ಶನಿವಾರ ಸಂಜೆ ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದ ಐವರು ಐಎಎಫ್ ಅಧಿಕಾರಿಗಳ ಪೈಕಿ ಓರ್ವ ಐಎಎಫ್ ಅಧಿಕಾರಿ ಹುತಾತ್ಮರಾಗಿದ್ದಾರೆ.
ಐಎಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಎರಡು ವಾಹನಗಳು ಸಂಜೆ 6 ಗಂಟೆ ಸುಮಾರಿಗೆ ಶಾಸಿತಾರ್ ಬಳಿ ಇದ್ದಾಗ ಭಯೋತ್ಪಾದಕರು ಗುಂಡಿನ ದಾಳಿಯನ್ನು ನಡೆಸಿದ್ದರು. ಈ ಪ್ರದೇಶವು ಗಡಿ ಜಿಲ್ಲೆಯ ಸುರನ್‌ಕೋಟೆಯ ಸನೈ ಟಾಪ್ ಮತ್ತು ಮೆಂಧರ್‌ನ ಗುರ್ಸಾಯ್ ಪ್ರದೇಶದ ನಡುವೆ ಇದೆ.
ಇದನ್ನು ಓದಿದ್ದೀರಾ? ಜಮ್ಮು | ಬೆಂಗಾವಲು ವಾಹನದ ಮೇಲೆ ಉಗ್ರರಿಂದ ದಾಳಿ: ಐವರು ಐಎಎಫ್ ಅಧಿಕಾರಿಗಳಿಗೆ ಗಾಯ
ಗಾಯಗೊಂಡ ಸಿಬ್ಬಂದಿಯನ್ನು ಐಎಎಫ್ ಹೆಲಿಕಾಪ್ಟರ್‌ಗಳಲ್ಲಿ ಚಿಕಿತ್ಸೆಗಾಗಿ ಉಧಮ್‌ಪುರಕ್ಕೆ ಸ್ಥಳಾಂತರಿಸಲಾಗಿದ್ದು ಚಿಕಿತ್ಸೆ ವೇಳೆ ಓರ್ವ ಅಧಿಕಾರಿ ಸಾವನ್ನಪ್ಪಿದ್ದಾರೆ.
Update
In the ensuing gunfight with terrorists, the Air Warriors fought back by returning fire. In the process, five IAF personnel received bullet injuries, and were evacuated to the nearest military hospital for immediate medical attention. One Air Warrior succumbed to his…
— Indian Air Force (@IAF_MCC) May 4, 2024
“ಭಯೋತ್ಪಾದಕರ ಗುಂಡಿನ ದಾಳಿಗೆ ಪ್ರತಿಯಾಗಿ ಏರ್ ವಾರಿಯರ್ಸ್ ಗುಂಡಿನ ದಾಳಿಯ ಮೂಲಕ ಹೋರಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಐವರು ಐಎಎಫ್ ಸಿಬ್ಬಂದಿಗೆ ಬುಲೆಟ್ ತಗುಲಿ ಗಾಯಗಳಾಗಿದೆ. ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಬಳಿಕ ಗಾಯಗೊಂಡ ಒರ್ವ ಏರ್ ವಾರಿಯರ್ ಸಾವನ್ನಪ್ಪಿದ್ದಾರೆ. ಸ್ಥಳೀಯ ಭದ್ರತಾ ಪಡೆಗಳಿಂದ ಹೆಚ್ಚಿನ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಐಎಎಫ್ ಮಾಹಿತಿ ನೀಡಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ ಗೆಲ್ಲಲು ಮತ್ತೆ’ಪುಲ್ವಾಮಾ, ಬಾಲಕೋಟ್’ ರೀತಿಯ ದಾಳಿ?
ಉಗ್ರರ ಬಗ್ಗೆ ಮಾಹಿತಿ ತಿಳಿದ ಬಳಿಕ ಕಳೆದ ಕೆಲವು ದಿನಗಳಿಂದ ಮೆಂಧರ್ ಮತ್ತು ಸುರನ್‌ಕೋಟೆ ನಡುವಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಶೋಧದ ವೇಳೆ ಬೆಂಗಾವಲು ವಾಹನದ ಮೇಲೆ ಉಗ್ರರಿಂದ ದಾಳಿ ನಡೆದಿದೆ. ಐಎಎಫ್ ಅಧಿಕಾರಿಗಳು ಕೂಡಾ ಪ್ರತಿದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
#WATCH | Poonch, J&K: Morning visuals of tight security checking by Indian Army personnel in the Poonch district.
An Indian Air Force vehicle convoy was attacked by terrorists in the Poonch district yesterday. One of the five Indian Air Force soldiers injured in the terrorist… pic.twitter.com/PObk4ddGkH
— ANI (@ANI) May 5, 2024
ಪೂಂಚ್ ಜಿಲ್ಲೆ ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಮೇ 25 ರಂದು ಚುನಾವಣೆ ನಡೆಯಲಿದೆ. ಕಳೆದ ಎರಡು ವಾರಗಳಲ್ಲಿ ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಇರುವ ಪಿರ್ ಪಂಜಾಲ್ ಪ್ರದೇಶದಲ್ಲಿ ಇದು ಮೂರನೇ ಉಗ್ರಗಾಮಿ ದಾಳಿಯಾಗಿದೆ.
ಇದನ್ನು ಓದಿದ್ದೀರಾ? ನಿರ್ಲಕ್ಷ್ಯವೇ ಅಥವಾ ಪಿತೂರಿಯೇ? ಪುಲ್ವಾಮಾದ ಸಂಪೂರ್ಣ ಸತ್ಯ ದೇಶ ಕೇಳುತ್ತಿದೆ…
ಇನ್ನು ಈ ಹಿಂದೆ “ಬಿಜೆಪಿ ಸರ್ಕಾರ ಈಗ ಮತ್ತೆ ನಮ್ಮ ದೇಶದ ಮೇಲೆ ಭಯೋತ್ಪಾದನಾ ದಾಳಿ ಮಾಡಿಸಿ ಅದರ ಲಾಭವನ್ನು ಚುನಾವಣೆಯಲ್ಲಿ ಪಡೆಯಲು ತಯಾರಿ ನಡೆಸುತ್ತಿದೆ. ಪುಲ್ವಾಮಾ ಮತ್ತು ಬಾಲಕೋಟ್ ರೀತಿಯಲ್ಲೇ ದಾಳಿ ಮಾಡಿಸಲು ನಡೆಯುತ್ತಿರುವ ತಯಾರಿ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ತನಗೆ ಮಾಹಿತಿ ನೀಡಿದ್ದಾರೆ. ಆದರೆ ನಾನು ಆ ವ್ಯಕ್ತಿ ಹೆಸರು ಹೇಳಲಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.