ಮೋದಿ, ರಾಹುಲ್ ಗಾಂಧಿ ಮತ್ತು ಅಮೇಥಿ; ಓಡಿ ಹೋಗುತ್ತಿರುವವರು ಯಾರು?

Date:

Advertisements

ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದ್ದವು. ಅಲ್ಲಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಇರಾನಿ ಕೂಡ ಪಂಥಾಹ್ವಾನ ನೀಡುತ್ತಲೇ ಇದ್ದರು. ಆದರೆ, ರಾಹುಲ್‌ ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದಾರೆ. ಇದು, ಬಿಜೆಪಿಗೆ ಶಾಕ್‌ ಆಗಿದ್ದರೂ, ತೋರಿಸಿಕೊಳ್ಳದೆ, ರಾಹುಲ್ ವಿರುದ್ಧ ವ್ಯಂಗ್ಯವಾಡುತ್ತಿದೆ. ‘ಕಾಂಗ್ರೆಸ್‌ ತನ್ನ ಸ್ಕ್ರಿಪ್ಟ್‌ಗೆ ತಕ್ಕಂತೆ ತಾನೇ ನಡೆದುಕೊಳ್ಳುವುದಿಲ್ಲ’ ಎಂದು ಬಿಜೆಪಿ ಹೇಳಿದರೆ, ‘ತಮ್ಮ ವಿರುದ್ಧ ಅಸಂಬದ್ಧ ಎದುರಾಳಿಯನ್ನು ಕಣಕ್ಕಿಳಿಸುವ ಮೂಲಕ ತಮ್ಮ ಸೆಲೆಬ್ರಿಟಿತನಕ್ಕೆ ಅವಮಾನಿಸಿದ್ದಾರೆ’ ಎಂದು ಇರಾನಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಅಮೇಥಿ ನೆಲದ ವರದಿಗಳು ಬೇರೆಯ ರೀತಿಯಲ್ಲಿವೆ. ಇರಾನಿ ಅವರು ತಮ್ಮ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ಬೆರಳೆಣಿಕೆಯಷ್ಟು ಮತಗಳ ಅಂತರದಲ್ಲಿ ಮಾತ್ರವೇ ಗೆಲ್ಲಬಹುದು ಎಂದು ಹೇಳುತ್ತಿವೆ. ಅಲ್ಲಿ ಯುವಜನರು ಮತ್ತು ಹೆಚ್ಚಿನ ಮತದಾರರು ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವ ಮಾತನಾಡುತ್ತಿದ್ದಾರೆ. ಆ ಬಗ್ಗೆ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಅಂದರೆ, ಅವರೆಲ್ಲರೂ ಇರಾನಿ ವಿರುದ್ಧ ಮತ ಚಲಾಯಿಸಲು ಮುಂದಾಗಿದ್ದಾರೆ.

ಕಿಶೋರಿ ಲಾಲ್ ಶರ್ಮಾ ಅವರು ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತ. ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಗೆ ಕಾಂಗ್ರೆಸ್‌ ಶಾಕ್‌ ನೀಡಿದೆ. ಆದರೂ, ಮೋದಿ ಅವರು ತಮ್ಮ ಭಾಷಣಗಳಲ್ಲಿ ರಾಹುಲ್‌ ಗಾಂಧಿ ಅವರನ್ನು ಯಾಕೆ ಓಡಿ ಹೋದಿರಿ, ಭಯಪಡಬೇಡಿ ಎಂದು ಛೇಡಿಸುತ್ತಿದ್ದಾರೆ. ಮೋದಿ ಅವರ ಈ ಮಾತನ್ನೇ ಇಟ್ಟುಕೊಂಡು ಅವರ ನಿಷ್ಠಾವಂತ ಮಾಧ್ಯಮಗಳು ರಾಹುಲ್ ಅವರು ಅಮೇಥಿಯಲ್ಲಿ ಸ್ಪರ್ಧಿಸದ ನಿರ್ಧಾರದ ವಿರುದ್ಧ ನಾನಾ ರೀತಿಯಲ್ಲಿ ನಿರೂಪಣೆಗಳನ್ನು ಹೆಣೆಯುತ್ತಿವೆ.

