ಮದ್ಯ ಹಾಗೂ ಸಿಗರೇಟ್‌ನ ಚಟ ಹೊಂದಿದ್ದ ಪತ್ನಿಯನ್ನು ಪತಿಯೋರ್ವ ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಪತ್ನಿ, ಪತಿಯನ್ನು ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ.
ಉತ್ತರ ಪ್ರದೇಶ ಸಿಯೋಹರಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ವಿಡಿಯೋ ವೈರಲಾದ ಬಳಿಕ ತಪ್ಪಿತಸ್ಥ ಮಹಿಳೆಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಬಂಧಿತ ಮಹಿಳೆಯನ್ನು ಮೆಹರ್ ಜಹಾನ್(30) ಎಂದು ಗುರುತಿಸಲಾಗಿದೆ. ಪತ್ನಿಯ ಚಿತ್ರಹಿಂಸೆಯಿಂದ ನಲುಗಿದ ಪತಿ ಮನ್ನಾನ್ ಝೈದಿ ಎಂಬಾತನನ್ನು ಸದ್ಯ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಘಟನೆ?
ಮೆಹರ್ ಜಹಾನ್ ಹಾಗೂ ಮನ್ನಾನ್ ಝೈದಿ ಪರಸ್ಪರ ಪ್ರೀತಿಸುತ್ತಿದ್ದರು. 2023ರ ನವೆಂಬರ್ 17ರಂದು ಉತ್ತರ ಪ್ರದೇಶದ ಬಿಜನೋರ್‌ನಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕ ಕೌಟುಂಬಿಕ ಕಲಹದಿಂದಾಗಿ ಬೇರೆಯೇ ಮನೆ ಮಾಡಿಕೊಂಡು, ವಾಸವಾಗಿದ್ದರು.
#Bijnor: Mehar Jahan married Mannan Zaidi after having a love affair with him on 17 Nov 23 in Bijnor UP.
🎈They started living in a separate house as she insisted.
🎈Soon after separation Mannan discovered that Mehar drinks alcohol and smokes.
🎈Mehar started torturing… pic.twitter.com/yMUi7ZuOvU
— Saba Khan (@ItsKhan_Saba) May 6, 2024
ಇವರಿಬ್ಬರ ದಾಂಪತ್ಯದ ನಡುವೆ ಬಿರುಕು ಮೂಡಿದ ಬಳಿಕ ಮೆಹರ್ ಮದ್ಯಪಾನ ಹಾಗೂ ಸಿಗರೇಟ್ ಸೇದಲು ಆರಂಭಿಸಿದ್ದಾಳೆ. ಈ ದುರಭ್ಯಾಸವನ್ನು ನಿಲ್ಲಿಸಬೇಕು ಎಂದು ಗಂಡ ಬುದ್ಧಿಮಾತು ಹೇಳಿದ್ದರಿಂದ ಕೋಪಗೊಂಡ ಪತ್ನಿ, ನಿನ್ನ ಮೇಲೆ ವರದಕ್ಷಿಣೆ ಕಿರುಕುಳದ ಸುಳ್ಳು ಆರೋಪ ಹೊರಿಸಿ, ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದಾರೆ.
ಇದರಿಂದ ಸುಮ್ಮನಾಗಿದ್ದರೂ ಮತ್ತೆ ಮತ್ತೆ ದುರಾಭ್ಯಾಸವನ್ನು ನಿಲ್ಲಿಸಿರಲಿಲ್ಲ. ಈ ಮಧ್ಯೆ ಪತ್ನಿಯಿಂದಲೇ ತನಗೆ ಜೀವ ಬೆದರಿಕೆ ಇರುವುದನ್ನು ಅರಿತಿದ್ದ ಗಂಡ, ಆಕೆಗೆ ಗೊತ್ತಾಗದಂತೆ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದಾನೆ. ಈ ನಡುವೆ ಗಂಡ ಮತ್ತೆ ಬುದ್ಧಿಮಾತು ಹೇಳಿದ್ದಕ್ಕೆ, ದಂಪತಿಗಳ ನಡುವೆ ಜಗಳವಾಗಿದೆ.
ಈ ನಡುವೆ ಗಂಡನಿಗೆ ಹಾಲಿನಲ್ಲಿ ಮತ್ತು ಬರುವ ಔಷಧಿ ನೀಡಿದ ಆರೋಪಿ ಪತ್ನಿ, ಪ್ರಜ್ಞೆ ತಪ್ಪಿದ ಬಳಿಕ ಆತನ ಎರಡೂ ಕೈಗಳನ್ನು ಕಟ್ಟಿ ಹಾಕಿದ್ದಾಳೆ. ಆ ಬಳಿಕ ಗುಪ್ತಾಂಗಕ್ಕೆ ಸಿಗರೇಟ್‌ನಿಂದ ಚಿತ್ರಹಿಂಸೆ ನೀಡಿದ್ದಾಳೆ. ಈ ಎಲ್ಲ ಬೆಳವಣಿಗೆಯು ಗಂಡ ಮನೆಯಲ್ಲಿ ಹಾಕಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಬಳಿಕ ಈ ವಿಡಿಯೋವನ್ನು ಆಧಾರವಾಗಿರಿಸಿ, ಗಂಡ ಪೊಲೀಸರಿಗೆ ದೂರು ನೀಡಿದ್ದಾನೆ.
ದೂರಿನಲ್ಲಿ, “ಪತ್ನಿ ಮೆಹರ್ ತನ್ನನ್ನು ದೈಹಿಕವಾಗಿ ನಿಂದಿಸಿದ್ದಾಳೆ. ತನ್ನ ಮೇಲೆ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಖಾಸಗಿ ಅಂಗಗಳನ್ನು ಸಿಗರೇಟಿನಿಂದ ಸುಡುವ ಮುನ್ನ ನನ್ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾಳೆ” ಎಂದು ಆರೋಪಿಸಿದ್ದಾನೆ.
ಪತಿ ದೂರು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸಿದ ನಂತರ ಸಿಯೋಹರಾ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದು, ಭಾನುವಾರ ಮಹಿಳೆಯನ್ನು ಬಂಧಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಪೂರ್ವ ಧರಂಪಾಲ್ ಸಿಂಗ್ ತಿಳಿಸಿದ್ದಾರೆ.
