ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿ, ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡವು, ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಬಿಜಯ್ ಕುಮಾರ್ ಸಿಂಗ್, “ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ಈಗಾಗಲೇ ವಿಶೇಷ ತನಿಖಾ ತಂಡ (SIT)ವನ್ನು ರಚಿಸಲಾಗಿರುತ್ತದೆ. ಸಂತ್ರಸ್ತರು ಹಾಗೂ ಬಾತ್ಮೀದಾರರ ನೆರವಿಗಾಗಿ ಹೆಲ್ಪ್‌ಲೈನ್ ನಂ.6360938947 ತೆರೆಯಲಾಗಿದೆ” ಎಂದು ತಿಳಿಸಿದ್ದಾರೆ.
#JUSTIN#PrajwalRevanna Sexual Harassment Case: SIT(Special Investigation Team) Started Helpline For Victims…
Asks to Contact: 6360938947 Number#Hassan #hassanfiles #pendrivecase@zoo_bear @INCKarnataka @JanataDal_S pic.twitter.com/z0PQilNkwS
— Irshad Venur ಇರ್ಷಾದ್ ವೇಣೂರು (@muhammadirshad6) May 5, 2024
“ಪ್ರಸ್ತುತ ಪ್ರಕರಣದ ತನಿಖೆಯ ವೇಳೆ ಈ ಘಟನೆಗೆ ಸಂಬಂಧಪಟ್ಟಂತೆ ಇನ್ನೂ ಸಂತ್ರಸ್ತರಿರುವುದು ತಂಡಕ್ಕೆ ಗೊತ್ತಾಗಿದೆ. ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ ಕಾನೂನಿನ ನೆರವು ಮತ್ತು ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಾಯ ಬೇಕಾದಲ್ಲಿ ಹೆಲ್ಪ್‌ಲೈನ್ ಸಂಖ್ಯೆ 6360938947ಗೆ ಕರೆ ಮಾಡಬಹುದಾಗಿದ್ದು, ಸಂತ್ರಸ್ತರ ಅಥವಾ ಬಾತ್ಮೀದಾರ ವಿವರಗಳನ್ನು ಗೌಪ್ಯವಾಗಿಡಲಾಗುವುದು” ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