Advertisements

ಅದಾಗ್ಯೂ, ಓಡಿಹೋಗುವ ಮತ್ತು ಭಯಪಡುವ ವಿಚಾರದಲ್ಲಿ ಮೋದಿ ಅವರನ್ನು ಕೇಳಲು ಸಾಕಷ್ಟು ಪ್ರಶ್ನೆಗಳಿವೆ. ಅವರು ಓಡಿ ಹೋಗಲಿಲ್ಲವೇ ಅಥವಾ ಭಯಪಡಲಿಲ್ಲವೇ ಎಂಬುದಕ್ಕೆ ಉತ್ತರಗಳು ಬೇಕಾಗಿವೆ. ಮೋದಿ ಅವರಿಗೆ ಆಯ್ದ ಕೆಲವು ಪ್ರಶ್ನೆಗಳು ಇಲ್ಲಿವೆ:

  • ತಮ್ಮ ಎದುರಾಳಿಗಳು ಎಲ್ಲಿ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಮಾತನಾಡುವ ಮೋದಿ ಮತ್ತು ಬಿಜೆಪಿ – ‘ನಿಮ್ಮ ಅಭ್ಯರ್ಥಿಗಳನ್ನು ಎಲ್ಲಿ ನಿಲ್ಲಿಸಬೇಕು ಎಂಬುದನ್ನು ನಿರ್ಧರಿಸಲು ಪ್ರತಿಪಕ್ಷಗಳಿಗೆ ಬಿಡಲು ನೀವು ಸಿದ್ಧರಿದ್ದೀರಾ’ ಎಂದು ಮೋದಿ ಅವರನ್ನು ಕೆಲವರು ಮಾತ್ರ ಪ್ರಶ್ನಿಸಿದ್ದಾರೆ.
  • ಹಿಂದಿನ ಮತ್ತು ಪ್ರಸ್ತುತ ಬಿಜೆಪಿಯ ಅನೇಕ ಧೀಮಂತ ನಾಯಕರು ತಮ್ಮ ತಂತ್ರಕ್ಕೆ ಅನುಗುಣವಾಗಿ ತಮ್ಮ ಕ್ಷೇತ್ರಗಳನ್ನು ಬದಲಿಸಿದ್ದಾರೆ ಎಂಬುದನ್ನು ನೀವು ಮರೆತಿದ್ದೀರಾ? ಕ್ಷೇತ್ರ ಬದಲಿಸಿದ ಬಿಜೆಪಿಗರ ಪಟ್ಟಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ (6 ಬಾರಿ), ದಿವಂಗತ ಸುಷ್ಮಾ ಸ್ವರಾಜ್ (3 ಬಾರಿ), ರಾಜನಾಥ್ ಸಿಂಗ್ (ಎರಡು ಬಾರಿ) ಪ್ರಮುಖರು ಎಂಬುದು ನೆನಪಿದೆಯೇ ಎಂದೂ ಮೋದಿ ಅವರಿಗೆ ಪ್ರಶ್ನಿಸಲಾಗುತ್ತಿದೆ.
  • ಸ್ವತಃ ಪ್ರಧಾನಿ ಮೋದಿಯವರು ಗುಜರಾತ್‌ ಬಿಟ್ಟು ವಾರಣಾಸಿಗೆ ಬಂದರು. ಆದರೆ, ಅವರು ಓಡಿಹೋಗಲಿಲ್ಲ – ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಿಡಿತವನ್ನು ಬಲಪಡಿಸುವ ತಂತ್ರವಾಗಿ ಕ್ಷೇತ್ರಗಳನ್ನು ಬದಲಿಸಿದರು ಎಂದು ಹೇಳಲಾಗುತ್ತದೆ. ಆದರೆ, ಮೋದಿ ಅವರು ಉತ್ತರವನ್ನು ದಾಟಿ ದಕ್ಷಿಣದೆಡೆಗೆ ಬರುತ್ತಿಲ್ಲ. ಒಬ್ಬ ಅಪ್ರತಿಮ ನಾಯಕ ಎನ್ನಿಸಿಕೊಂಡ ಮೋದಿ, ದಕ್ಷಿಣದಲ್ಲಿಯೂ ಸ್ಪರ್ಧಿಸಿ ‘ಪ್ಯಾನ್-ಇಂಡಿಯಾ’ ಸ್ಥಾನಮಾನವನ್ನು ಸಾಬೀತು ಮಾಡದಿದ್ದರೆ ಹೇಗೆ? ಅವರೇಕೆ ದಕ್ಷಿಣದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸದೆ ಓಡಿ ಹೋಗುತ್ತಾರೆ? ಅವರೇಕೆ ಹೆದುರುತ್ತಾರೆ?
  • ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ‘ವಿಶೇಷ ಸ್ಥಾನಮಾನ’ ರದ್ದತಿಯ ನಂತರ ಕಾಶ್ಮೀರಿಗಳು ಸಂತೋಷಗೊಂಡಿದ್ದಾರೆ, ಅವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಾಶ್ಮೀರಿಗಳು ಬಿಜೆಪಿ ಸರ್ಕಾರಕ್ಕೆ ಋಣಿಯಾಗಿದ್ದಾರೆ ಎಂಬ ಪ್ರತಿಪಾದನೆಗಳನ್ನು ಅಂದಿನಿಂದಲೂ ದೇಶದ ಮುಂದಿಡಲಾಗುತ್ತಿದೆ. ಅಷ್ಟೊಂದು ಅಭೂತಪೂರ್ವ ಸ್ವಾಗತವಿದೆ ಎಂದಾದರೂ, ಜಮ್ಮು-ಕಾಶ್ಮೀರದ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸದೆ, ತಮ್ಮ ಮಿತ್ರ ಪಕ್ಷಗಳನ್ನೇಕೆ ಅಲ್ಲಿ ಮುಂದೆ ಬಿಟ್ಟು, ಹಿಂದೆ ಸರಿದಿದೆ. ಅಂದರೆ, ಬಿಜೆಪಿಗೆ ಕಾಶ್ಮೀರಿಗಳ ಮೇಲೆ ಭಯವಿದೆ. ಕಾಶ್ಮೀರಿಗಳಿಗೆ ಹೆದರಿ ಬಿಜೆಪಿ ಓಡಿ ಹೋಗುತ್ತಿದೆ ಯಾಕೆ?
  • ವಿಶ್ವಗುರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಮತ್ತು ತಮ್ಮ ಭಕ್ತರಿಂದ ತಮ್ಮ ಹೆಸರನ್ನು ಭಜನೆ ಮಾಡಿಸುವ ಮೋದಿ ಅವರು ಪ್ರಜಾಪ್ರಭುತ್ವದಲ್ಲಿ ವಾಡಿಕೆಯಂತೆ ಮುಕ್ತ ಪ್ರತಿಕಾಗೋಷ್ಠಿ ನಡೆಸದೆ, ಸಂವಾದಗಳಲ್ಲಿ ಮಾಧ್ಯಮಗಳಿಗೆ ಉತ್ತರಿಸದೆ ಓಡಿಹೋಗುತ್ತಿದ್ದಾರೆ. ಯಾಕೆ?
  • ಹಿಂಸಾಚಾರಕ್ಕೆ ಬಲಿಯಾದ ಮಣಿಪುರದ ಮಣಿಪುರಿಯರನ್ನು, ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳಾ ಕುಸ್ತಿಪಟುಗಳನ್ನು ಹಾಗೂ ಅಗ್ನಿವೀರ್ ವೈಫಲ್ಯದಿಂದ ವಂಚಿಸಿದ ಮಿಲಿಟರಿ ಸೇವೆಯ ಯುವ ಆಕಾಂಕ್ಷಿಗಳನ್ನು ಭೇಟಿ ಮಾಡಲು ಮೋದಿ ಏಕೆ ಧೈರ್ಯ ತೋರುತ್ತಿಲ್ಲ? ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ, ತಮ್ಮನ್ನು ತಡೆಯುತ್ತೇವೆಂದು ಗಟ್ಟಿಯಾಗಿ ಹೇಳುತ್ತಿರುವ ರೈತರನ್ನು ಮೋದಿ ಯಾಕೆ ಭೇಟಿ ಮಾಡುತ್ತಿಲ್ಲ? ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮೂರುಗಳಿಗೆ ನಡೆದೇ ಹೊರಟಾಗ, ರಸ್ತೆಗಳಲ್ಲಿ ಬಳಲುವಾಗ ಹಾಗೂ ಕೊರೋನ 2ನೇ ಅಲೆಯಲ್ಲಿ ಜನರು ಸಾಯುತ್ತಿದ್ದಾಗ ಮೋದಿಯವರು ಯಾಕೆ ಕಾಣೆಯಾಗಿದ್ದರು.

