಿದ್ದಾರೆ. ಹಿಂದುಳಿದ ವರ್ಗದವರು ಇಂದು ರಾಜಕೀಯ ಅಧಿಕಾರ ಪಡೆದಿದ್ದರೆ ಅದಕ್ಕೆ ಭಾರತೀಯ ಸಂವಿಧಾನ ಕಾರಣ.ಬಿಜೆಪಿಯವರು ಎಸ್‌ಸಿ, ಎಸ್‌ಟಿ ಅವರ ಮೀಸಲಾತಿಯನ್ನು ನೀಡಲು ಬಯಸುತ್ತಿಲ್ಲ. ಅವರು ಅದನ್ನು ನಿಷೇಧಿಸುತ್ತಾರೆ. ಆದರೆ ಕಾಂಗ್ರೆಸ್ ಯಾವಾಗಲು ಸಂವಿಧಾನವನ್ನು ರಕ್ಷಿಸುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಜನರಿಂದ ಮತಯಾಚಿಸಿದ ರಾಹುಲ್ ಅವರು, ಪಕ್ಷವು ಅಧಿಕಾರಕ್ಕೆ ಬಂದರೆ ದೇಶದ ಬಡ ಕುಟುಂಬಗಳ ಮಹಿಳೆಯರಿಗೆ ಒಂದು ಲಕ್ಷ ರೂ. ಒಳಗೊಂಡು ಐದು ಗ್ಯಾರಂಟಿ ನೀಡುವುದಾಗಿ ಭರವಸೆ ನೀಡಿದರು.
