ರೋಹಿತ್ ವೇಮುಲಾ ಪ್ರಕರಣದ ‘ಫೈಲ್ ಕ್ಲೋಸ್’ ಮಾಡಿದ ಪೊಲೀಸರು; ಆರೋಪಿಗಳಿಗೆ ‘ಕ್ಲೀನ್ ಚಿಟ್’

Date:

Advertisements

ವಿಶ್ವವಿದ್ಯಾಲಯದ ಕಿರುಕುಳ, ಮಾನಸಿಕ ಹಿಂಸೆಯಿಂದಾಗಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ರೋಹಿತ್ ವೇಮುಲಾ ಸಾವಿನ ಪ್ರಕರಣವನ್ನು ತೆಲಂಗಾಣ ಪೊಲೀಸರು ಖುಲಾಸೆ ಮಾಡುವ ವರದಿ ಸಲ್ಲಿಸಿದ್ದಾರೆ. ಪ್ರಕರಣದ ಆರೋಪಿಗಳಿಗೆ ಕ್ಲೀನ್‌ ಚಿಟ್ ನೀಡಿದ್ದಾರೆ.

ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಸ್ಕಾಲರ್‌ಶಿಪ್‌ಅನ್ನು ತಡೆಹಿಡಿಯಲಾಗಿತ್ತು. ಅಲ್ಲದೆ, ಹಾಸ್ಟೆಲ್‌ನಿಂದ ಹೊರ ಹಾಕಲಾಗಿತ್ತು. ಹಲವಾರು ದಿನಗಳ ಕಾಲ ಕ್ಯಾಂಪಸ್‌ನಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದ ರೋಹಿತ್ ವೇಮುಲಾ 2016ರ ಜನವರಿಯಲ್ಲಿ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಗೆ ಆಗಿನ ಸಿಕಂದರಾಬಾದ್ ಸಂಸದ ಬಂಡಾರು ದತ್ತಾತ್ರೇಯ, ವಿಧಾನ ಪರಿಷತ್ ಸದಸ್ಯ ಎನ್ ರಾಮಚಂದರ್ ರಾವ್ ಮತ್ತು ಉಪಕುಲಪತಿ ಅಪ್ಪಾ ರಾವ್, ಎಬಿವಿಪಿ ಮುಖಂಡರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕಾರಣವೆಂದು ಆರೋಪಿಸಲಾಗಿತ್ತು.

ಇದೀಗ, ಮೇ 3ರಂದು ತೆಲಂಗಾಣ ಹೈಕೋರ್ಟ್‌ಗೆ ತೆಲಂಗಾಣ ಪೊಲೀಸರು ಮುಕ್ತಾಯದ (ಫೈಲ್ ಕ್ಲೋಸ್) ವರದಿ ಸಲ್ಲಿಸಿದ್ದಾರೆ. ಎಲ್ಲ ಆರೋಪಿಗಳಿಗೂ ಕ್ಲೀನ್‌ ಚಿಟ್‌ ನೀಡಬೇಕೆಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.

Advertisements
ವಿಶ್ವವಿದ್ಯಾಲಯದ ಹಾಸ್ಟೆಲ್‌ನಿಂದ ರೋಹಿತ್ ವೇಮೂಲರನ್ನು ಹೊರಹಾಕಲಾಗಿದ್ದ ಸಂದರ್ಭದ ಚಿತ್ರ
ವಿಶ್ವವಿದ್ಯಾಲಯದ ಹಾಸ್ಟೆಲ್‌ನಿಂದ ರೋಹಿತ್ ವೇಮೂಲರನ್ನು ಹೊರಹಾಕಲಾಗಿದ್ದ ಸಂದರ್ಭದ ಚಿತ್ರ

ಪೊಲೀಸರು ಸಲ್ಲಿಸಿರುವ ವರದಿಯಲ್ಲಿ, “ರೋಹಿತ್ ‘ಪರಿಶಿಷ್ಟ ಜಾತಿಗೆ ಸೇರಿದವನಲ್ಲ’. ತನ್ನ ನಿಜವಾದ ಜಾತಿಯ ಗುರುತು ಪತ್ತೆಯಾಗುತ್ತದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಊಹಿಸಲಾಗಿದೆ. ಆತನ ಕುಟುಂಬದ ಜಾತಿ ಪ್ರಮಾಣಪತ್ರಗಳನ್ನು ಯಾವುದೇ ಸಾಕ್ಷ್ಯವನ್ನು ನೀಡದೆ ನಕಲಿ ಮಾಡಲಾಗಿದೆ” ಎಂದು ಆರೋಪಿಸಲಾಗಿದೆ.