ಹೀಗೆ, ಕಳೆದ 10 ವರ್ಷಗಳ ಇತಿಹಾಸವನ್ನು ನೋಡಿದರೆ, ಮೋದಿಯವರು ತಮ್ಮ ಬೆರಳೆಣಿಕೆಯ ಯಶಸ್ಸಿನ ಪ್ರಚಾರ ಪಡೆಯಲು ಮಾತ್ರ ಚಾಣಾಕ್ಷತೆ ತೋರುತ್ತಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ, ಅವರು ಯಾವಾಗಲೂ ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಲು ಅಥವಾ ಎದುರಿಸಲು ಭಯಪಡುತ್ತಾರೆ ಮತ್ತು ಓಡಿಹೋಗುತ್ತಾರೆ.

ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ವಿಕೃತ ಕಾಮುಕನೆಂದು ಕರೆಸಿಕೊಳ್ಳುತ್ತಿರುವ ಆರೋಪಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದಕ್ಕೆ, ಆತನಿಗಾಗಿ ಮತ ಕೇಳಿದ್ದಕ್ಕೆ ಕ್ಷಮೆ ಯಾಚಿಸುವ ನೈತಿಕ ಸ್ಥೈರ್ಯವನ್ನು ಮೋದಿ ಇನ್ನೂ ತೋರಿಸಿಲ್ಲ. ಅಲ್ಲದೆ, ಪ್ರಜ್ವಲ್‌ನ ಕೃತ್ಯಗಳನ್ನು ಐದು ತಿಂಗಳ ಹಿಂದೆಯೇ ಬಿಜೆಪಿ ನಾಯಕರಿಗೆ ತಿಳಿಸಿ ಬಿಜೆಪಿಯ ಮುಖಂಡ ಪತ್ರ ಬರೆದರೂ, ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದಾದರೂ ಯಾಕೆ?

ರಾಹುಲ್ ಗಾಂಧಿಯವರಂತೆ ಮೋದಿಯವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಯಾಕೆ ಮುಂದಾಗುವುದಿಲ್ಲ?

ಈಗ ಹೇಳಿ, ರಾಹುಲ್ ಗಾಂಧಿ ಅಥವಾ ನರೇಂದ್ರ ಮೋದಿ– ಇಬ್ಬರಲ್ಲಿ ಕಠಿಣ ಪ್ರಶ್ನೆಗಳಿಗೆ ಯಾವ ನಾಯಕ ಹೆಚ್ಚು ಭಯಪಡುತ್ತಾರೆ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X