ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಆರಂಭವಾದ ಬಳಿಕ ಪತ್ರಿಕಾ ಸ್ವಾತಂತ್ರ್ಯ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಪತ್ರಕರ್ತರ ಮೇಲೆ ನಡೆಯುವ ಹಿಂಸಾಚಾರವು ಹೆಚ್ಚಾಗುತ್ತಿದೆ. ಪ್ರತಿ ವರ್ಷ ಸರಾಸರಿ ಮೂರು ಅಥವಾ ನಾಲ್ಕು ಪತ್ರಕರ್ತರನ್ನು ಕೊಲೆ ಮಾಡಲಾಗುತ್ತಿದೆ. ಒಟ್ಟಾಗಿ ಮಾಧ್ಯಮಗಳಿಗೆ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಭಾರತ ಕೂಡಾ ಒಂದಾಗಿದೆ ಎಂದು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ಪ್ರಕಟಿಸುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ವರದಿ ಮಾಡಿದೆ.
ರಿಪೋಸರ್ಟ್ ವಿದೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಎಂಬ ಫ್ರಾನ್ಸ್ ಮೂಲದ ಅಂತಾರಾಷ್ಟ್ರೀಯ ಸಂಸ್ಥೆಯು ವಿಶ್ವದಾದ್ಯಂತ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಈ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 159ನೇ ಸ್ಥಾನದಲ್ಲಿದೆ.
ಪತ್ರಿಕಾ ಸ್ವಾತಂತ್ರ್ಯ ವಿಚಾರದಲ್ಲಿ 152ನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕಿಂತ ಕೆಟ್ಟ ಸ್ಥಿತಿಯಲ್ಲಿ ಭಾರತವಿದೆ. ಮೊದಲ ಸ್ಥಾನದಲ್ಲಿ ನಾರ್ವೆ ಇದ್ದರೆ, ಎರಡನೇ ಸ್ಥಾನದಲ್ಲಿ ಡೆನ್ಮಾರ್ಕ್ ಇದೆ. ನಾಲ್ಕು ವರ್ಷದ ಹಿಂದೆ ಭಾರತ 140ನೇ ಸ್ಥಾನದಲ್ಲಿತ್ತು. ಪಾಕ್‌ಗಿಂತ ಒಂದೆರಡು ಸ್ಥಾನ ಮೇಲಿತ್ತು. ಆದರೆ ಈಗ ಪಾಕ್‌ಗಿಂತ 7 ಸ್ಥಾನ ಭಾರತ ಕುಸಿದಿದೆ.
ಭಾರತದಲ್ಲಿ ಮಾಧ್ಯಮಗಳು
ಭಾರತದಲ್ಲಿ 1.4 ಬಿಲಿಯನ್ ಜನರು ಟಿವಿ ನೋಡುತ್ತಾರೆ. ಭಾರತದಲ್ಲಿ ಒಟ್ಟಾಗಿ 900 ಖಾಸಗಿ ಒಡೆತನದ ಟಿವಿ ಚಾನೆಲ್‌ಗಳಿದೆ. ಅದರಲ್ಲಿ ಅರ್ಧದಷ್ಟು ಸುದ್ದಿ ಮಾಧ್ಯಮಗಳು. ಸಾರ್ವಜನಿಕ ಟಿವಿ ದೂರದರ್ಶನ 23 ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತವೆ. ನಮ್ಮ ದೇಶದಲ್ಲಿ ಸುಮಾರು 20 ಸಾವಿರ ದಿನಪತ್ರಿಕೆ ಸೇರಿ 1,40,000 ಪಬ್ಲಿಕೇಷನ್‌ಗಳು 20ಕ್ಕೂ ಹೆಚ್ಚು ಭಾಷೆಗಳಲ್ಲಿದೆ. ಆನ್‌ಲೈನ್ ಮಾಧ್ಯಮಗಳ ಓದುಗರ ಸಂಖ್ಯೆ ಕೂಡಾ ಗಣನೀಯವಾಗಿದೆ.