“ಪ್ರಕರಣವನ್ನು ಪ್ರಾಥಮಿಕವಾಗಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು SC/ST ದೌರ್ಜನ್ಯ ತಡೆ (POA) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಾಖಲಿಸಲಾಗಿದೆ, ಮುಚ್ಚುವಿಕೆಯ ವರದಿಯು ವೇಮುಲನ ಜಾತಿಯ ಬಗ್ಗೆ ಹೆಚ್ಚಾಗಿ ಚರ್ಚಿಸುತ್ತದೆಯೇ ಹೊರತು ಆತ್ಮಹತ್ಯೆಗೆ ಕಾರಣಗಳಲ್ಲ, ಅವರ ಆತ್ಮಹತ್ಯೆಗೆ ಯಾರೂ ಕಾರಣರಾಗಿರುವ ಬಗ್ಗೆ ಪುರವೆಗಳಿಲ್ಲ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ತಾನು ಪರಿಶಿಷ್ಟ ಜಾತಿಗೆ ಸೇರಿದವನಲ್ಲ ಎಂದು ರೋಹಿತ್ ತಿಳಿದಿದ್ದನು. ಆತನ ತಾಯಿ ಅವನಿಗೆ ಎಸ್‌ಸಿ ಪ್ರಮಾಣಪತ್ರವನ್ನು ಪಡೆದಿದ್ದರು ಎಂದು ಹೇಳುತ್ತದೆ. ಇದು ರೋಹಿತ್‌ನಲ್ಲಿ ನಿರಂತರವಾಗಿದ್ದ ಭಯದಲ್ಲಿ ಒಂದಾಗಿರಬಹುದು, ಏಕೆಂದರೆ ಇದು ಬಹಿರಂಗಗೊಂಡರೆ ಆತ ಕಾನೂನು ಕ್ರಮ ಎದುರಿಸುವ ಭೀತಿಯಲ್ಲಿದ್ದ” ಎಂದು ವರದಿಯಲ್ಲಿ ಪೊಲೀಸರು ಹೇಳಿದ್ದಾರೆ.

“ರಾಧಿಕಾ ವೇಮುಲಾ ಅವರು ಎಸ್‌ಸಿ ಮಾಲಾ ಜಾತಿಗೆ ಸೇರಿದವರು ಮತ್ತು ತಮ್ಮ ಬಾಲ್ಯದಿಂದಲೂ ವಡ್ಡರ ಒಬಿಸಿ ಕುಟುಂಬದಲ್ಲಿ ಮನೆ ಸಹಾಯಕರಾಗಿ ಬೆಳೆದರು. ರೋಹಿತ್ ಅವರ ತಂದೆ ಮಣಿಕುಮಾರ್ ಕೂಡ ವಡ್ಡರ ಸಮುದಾಯಕ್ಕೆ ಸೇರಿದವರಾಗಿದ್ದರು” ಎಂದು ಹೇಳಿದೆ.

“ರೋಹಿತ್ ಸ್ವಯಂ ಸಮಸ್ಯೆಗಳನ್ನು ಹೊಂದಿದ್ದ ಎಂದು ಹೇಳಲಾಗಿದೆ. ರೋಹಿತ್‌ ಅತ್ಯುತ್ತಮ ಶೈಕ್ಷಣಿಕ ಸಾಧನೆಯ ಹೊರತಾಗಿಯೂ, ಅಧ್ಯಯನಕ್ಕಿಂತ ಕ್ಯಾಂಪಸ್‌ನಲ್ಲಿ ರಾಜಕೀಯ ವಿಷಯಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವಂತೆ ತೋರುತ್ತಿದೆ ಎಂದು ಹೇಳಿದೆ. ವಿಶ್ವವಿದ್ಯಾಲಯದ ನಿರ್ಧಾರದಿಂದ ಅವರು ಕೋಪಗೊಂಡಿದ್ದರೆ, ಅವರು ಖಂಡಿತವಾಗಿಯೂ ನಿರ್ದಿಷ್ಟ ಪದಗಳಲ್ಲಿ ಬರೆಯುತ್ತಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ. ರೋಹಿತ್ ಸಾವಿಗೆ ಆ ಸಮಯದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಚಾಲ್ತಿಯಲ್ಲಿರುವ ಸನ್ನಿವೇಶಗಳು ಕಾರಣವಲ್ಲ” ಎಂದು ಪೊಲೀಸರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

