- ಕೇರಳ ರಾಜ್ಯದಲ್ಲಿ ಬಿಜೆಪಿಗೆ ಪ್ರತಿಯಾಗಿ ಮುಂದಿನ ತಿಂಗಳು ಯುವ ಸಮ್ಮೇಳನ
- ರಾಜ್ಯದಲ್ಲಿ ಎಲ್ಲ ಸಮುದಾಯಗಳ ನಾಯಕರ ಜತೆ ಸಭೆ ನಡೆಸಲು ಕಾಂಗ್ರೆಸ್ ಚಿಂತನೆ
ಕೇರಳ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮತಗಳಿಕೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಯೋಜನೆ ರೂಪಿಸುತ್ತಿವೆ.
ಅಲ್ಪಸಂಖ್ಯಾತರ ಮೇಲಿನ ದಾಳಿಯ ಕುರಿತು ಕೇರಳ ರಾಜ್ಯದಲ್ಲಿ ಬೃಹತ್ ಅಭಿಯಾನದ ಮೂಲಕ ಪ್ರಚಾರ ನಡೆಸಲು ಕಾಂಗ್ರೆಸ್ ಅಣಿಯಾಗಿದೆ. ಅತ್ತ ಬಿಜೆಪಿ ಕೂಡ ಅಲ್ಪಸಂಖ್ಯಾತರ ಮತಬ್ಯಾಂಕ್‌ಗಾಗಿ ರಾಜ್ಯದಲ್ಲಿ ನ ಅಲ್ಪಸಂಖ್ಯಾತರ ಸಂಪರ್ಕ ಕಾರ್ಯಕ್ರಮ ಯೋಜಿಸಿದೆ.
“ಉತ್ತರ ಭಾರತದಲ್ಲಿ ಕ್ರಿಶ್ಚಿಯನ್ ಹಾಗೂ ದಲಿತರ ಮೇಲಿನ ಸಂಘ ಪರಿವಾರದ ದಾಳಿ ಬಹಿರಂಗಪಡಿಸಲು ಕೇರಳದಲ್ಲಿ ಅಭಿಯಾನದ ಮೂಲಕ ವ್ಯಾಪಕ ಪ್ರಚಾರ ನಡೆಸಬೇಕು” ಎಂದು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಗುರುವಾರ (ಏಪ್ರಿಲ್ 20) ನಿರ್ಧರಿಸಿದೆ.
ಕೇರಳ ರಾಜ್ಯದಲ್ಲಿ ನಾನಾ ಸಮುದಾಯಗಳೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು ಕಾಂಗ್ರೆಸ್ ಯೋಜಿಸುತ್ತಿದೆ.
ಇದೇ ವೇಳೆ ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಕ್ರಿಶ್ಚಿಯನ್ ಸಮುದಾಯ ನಾಯಕರೊಂದಿಗೆ ಸರಣಿ ಸಭೆ ನಡೆಸಿದ್ದಾರೆ. ಕೇರಳ ರಾಜ್ಯಕ್ಕೆ ಸೋಮವಾರ (ಏಪ್ರಿಲ್ 24) ಭೇಟಿ ನೀಡಿದಾಗ ಕೊಚ್ಚಿಯಲ್ಲಿ ಕ್ರಿಶ್ಚಿಯನ್ ಬಿಷಪ್‌ಗಳನ್ನು ಭೇಟಿ ಮಾಡುವುದಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಯು ಏಪ್ರಿಲ್ 24ರಂದು ಕೊಚ್ಚಿಯಲ್ಲಿ ಯುವ ಸಮ್ಮೇಳನ ಆಯೋಜಿಸಿದೆ. ಈ ವೇಳೆ ಪ್ರಧಾನಿ ಮೋದಿ ಯುವ ಜನತೆಯೊಂದಿಗೆ ಸಂವಾದ ನಡೆಸಲಿದ್ದಾರೆ ಎನ್ನಲಾಗಿದೆ.