‘ಅನಧಿಕೃತ ತುರ್ತು ಪರಿಸ್ಥಿತಿ’
ಮೋದಿ ಅಧಿಕಾರಕ್ಕೆ ಬಂದ ಬಳಿಕ ‘ಅನಧಿಕೃತ ತುರ್ತು ಪರಿಸ್ಥಿತಿ’ಯಲ್ಲಿ ಭಾರತವು ಸಿಲುಕಿಕೊಂಡಿದೆ ಎಂದು ರಿಪೋಸರ್ಟ್ ವಿದೌಟ್ ಬಾರ್ಡರ್ಸ್ ಸಂಸ್ಥೆ ಹೇಳಿದೆ. ಇನ್ನು ಇತ್ತೀಚೆಗೆ ಭಾರತವು ಸರ್ವಾಧಿಕಾರದತ್ತ ಸಾಗುತ್ತಿದೆ ಎಂದು ಹಲವಾರು ಮಾಧ್ಯಮಗಳು, ಸಮೀಕ್ಷೆಗಳು ವರದಿ ಮಾಡಿದ್ದವು. 2014ರ ನಂತರ ಬಿಜೆಪಿ ಮತ್ತು ಮಾಧ್ಯಮದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಕುಟುಂಬಗಳ ನಡುವೆ ಹೊಂದಾಣಿಕೆಯಾಗಿದೆ ಎಂದು ಸಂಸ್ಥೆ ಹೇಳುತ್ತದೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಎನ್‌ಡಿಎ ಆಡಳಿತದಲ್ಲಿ ದೇಶದ ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣ ದಮನವಾಗಿದೆ: ಪಿ ಸಾಯಿನಾಥ್
ನಮ್ಮ ದೇಶದ ಅತೀ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಪ್ರಧಾನಿ ಮೋದಿಯವರ ಆಪ್ತ ಎಂಬುವುದು ಗುಟ್ಟಾಗಿ ಉಳಿದಿಲ್ಲ. ಈ ಅಂಬಾನಿ ದೇಶದಲ್ಲಿರುವ 70ಕ್ಕೂ ಹೆಚ್ಚು ಮಾಧ್ಯಮದ ಮಾಲೀಕರಾಗಿದ್ದಾರೆ. ಈ ಮಾಧ್ಯಮಗಳನ್ನು 800 ಮಿಲಿಯನ್‌ಗೂ ಹೆಚ್ಚು ಭಾರತೀಯರು ನೋಡುತ್ತಾರೆ. ಹಾಗೆಯೇ ದೇಶದ ಎರಡನೇ ಶ್ರೀಮಂತ ವ್ಯಕ್ತಿ, ಅದಾನಿ ಗ್ರೂಪ್‌ನ ಗೌತಮ್ ಅದಾನಿ 2022ರಲ್ಲಿ ಎನ್‌ಡಿಟಿವಿ ಚಾನೆಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಇದಾದ ಬಳಿಕ ಮುಖ್ಯವಾಹಿನಿಯ ಮಾಧ್ಯಮದ ನೋಟವೇ ಬದಲಾಗಿದೆ ಎಂದು ಆರ್‌ಎಸ್‌ಎಫ್ ಸಂಸ್ಥೆ ಹೇಳಿದೆ.
ಗೋಧಿ ಮೀಡಿಯಾಗಳ ಬಗ್ಗೆ ದೇಶದಲ್ಲಿ ನಿತ್ಯ ಸುದ್ದಿಯಾಗುತ್ತದೆ. ಈ ಬಗ್ಗೆಯೂ ಕೂಡಾ ಆ ಸಂಸ್ಥೆ ಉಲ್ಲೇಖಿಸಿದೆ. ಇತ್ತೀಚೆಗೆ ಭಾರತದಲ್ಲಿ ಬಿಜೆಪಿ ಪರವಾಗಿರುವ ‘ಗೋಧಿ ಮೀಡಿಯಾಗಳು’ ಹೆಚ್ಚಾಗುತ್ತಿದೆ. ಹಳೆಯ ಭಾರತೀಯ ಮಾದರಿಯಾದ ಪತ್ರಿಕಾ ಮಾಧ್ಯಮದಲ್ಲಿನ ಬಹುತ್ವದ ಮೇಲೆ ಒತ್ತಡವಿದೆ ಎಂದು ಆರ್‌ಎಸ್‌ಎಫ್ ವರದಿ ಮಾಡಿದೆ.
