1980ರ ದಶಕದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ನಿಂದ ಹೊಸ ಹೆಸರು ಪ್ರಕಟವಾಗಿದೆ. ಕಾಂಗ್ರೆಸ್ನ ಹಿರಿಯ ನಾಯಕರಾದ ಕಿಶೋರ್ ಲಾಲ್ ಶರ್ಮಾ ಅವರನ್ನು ಈ ಬಾರಿ ಕಣಕ್ಕಿಳಿಸಲಾಗಿದೆ.
1980 ರಲ್ಲಿ ಸಂಜಯ್ ಗಾಂಧಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸಿದ ನಂತರ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂಡ ಈ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ರಾಜೀವ್ ಗಾಂಧಿ ನಾಲ್ಕು 1981 ರಿಂದ 1991ರವರೆಗೆ 4 ಬಾರಿ, 1998ರಲ್ಲಿ ಸೋನಿಯಾ ಗಾಂಧಿ, 2004ರಿಂದ 2014ರ ವರೆಗೆ ರಾಹುಲ್ ಗಾಂಧಿ ಆಯ್ಕೆಯಾಗಿದ್ದರು.
ಇಂದಿರಾ ಗಾಂಧಿ ಕುಟುಂಬದ ಹೊರತಾಗಿ 1991 ಹಾಗೂ 1996ರಲ್ಲಿ ಸತೀಶ್ ಶರ್ಮಾ ಹೊರತುಪಡಿಸಿದರೆ,1998ರಲ್ಲಿ ಬಿಜೆಪಿಯಿಂದ ಸಂಜಯ್ ಸಿನ್ಹಾ ಹಾಗೂ 2019ರಲ್ಲಿ ಸ್ಮೃತಿ ಇರಾನಿ ಗೆಲುವು ಸಾಧಿಸಿದ್ದರು.
2019ರವರೆಗೂ ಅಮೇಥಿ ಪ್ರತಿನಿಧಿಸಿದ್ದ ರಾಹುಲ್ ಗಾಂಧಿ ಈ ಬಾರಿ ತಮ್ಮ ಕ್ಷೇತ್ರವನ್ನು ರಾಯ್ಬರೇಲಿಗೆ ಬದಲಾಯಿಸಿದ್ದಾರೆ. ಅಲ್ಲದೆ ಕೇರಳದ ವಯನಾಡುವಿನಿಂದಲೂ ಎರಡನೇ ಬಾರಿ ಸ್ಪರ್ಧೆಗಿಳಿದಿದ್ದಾರೆ. ಮೊದಲ ಬಾರಿಗೆ ಕಣಕ್ಕಿಳಿದಿರುವ ಕಿಶೋರ್ ಲಾಲ್ ಶರ್ಮಾ ಹೊರಗಿವನರಿಗೆ ಹೊಸ ಪರಿಚಯವಾದರೂ ಅಮೇಥಿ ಹಾಗೂ ರಾಯ್ಬರೇಲಿಯ ಜನತೆಗೆ ಹಳೆಯ ಪರಿಚಯ.
ಈ ಸುದ್ದಿ ಓದಿದ್ದೀರಾ? ಲೋಕಸಭೆ ಚುನಾವಣೆ | ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆಎಲ್ ಶರ್ಮಾ ಕಣಕ್ಕೆ
ಕಿಶೋರ್ ಲಾಲ್ ಶರ್ಮಾ ಅವರು ಕಳೆದ 4 ದಶಕಗಳಿಂದ ಗಾಂಧಿ ಕುಟುಂಬಕ್ಕೆ ಅತ್ಯಂತ ಪರಮಾಪ್ತರು. ಮೂಲತಃ ಪಂಜಾಬ್ನ ಲೂಧಿಯಾನದವರಾದ ಕಿಶೋರ್ ಲಾಲ್ ಅವರು ರಾಜೀವ್ ಗಾಂಧಿ ಜೊತೆಗೆ ರಾಯ್ಬರೇಲಿ ಹಾಗೂ ಅಮೇಥಿಗೆ 1983ರಲ್ಲಿ ಕಾಲಿಟ್ಟರು.
ಗಾಂಧಿ ಕುಟುಂಬದೊಂದಿಗೆ ಹೆಚ್ಚು ನಿಕಟ ಹೊಂದಿದ್ದರೂ 1991ರಲ್ಲಿ ರಾಜೀವ್ ಗಾಂಧಿ ಮೃತರಾದ ನಂತರ ಮತ್ತಷ್ಟು ಹತ್ತಿರವಾದರು. ಕಿಶೋರ್ ಅವರು ರಾಯ್ಬರೇಲಿ ಹಾಗೂ ಅಮೇಥಿ ಕ್ಷೇತ್ರಗಳ ಪ್ರಮುಖ ನಾಯಕರಾಗಿ ಉಸ್ತುವಾರಿ ಕೂಡ ನೋಡಿಕೊಳ್ಳುತ್ತಿದ್ದರು.
ಗಾಂಧಿ ಕುಟುಂಬ ಈ ಕ್ಷೇತ್ರಗಳಲ್ಲಿ ಇಲ್ಲದ ಸಂದರ್ಭದಲ್ಲಿ ಆಗಾಗ ಭೇಟಿ ನೀಡಿ ಪಕ್ಷದ ಕಾರ್ಯಚಟುವಟಿಕೆಗಳನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದರು. ರಾಹುಲ್, ಸೋನಿಯಾ ಕ್ಷೇತ್ರಕ್ಕೆ ಆಗಮಿಸಿದಾಗಲೂ ಅವರ ಜೊತೆ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಬಿಹಾರ ಹಾಗೂ ಪಂಜಾಬ್ನಲ್ಲೂ ಕೂಡ ಕಿಶೋರ್ ಲಾಲ್ ಶರ್ಮಾ ಕೆಲಸ ಮಾಡಿದ್ದಾರೆ. ಸೋನಿಯಾ ಗಾಂಧಿ ರಾಯ್ಬರೇಲಿಗೆ ಕ್ಷೇತ್ರ ಬದಲಾಯಿಸಿದ ನಂತರ ಅವರೂ ಕೂಡ ಸ್ಥಳಾಂತರಗೊಂಡರು.
ಕೆ ಪಿ ಶರ್ಮಾ ಅಮೇಥಿಯಿಂದ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸುವ ವೇಳೆ ಸುಮಾರು 50 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡು ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
ಅಮೆಥಿ ಹಾಗೂ ರಾಯ್ಬರೇಲಿಯಲ್ಲಿ ಮೇ. 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್ ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿ 17ರಲ್ಲಿ ಸ್ಪರ್ಧಿಸುತ್ತಿದೆ. ಉಳಿದ 63 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟದ ಸಮಾಜವಾದಿ ಪಕ್ಷ ಕಣಕ್ಕಿಳಿದಿದೆ.
BIG BREAKING ⚡
Over 50,000 people joined Congress candidate KL Sharma's nomination rally in Amethi today.
Out of syllabus nightmare for Smriti Irani, HUGE 😄🔥🔥#Amethi #Raebareli #RahulGandhi pic.twitter.com/gCZnVTURa1
— Ankit Mayank (@mr_mayank) May 3, 2024
