ಮಲ ವಿಸರ್ಜನೆಗೆ ಹೋಗಿದ್ದ ಹದಿಮೂರು ವರ್ಷದ ದಲಿತ ಸಮುದಾಯದ ಬಾಲಕಿಯ ದೇಹ ಸುಟ್ಟು ಕರಕಲಾಗಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಹರಯ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಬಾಲಕಿ ದೇಹ ಏಕೆ ಸುಟ್ಟು ಕರಕಲಾಗಿ ಪತ್ತೆಯಾಗಿರುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಶುಕ್ರವಾರ ಸಂಜೆ ಬಾಲಕಿಯು ಮಲ ವಿಸರ್ಜನೆಗೆ ತೆರಳಿದ್ದಾಳೆ. ಒಂದು ಗಂಟೆಯಾದರೂ ವಾಪಸ್ ಬರದಿದ್ದ ಕಾರಣ ಬಾಲಕಿಯ ಮನೆಯವರು ಹುಡುಕಲು ಶುರು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ರಾಡಿಯಲ್ಲಿ ಕಳೆದು ಹೋದದ್ದು ಹೆಣ್ಣಿನ ಘನತೆ ಅಷ್ಟೇ ಅಲ್ಲ, ʼಸಾಮಾಜಿಕ ಶೀಲʼ ಬೀದಿಗೆ ಬಿದ್ದಿದೆ
ಇದೇ ಸಮಯದಲ್ಲಿ ಕೆಲವು ಗ್ರಾಮಸ್ಥರು ಗ್ರಾಮದ ಹೊರಗಿನ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಬಾಲಕಿಯ ಮನೆಯವರಿಗೆ ತಿಳಿಸಿದ್ದಾರೆ. ಮನೆಯವರು ಸ್ಥಳಕ್ಕೆ ತಲುಪಿದ ನಂತರ ಬಾಲಕಿಯ ದೇಹ ಸುಟ್ಟು ಕರುಕಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೀಶ್ ಕುಮಾರ್ ತಿಳಿಸಿದ್ದಾರೆ.
ಬಾಲಕಿಯ ಸುಟ್ಟ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