ಪ್ರಧಾನಿ ಮೋದಿ ಪತ್ರಕರ್ತರನ್ನು ಟೀಕಿಸುತ್ತಾರೆ. ಅವರನ್ನು ತನ್ನ ಮಧ್ಯವರ್ತಿಗಳಂತೆ ನೋಡುತ್ತಾರೆ. ಸರ್ಕಾರವನ್ನು ಟೀಕಿಸುವ ಪತ್ರಕರ್ತರಿಗೆ ಬಿಜೆಪಿ ಬೆಂಬಲಿತ ಟ್ರೋಲ್‌ಗಳ ಮೂಲಕ ಕಿರುಕುಳ ನೀಡಲಾಗುತ್ತದೆ ಎಂಬ ಅಂಶ ವರದಿಯಲ್ಲಿ ಬಯಲಾಗಿದೆ.
ಪತ್ರಿಕಾ ಸ್ವಾತಂತ್ರ್ಯಕ್ಕೆ ಮೂಗುದಾರ
ಭಾರತದ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಪ್ರತ್ಯೇಕವಾಗಿ ಕಾನೂನು ಇಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಡಿ ಪತ್ರಿಕಾ ಸ್ವಾತಂತ್ರ್ಯ ಬರುತ್ತದೆ. ಆದರೆ ಭಾರತ ಸರ್ಕಾರ ದೇಶದ್ರೋಹ, ಮಾನನಷ್ಟ ಮೊಕ್ಕದಮೆ, ದೇಶ ವಿರೋಧಿ ಕೃತ್ಯದ ಕಾನೂನು ಬಳಸಿಕೊಂಡು ಮಾಧ್ಯಮವನ್ನು ನಿಯಂತ್ರಣ ಮಾಡುತ್ತಿದೆ. ಭಯೋತ್ಪಾದನೆ ವಿರೋಧಿ ಕಾನೂನನ್ನು ಪತ್ರಕರ್ತರ ಮೇಲೆ ಬಳಸಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ತನಿಖಾ ಸಂಸ್ಥೆಗಳಿಂದ ಸರ್ಕಾರ ನಡೆಸಲು ಸಾಧ್ಯವಾಗದು; ಪತ್ರಿಕಾ ಸ್ವಾತಂತ್ರ್ಯದ ಪರ ಸುಪ್ರೀಂ ಬ್ಯಾಟಿಂಗ್
ಭಾರತದಲ್ಲಿ ಪ್ರಮುಖ ವಿಪಕ್ಷ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಕೂಡಾ ಪತ್ರಕರ್ತರ ವಿರುದ್ಧ ಕಾನೂನು ಬಳಸಿಕೊಂಡಿದೆ. ಆದರೆ ಮೋದಿ ಅವರು ಮಾಧ್ಯಮಗಳನ್ನು ನಿಯಂತ್ರಿಸಲು, ಸರ್ಕಾರವನ್ನ ಟೀಕಿಸುವವರನ್ನು ಮೌನವಾಗಿಸಲು ಅವಕಾಶ ನೀಡುವ ಕಾನೂನುಗಳನ್ನು ರೂಪಿಸಿಕೊಂಡಿದ್ದಾರೆ. 2023ರ ದೂರಸಂಪರ್ಕ ಕಾಯ್ದೆ, ಬ್ರಾಡ್‌ಕಾಸ್ಟಿಂಗ್ ಸರ್ವಿಸಸ್ (ನಿಯಂತ್ರಣ) ಮಸೂದೆ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ ಮೋದಿ ಸರ್ಕಾರದ ರೂಪಿಸಿರುವ ಕಾನೂನುಗಳು ಎಂದು ಆರ್‌ಎಸ್‌ಎಫ್ ಉಲ್ಲೇಖಿಸಿದೆ.
