ಜಾನುವಾರುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ 15-20ಜನರ ಗುಂಪೊಂದು ದಾಳಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ.
ಬಂದೇನವಾಜ್ ಜಾತಗಾರ ಹಲ್ಲೆಗೊಳಗಾದವರು. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಭಜರಂಗದಳದವರು ಎಂದು ಹೇಳಲಾಗುತ್ತಿರುವ ವೀರೇಶ ಹಿರೇಮಠ, ರಾಜು ಬಿರಾದಾರ ಸೇರಿದಂತೆ 15-20 ಜನರು ಹಲ್ಲೆಗೈದು ಪರಾರಿಯಾಗಿದ್ದಾರೆ. ಗಾಯಾಳು ಬಂದೇನವಾಜ್ ಜಾತಗಾರರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗೂಡ್ಸ್ ವಾಹನದಲ್ಲಿ ಎರಡು ಹೋರಿ, ಒಂದು ಆಕಳು, ಒಂದು ಎಮ್ಮೆಯ ಕರ ತೆಗೆದುಕೊಂಡು ಹೋಗುವಾಗ ಈ ಹಲ್ಲೆ ನಡೆದಿದೆ. ಈ ಕುರಿತು ಬಬಲೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
