ನೋಯ್ಡಾದ ಮನೆಯೊಂದರಲ್ಲಿ ಚರಂಡಿ ಸ್ವಚ್ಛ ಮಾಡುತ್ತಿದ್ದ ಸಂದರ್ಭದಲ್ಲಿ ವಿಷಕಾರಿ ಅನಿಲ ಉಸಿರಾಡಿದ ಕಾರಣ ಪಶ್ಚಿಮ ಬಂಗಾಳ ಮೂಲದ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ನೂನಿ ಮಂಡಲ್ ಮತ್ತು ತಪನ್ ಮಂಡಲ್ ಸೆಕ್ಟರ್ 26 ರಲ್ಲಿ ಸುಮಿತ್ ಚಾವ್ಲಾ ಎಂಬ ವ್ಯಕ್ತಿಯ ನಿವಾಸದಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
Uttar Pradesh | Two men died while cleaning a septic tank in Noida’s Sector 20. They were residents of Sector 9 and belonged to Malda in West Bengal. Investigation is underway in the case: Noida Police
— ANI UP/Uttarakhand (@ANINewsUP) May 4, 2024
ಪೊಲೀಸ್ ಅಧಿಕಾರಿಗಳ ಪ್ರಕಾರ, ಇಬ್ಬರೂ ಕಾರ್ಮಿಕರು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯವರು ಮತ್ತು ನೋಯ್ಡಾ ಸೆಕ್ಟರ್ 9 ರ ಕೊಳೆಗೇರಿಯ ನಿವಾಸಿಗಳು ಆಗಿದ್ದರು.
ಇದನ್ನು ಓದಿದ್ದೀರಾ? ದೇಶಾದ್ಯಂತ ಕಳೆದ 5 ವರ್ಷಗಳಲ್ಲಿ ಒಳಚರಂಡಿ ಸ್ವಚ್ಛಗೊಳಿಸುವಾಗ 443 ಮಂದಿ ಸಾವು
“ನೋಯ್ಡಾ ಸೆಕ್ಟರ್ 26ರಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿನ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಇಬ್ಬರು ಪೌರ ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ನಿನ್ನೆ (ಶುಕ್ರವಾರ) ರಾತ್ರಿ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಇಬ್ಬರಿಗೂ ಪ್ರಜ್ಞೆ ತಪ್ಪಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಕಾರ್ಮಿಕರು ಬದುಕುಳಿಯಲಿಲ್ಲ” ಎಂದು ಉಪ ಪೊಲೀಸ್ ಆಯುಕ್ತ (ನೋಯ್ಡಾ) ವಿದ್ಯಾ ಸಾಗರ್ ಮಿಶ್ರಾ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಇನ್ನೊರ್ವ ಪೊಲೀಸ್ ಅಧಿಕಾರಿ, “ಮೃತರಿಬ್ಬರು ಶುಕ್ರವಾರ ಸಂಜೆ 7 ಗಂಟೆಗೆ ಮನೆಗೆ ಬಂದು ಸ್ವಚ್ಛತೆ ಆರಂಭಿಸಿದ್ದಾರೆ. ರಾತ್ರಿ 11.15 ರ ನಂತರ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಪರೀಕ್ಷಿಸುವ ವೇಳೆಗಾಗಲೇ ಮೃತಪಟ್ಟಿದ್ದರು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ಕಾರ್ಮಿಕರೊಬ್ಬರಿಂದ ಒಳಚರಂಡಿ ಸ್ವಚ್ಛತೆ; ಎಫ್‌ಐಆರ್ ದಾಖಲು
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ
ಚರಂಡಿಗೆ ಜನರು ಇಳಿದು ಶುಚಿಗೊಳಿಸುವುದನ್ನು 25 ವರ್ಷಗಳ ಹಿಂದೆ ನಿಷೇಧಿಸಲಾಗಿದೆ. ಆದರೂ ಕೂಡಾ ಇಂದಿಗೂ ಈ ಕಾರ್ಯವನ್ನು ಪೌರ ಕಾರ್ಮಿಕರಿಂದ ಮಾಡಿಸಲಾಗುತ್ತಿದೆ. ಇನ್ನು ಕಳೆದ ಐದು ವರ್ಷಗಳಲ್ಲಿ ಒಳ ಚರಂಡಿ ಸ್ವಚ್ಛಗೊಳಿಸುವಾಗ ಕನಿಷ್ಠ 443 ಮಂದಿ ಸಾವನ್ನಪ್ಪಿದ್ದಾರೆ. ಈ ಉದ್ಯೋಗ ನಿಷೇಧಿಸುವ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಈ ಹಿಂದೆ 2023ರ ಅಕ್ಟೋಬರ್‌ನಲ್ಲಿ ಸುಪ್ರಿಂ ಕೋರ್ಟ್ ಆದೇಶಿಸಿದೆ.