ಜಾಹೀರಾತಿನ ಮೂಲಕ ಮಾಧ್ಯಮಗಳ ನಿಯಂತ್ರಣ
ನಮ್ಮ ದೇಶದಲ್ಲಿ ಮಾಧ್ಯಮವನ್ನು ನಡೆಸಬೇಕಾದರೆ ಆರ್ಥಿಕವಾಗಿ ಜಾಹೀರಾತು ಆದಾಯ ಮುಖ್ಯವಾಗಿದೆ. ಇದನ್ನೇ ಬಿಜೆಪಿ ಅಥವಾ ಕೇಂದ್ರ ಸರ್ಕಾರ ಬಳಸಿಕೊಂಡು ಮಾಧ್ಯಮಗಳನ್ನು ಬಿಜೆಪಿ ನಿಯಂತ್ರಣ ಮಾಡುತ್ತಿದೆ ಎಂದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಜಾಹೀರಾತಿನ ಮೂಲಕ ಮಾಧ್ಯಮಗಳನ್ನು ಬಿಜೆಪಿ ಸರ್ಕಾರ ಹೇಗೆ ಖರೀದಿ ಮಾಡಿ ನಿಯಂತ್ರಿಸುತ್ತಿದೆ ಎಂಬುವುದರ ಬಗ್ಗೆಯೂ ಈ ಸಂಸ್ಥೆ ಬೆಳಕು ಚೆಲ್ಲಿದೆ.
ನರೇಂದ್ರ ಮೋದಿ ಸರ್ಕಾರ ಸಾವಿರಾರು ಕೋಟಿ ಸಾರ್ವಜನಿಕ ಫಂಡ್ ಅನ್ನು ಜಾಹೀರಾತಿಗಾಗಿ ಬಳಸಿಕೊಳ್ಳುತ್ತಿದೆ. ಹಲವಾರು ಸಣ್ಣ ಮಾಧ್ಯಮಗಳು ಈ ನಿಧಿ ಮೇಲೆಯೇ ಅವಲಂಭಿಸಿದೆ. ಇದರಿಂದಾಗಿ ಕೇಂದ್ರ, ರಾಜ್ಯ ಸರ್ಕಾರ ಮಾಧ್ಯಮಗಳಿಗೆ ಫಂಡಿಂಗ್ ಮಾಡಿ ಅದನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ ಎಂದು ಆರ್‌ಎಸ್‌ಎಫ್ ವರದಿ ಮಾಡಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರವು ಖಾಸಗಿ, ಸರ್ಕಾರಿ ಎರಡನ್ನೂ ನಿಯಂತ್ರಿಸುತ್ತದೆ. ಅದಕ್ಕೆ ಮುಖ್ಯ ಕಾರಣ ಪ್ರಧಾನಿ ಆಪ್ತರಾದ ಅದಾನಿ, ಅಂಬಾನಿ ಕೈಯಲ್ಲಿ ಮಾಧ್ಯಮಗಳು ಇರುವುದು.
ಮಾಧ್ಯಮದಲ್ಲಿ ವೈವಿಧ್ಯತೆ ನಾಪತ್ತೆ
ಭಾರತದ ವೈವಿಧ್ಯತೆ ಮತ್ತು ಮಾಧ್ಯಮದಲ್ಲಿರುವ ವೈವಿಧ್ಯತೆ ಬಗ್ಗೆಯೂ ಆರ್‌ಎಸ್‌ಎಫ್ ವರದಿ ಪ್ರಸ್ತಾಪ ಮಾಡಿದೆ. ಭಾರತದ ವೈವಿಧ್ಯತೆ ಮಾಧ್ಯಮ ಕ್ಷೇತ್ರದಲ್ಲಿ ಕಾಣುವುದಿಲ್ಲ. ಮಾಧ್ಯಮದಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಹೆಚ್ಚಾಗಿ ಹಿಂದೂ ಮೇಲ್ವರ್ಗದ ಪುರುಷರು ಇದ್ದಾರೆ. ಇದು ಲೇಖನದ ಮೇಲೆ, ವರದಿ ಮೇಲೆ ಪರಿಣಾಮ ಬೀರುತ್ತಿದೆ.
