ಪಾಕಿಸ್ತಾನ ಆಕ್ರಮಿತ ಭಾರತ (ಪಿಒಕೆ) ಭಾರತದೊಂದಿಗೆ ವಿಲೀನವಾಗಲಿದೆ ಎಂಬ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಸಿದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, “ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ” ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
“ಪಿಒಕೆ ಭಾರತದೊಂದಿಗೆ ವಿಲೀನವಾಗಲಿದೆ ಎಂದು ರಕ್ಷಣಾ ಸಚಿವರು ಹೇಳುತ್ತಿದ್ದರೆ ಮುಂದುವರಿಯಬಹುದು. ನಿಮ್ಮನ್ನು ತಡೆಯಲು ನಾವು ಯಾರು? ಆದರೆ ನೆನಪಿಡಿ, ಅವರು (ಪಾಕಿಸ್ತಾನ) ಬಳೆ ತೊಟ್ಟುಕೊಂಡಿಲ್ಲ. ಅವರಲ್ಲಿ ಪರಮಾಣು ಬಾಂಬ್‌ಗಳಿವೆ. ದುರದೃಷ್ಟವಶಾತ್ ಆ ಆಟಂ ಬಾಂಬ್ ನಮ್ಮ ಮೇಲೆ ಬೀಳುತ್ತದೆ” ಎಂದು ಹೇಳಿದ್ದಾರೆ.
#WATCH | Srinagar, J&K: JKNC Chief Farooq Abdullah says, “As soon as the Amarnath Yatra ends, mark my words, elections will be held in J&K. We have been ready for years. They were not ready.” pic.twitter.com/Cg6dPRFuEw
— ANI (@ANI) May 5, 2024
ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ನೋಡಿ ಪಿಒಕೆಯಲ್ಲಿರುವ ಜನರು ಸ್ವತಃ ತಾವೇ ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ ಎಂದು ಏಪ್ರಿಲ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ತ್ರೀಯರನ್ನು ಅರಿಶಿಣ, ಕುಂಕುಮ, ಬಳೆಯೊಳಗೆ ಬಂಧಿಸಿದ್ದು ಸಾಕು; ಘನತೆಯ ಬದುಕು ಬೇಕು
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಬಿಜೆಪಿ ಹಾಲಿ ಸಂಸದ ರಾಜು ಬಿಸ್ತಾ ಪರ ಪ್ರಚಾರ ಮಾಡಿ ಮಾತನಾಡಿದ್ದ ರಾಜನಾಥ್ ಸಿಂಗ್ ಅವರು, “ಚಿಂತಿಸಬೇಡಿ. ಪಿಒಕೆ ನಮ್ಮದೇ ಆಗಿತ್ತು, ಆಗಿದೆ ಮತ್ತು ಮುಂದೆಯೂ ನಮ್ಮದಾಗಿಯೇ ಉಳಿಯಲಿದೆ” ಎಂದಿದ್ದರು. ಭಾರತದ ಶಕ್ತಿ ಹೆಚ್ಚುತ್ತಿದೆ. ಪ್ರಪಂಚದಾದ್ಯಂತ ಭಾರತದ ಪ್ರತಿಷ್ಠೆ ಹೆಚ್ಚುತ್ತಿದೆ. ನಮ್ಮ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಈಗ ಪಿಒಕೆಯಲ್ಲಿರುವ ನಮ್ಮ ಸಹೋದರ ಸಹೋದರಿಯರು ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ” ಎಂದು ರಕ್ಷಣಾ ಸಚಿವರು ತಿಳಿಸಿದ್ದರು.