“ರೋಹಿತ್ ಅವರ ತಾಯಿ ರಾಧಿಕಾ ವೇಮುಲಾ ಅವರನ್ನು ವಿಚಾರಣೆ ನಡೆಸುವಾಗ ತನಿಖಾ ಅಧಿಕಾರಿ (ಐಒ) ಜಾತಿಯ ಬಗ್ಗೆ ನಿರ್ಧರಿಸಲು ಕುಟುಂಬದ ಸದಸ್ಯರ ಮಾದರಿಗಳೊಂದಿಗೆ ಡಿಎನ್‌ಎ ಪರೀಕ್ಷೆಗೆ ಒಳಗಾಗಲು ಸಿದ್ಧರಿದ್ದೀರಾ ಎಂದು ಕೇಳಿದಾಗ ಅವರು ‘ಮೌನವಾಗಿದ್ದರು’ ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ ರೋಹಿತ್ ಮತ್ತು ಇತರ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್(ASA) ನಾಯಕರನ್ನು ಹಾಸ್ಟೆಲ್‌ಗಳಿಂದ ಹೊರಹಾಕಿರುವ ನಿರ್ಧಾರ ವಿಶ್ವವಿದ್ಯಾಲಯದ ಶಿಸ್ತಿನ ನಿಯಮಗಳಲ್ಲಿ ಸೂಚಿಸಲಾದ ಶಿಕ್ಷೆಗಳಲ್ಲಿ ಒಂದಾಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.

ಅಚ್ಚರಿ ಎಂದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳ ಬಳಿಕ ಈ ವರದಿ ಬಂದಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಮೇ 13ರಂದು ತೆಲಂಗಾಣ ಮತದಾನಕ್ಕೆ ಸಿದ್ದವಾಗುತ್ತಿದ್ದು, ಮತದಾನಕ್ಕೆ ಕೇವಲ 10 ದಿನಗಳ ಮೊದಲು ವರದಿಯನ್ನು ಬಿಡುಗಡೆ ಮಾಡಲಾಗಿದೆ. 2016ರಲ್ಲಿ ‘ಜಸ್ಟೀಸ್ ಫಾರ್ ವೇಮುಲಾ ಅಭಿಯಾನ’ಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರೋಹಿತ್ ವೇಮುಲಾ ಆಕ್ಟ್ ಎಂಬ ಕಾನೂನನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಅಲ್ಪಸಂಖ್ಯಾತರಿಗೆ “ಶಿಕ್ಷಣ ಮತ್ತು ಘನತೆಯ ಹಕ್ಕನ್ನು ಕಾಪಾಡಲು” ಜಾರಿಗೊಳಿಸುವುದಾಗಿ ಹೇಳಿದ್ದರು. ಇತ್ತೀಚಿನ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅವರು ರೋಹಿತ್ ಅವರ ತಾಯಿ ರಾಧಿಕಾ ವೇಮುಲಾ ಅವರನ್ನು ಕಾಂಗ್ರೆಸ್ ಸೇರಲು ಆಹ್ವಾನಿಸಿದ್ದರು.

ತೆಲಂಗಾಣ ಕಾಂಗ್ರೆಸ್ ಅಥವಾ ಕೇಂದ್ರದ ನಾಯಕರು ಪ್ರಕರಣವನ್ನು ಮುಚ್ಚುವ ವರದಿಗೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಎಸ್‌ಎ) ಮುಖಂಡರು ಮತ್ತು ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ಸೇರಿದಂತೆ ಅವರ ಸಂಬಂಧಿಕರನ್ನು ಸಂಪರ್ಕಿಸಿದಾಗ ಶುಕ್ರವಾರ ನ್ಯಾಯಾಲಯದ ವಿಚಾರಣೆಯವರೆಗೂ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X