ಇದನ್ನು ಓದಿದ್ದೀರಾ? ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಉಳಿಸಿ-ಬೆಳೆಸಲು ಅಟ್ಲಾಂಟದಲ್ಲೊಂದು ಪ್ರದರ್ಶನ
ಉದಾಹರಣೆಗೆ ಸಂಜೆ ನಡೆಯುವ ಮಾಧ್ಯಮದ ಕಾರ್ಯಕ್ರಮಗಳಲ್ಲಿ ಮಹಿಳಾ ಅತಿಥಿಗಳು ಶೇ. 15ಕ್ಕಿಂತ ಕಡಿಮೆ ಇರುತ್ತಾರೆ. ಹಿಂದಿ ರಾಷ್ಟ್ರೀಯತಾವಾದಿ ಸಿದ್ಧಾಂತದ ಪ್ರಾಬಲ್ಯ ಹೆಚ್ಚಾಗುತ್ತಿದೆ. ಹೆಚ್ಚಿನ ಟಿವಿ ಮಾಧ್ಯಮಗಳು, ವಿಶೇಷವಾಗಿ ಹಿಂದಿ ಮಾಧ್ಯಮಗಳು ಧಾರ್ಮಿಕ ಸುದ್ದಿಯನ್ನು ಮಾಡುತ್ತದೆ. ಅದರಲ್ಲಿಯೂ ಮುಸ್ಲಿಮರ ಮೇಲೆ ದ್ವೇಷ ಅಧಿಕವಾಗಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ಆರ್‌ಎಸ್‌ಎಫ್ ಪ್ರತಿಪಾದಿಸಿದೆ.
ಪತ್ರಕರ್ತರ ಹತ್ಯೆ!
ಪ್ರತಿ ವರ್ಷ ಸರಾಸರಿ ಮೂರು ಅಥವಾ ನಾಲ್ಕು ಪತ್ರಕರ್ತರನ್ನು ಹತ್ಯೆ ಮಾಡಲಾಗುತ್ತಿದೆ. ಭಾರತ ಮಾಧ್ಯಮಗಳಿಗೆ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ. ಸರ್ಕಾರವನ್ನು ಟೀಕೆ ಮಾಡಿದರೆ ಆ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತದೆ, ಬೆದರಿಕೆ ಹಾಕಲಾಗುತ್ತದೆ, ದಾಳಿ, ಬಂಧನ ಮಾಡಲಾಗುತ್ತದೆ. ಪೊಲೀಸ್ ಅಧಿಕಾರಿಗಳು, ರಾಜಕೀಯ ಕಾರ್ಯಕರ್ತರ, ಕ್ರಿಮಿನಲ್ ಗುಂಪುಗಳ, ಭ್ರಷ್ಟ ಸ್ಥಳೀಯ ಅಧಿಕಾರಿಗಳ ಹಿಂಸೆಗೆ ಪತ್ರಕರ್ತರು ಬಲಿಯಾಗುತ್ತಾರೆ.
ಹಿಂದುತ್ವದ ಪ್ರತಿಪಾದಕರು, ಹಿಂದೂ ಬಲಪಂಥೀಯರ ಸಿದ್ಧಾಂತರು ಸರ್ಕಾರದ ವಿರುದ್ಧ ಮಾತನಾಡಿವರನ್ನು ದೇಶದ್ರೋಹಿಗಳು ಅಥವಾ ದೇಶವಿರೋಧಿಗಳು ಎಂದು ಬ್ರ್ಯಾಂಡ್ ಮಾಡ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಟಿತವಾಗಿ ದ್ವೇಷ ಪ್ರಚಾರ ಮಾಡಲಾಗುತ್ತಿದೆ. ಮಹಿಳಾ ಪತ್ರಕರ್ತರನ್ನು ಗುರಿ ಮಾಡಿಕೊಂಡು, ಅವರ ವೈಯಕ್ತಿಕ ಡೇಟಾ ಲೀಕ್ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ವರದಿಗಾರರ ಮೇಲೆ ಪೊಲೀಸ್ ಮತ್ತು ಅರೆಸೇನಾಪಡೆಗಳಿಂದ ಕಿರುಕುಳ ಹೆಚ್ಚಾಗುತ್ತಿದೆ. ಕೆಲವರು ಹಲವಾರು ವರ್ಷಗಳಿಂದ ಬಂಧನದಲ್ಲೇ ಇದ್ದಾರೆ ಎಂದು ಈ ಸಂಸ್ಥೆ ವರದಿ ಮಾಡಿದೆ.