ಕೇರಳ ರಾಜ್ಯದಲ್ಲಿ ಪಕ್ಷ ಎಲ್ಲ ಸಮುದಾಯಗಳ ನಾಯಕರೊಂದಿಗೆ ಚರ್ಚೆ ನಡೆಸಲಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಗುರುವಾರ ಹೇಳಿದ್ದಾರೆ. “ಎಲ್ಲ ಸಮುದಾಯಗಳ ನಾಯಕರ ಜತೆ ಸಭೆ ನಡೆಯಲಿದೆ. ರಾಜ್ಯದಲ್ಲಿ ಇದನ್ನು ಪಕ್ಷದ ದೈನಂದಿನ ಕಾರ್ಯದ ಭಾಗವನ್ನಾಗಿ ಮಾಡಲಾಗುವುದು” ಎಂದು ಅವರು ಹೇಳಿದರು.
“ಕೇರಳ ರಾಜ್ಯದಲ್ಲಿ ನಾವು ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಮೇಲೆ ಬಿಜೆಪಿ ಹಾಗೂ ಸಂಘ ಪರಿವಾರ ಸಂಸ್ಥೆಯಿಂದ ದಾಳಿ ಆಗುವುದನ್ನು ಜನರಿಗೆ ತಿಳಿಸುತ್ತೇವೆ. ಇದಕ್ಕಾಗಿ ರಾಜ್ಯದಲ್ಲಿ ವಸ್ತುಪ್ರದರ್ಶನ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ ಏರ್ಪಾಡು ಮಾಡಲಾಗುವುದು. ಇದಕ್ಕಾಗಿ ಪಕ್ಷದ ವತಿಯಿಂದ ಸಮಿತಿಯೊಂದನ್ನು ರಚಿಸಲಾಗುವುದು” ಎಂದು ಕೆ ಸುಧಾಕರನ್ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪ್ರಭಾವವನ್ನು ಕ್ಷೀಣಿಸಲು ಬಿಜೆಪಿ ಹಾಗೂ ಸಿಪಿಐ ಒಂದಾಗಿವೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಾನನಷ್ಟ ಮೊಕದ್ದಮೆ; ದೋಷಾರೋಪಣೆಗೆ ತಡೆ ಕೋರಿ ಹೈಕೋರ್ಟ್‌ಗೆ ರಾಹುಲ್ ಗಾಂಧಿ ಅರ್ಜಿ
ರಾಜ್ಯ ಕಾಂಗ್ರೆಸ್ ಸಹ ಮುಂದಿನ ತಿಂಗಳು ಕೊಚ್ಚಿಯಲ್ಲಿ ಇದೇ ಮಾದರಿಯ ಯುವ ಸಮ್ಮೇಳನ ಆಯೋಜಿಸಲು ಯೋಜಿಸಿದೆ. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ತಿಳಿಸಿದೆ.
“ಯುವ ಸಮ್ಮೇಳನದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯುವ ಜನಾಂಗ ವಿರೋಧಿ ನೀತಿಗಳ ಬಗ್ಗೆ ಚರ್ಚಿಸಲಾಗುವುದು. ರಾಹುಲ್ ಗಾಂಧಿ ಅವರು ಸಮ್ಮೇಳನದ ನೇತೃತ್ವ ವಹಿಸಲಿದ್ದಾರೆ. ಇದು ಬಿಜೆಪಿಯ ಯುವ ಸಮ್ಮೇಳನಕ್ಕೆ ಪ್ರತಿಯಾಗಿ ಇರಲಿದೆ” ಎಂದು ಕಾಂಗ್ರೆಸ್ ಹೇಳಿದೆ.
ಈ ರೀತಿ ಅಲ್ಲೊಂದು ಇಲ್ಲೊಂದು ಸಮ್ಮೇಳನಗಳನ್ನು ಆಯೋಜಿಸಿ ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಜನರ ಮನ ಗೆದ್ದು ಅಧಿಕಾರಕ್ಕೆ ಬಂದರೆ ಅದೇ ಒಂದು ಸಾಧನೆ…