ಭಾರತವು ಸರ್ವಾಧಿಕಾರದತ್ತ ಸಾಗುತ್ತಿರುವುದನ್ನು, ಇಲ್ಲಿ ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣವಾಗಿ ಹದಗೆಟ್ಟಿರುವುದನ್ನು ಈ ವರದಿಯು ಸ್ಪಷ್ಟಪಡಿಸುತ್ತದೆ. ಅದರಲ್ಲಿಯೂ ಸರ್ಕಾರದ ವಿರುದ್ಧ ಮಾತನಾಡಿದ ಪತ್ರಕರ್ತರ ಮೇಲೆ ಹಲ್ಲೆ, ಅವರ ಹತ್ಯೆ ಅತೀ ಗಂಭೀರ ವಿಚಾರವಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಭಾರತದಲ್ಲಿ 28 ಪತ್ರಕರ್ತರ ಕೊಲೆಯಾಗಿರುವುದು ಗಮನಾರ್ಹ ಸಂಗತಿ!
First of all, my apologies for replying in English, I don’t yet have Kannada keyboard enabled in my laptop. Next, as a technologist in the Silicon Valley, I am very apolitical. All I care about is a relatively scandal-free administration in India. I have seen that manifest in India over the last few years. So I have a few points to make and they are nothing personal.
You make a number of allegations and accusations on PM Modi’s administration, one of which is press freedom. The fact that you have published this article in itself is contrary to your accusations! I am puzzled as to why many journalists like you conveniently depart from objectivity and balance when it comes to reporting news. Opinions are a different game, they are biased one way or the other. It depends on who is feeding your organization!
I would like to see documented evidence on everything you mention above. They must be incontrovertible proofs that can be defended in a court of law. A good majority of Indians are fair-minded and rational people irrespective of their educational level and accomplishments. I find them to be much more rational than citizens in the West. Documented proofs will definitely sway their minds at the ballot box… assuming that there is a better alternative!
A better alternative is what is seriously lacking in India at this time. All I hear from the INDI alliance is “defeat Modi.” They lack a cogent narrative as to what their strategy is for the economic development in India and uplifting more lower income population to the middle class. I have witnessed the latter in the last 10 years of the BJP administration.
To date, I have not come across any new portal, TV station or website banned by the Modi administration. That was not the case during the emergency period of PM Indira Gandhi’s administration. It is clear that many new media players have a selective amnesia when it comes to reporting as well as articulating their views in their articles such as yours.
PM Modi was declared guilty by the media right from day one when he took office. It is no wonder that he thumbed his nose at the media and went directly to people. He has pushed the main stream media to the point of irrelevance which is well deserved in my opinion.
I see you, albeit nascent, as an up and coming journalist. My appeal to you is please develop an analytical approach to reporting and writing. Deconstruct any topic, analyze its components, reconstruct it and offer a narrative keeping objectivity, fairness and balance at the core.
ಈ ವಿದೇಷಿ ರಿಪೋಸರ್ಟ್ ವಿದೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಸಂಸ್ಥೆಯ ಸೂಚ್ಯಂಕ ಭಾರತದವರಿಗೆ ಏಕೆ ವೇದವಾಕ್ಯ ಆಯಿತು?
ದಿವಾಕರ್ ಸರಿಯಾಗಿಯೆ ಪ್ರಶ್ನಿಸಿದ್ದಾರೆ.
Dr MP Divakar
Wonderful analysis and feedback (take down?)