ಸ್ತ್ರೀವಾದ ಪಶ್ಚಿಮಕ್ಕಷ್ಟೇ ಸೀಮಿತವಾಗಿಲ್ಲ. ಇದರ ಅನೇಕ ಬೇರುಗಳನ್ನು ವಚನ ಸಾಹಿತ್ಯದಲ್ಲಿ, ಬುದ್ಧ, ಗಾಂಧಿ, ಅಂಬೇಡ್ಕರ್ ಚಿಂತನೆಗಳಲ್ಲಿ ಕಾಣಬಹುದು. ಭಾರತಕ್ಕೇ ವಿಶಿಷ್ಟವಾದ ಸ್ತ್ರೀವಾದವನ್ನು ರೂಪಿಸುವಲ್ಲಿ ಅನೇಕ ಚಿಂತಕಿಯರು ಶ್ರಮಿಸಿದ್ದಾರೆ. ಎಲ್ಲ ಬಗೆಯ ಶೋಷಣೆಗಳನ್ನು ವಿರೋಧಿಸುವ ಗಂಡಸರೂ ಸ್ತ್ರೀವಾದಿಗಳೇ ಎಂದು ಸಾಹಿತಿ ಎಲ್ ಜಿ ಮೀರಾ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಸ್ತ್ರೀ ವಾದಿ ಸಾಹಿತ್ಯ ವಿಮರ್ಶೆಯ ನೂತನ ಹೊಳಹುಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಇವರು ಪಶ್ಚಿಮದಲ್ಲಿ ಸ್ತ್ರೀವಾದ ಹಾದುಬಂದ ಘಟ್ಟಗಳನ್ನು ಪರಿಚಯಿಸುತ್ತ, ಕನ್ನಡದಲ್ಲಿ ಮಹಿಳಾ ಸಾಹಿತ್ಯ ಮತ್ತು ವಿಮರ್ಶೆಯ ಚರಿತ್ರೆಯ ಮೇಲೆ ಬೆಳಕು ಚೆಲ್ಲಿದರು. ಅಲಕ್ಷ್ಯಕ್ಕೊಳಗಾಗಿದ್ದ ಲೇಖಕಿಯರ ಬರಹಗಳನ್ನು ಎನ್ ಗಾಯತ್ರಿ, ವಿಜಯಾ ದಬ್ಬೆ ಮುಂತಾದ ವಿಮರ್ಶಕಿಯರು ಮರುಶೋಧಿಸಿ, ಚರ್ಚಿಸಿದ್ದಾರಲ್ಲದೆ, ಕನ್ನಡ ಸಾಹಿತ್ಯವನ್ನು ಸ್ತ್ರೀವಾದಿ ಓದಿಗೆ ಒಳಪಡಿಸಿ, ಸ್ತ್ರೀವಾದಿ ದೃಷ್ಟಿಯ ಹೊಸ ಸಾಹಿತ್ಯ ಸೃಷ್ಟಿಗೂ ಪ್ರೇರಣೆ ನೀಡಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಲೋಕಸಭಾ | ಪ್ರಜಾಪ್ರಭುತ್ವ ಹಬ್ಬದಲ್ಲಿ ಗಣ್ಯರು, ವೃದ್ಧರು, ಮಹಿಳೆಯರು ಮತದಾನ
ಕಾರ್ಯಕ್ರಮದಲ್ಲಿ ವಿವಿ ಡಾ ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ ಶೆಟ್ಟಿ, ಸಾಹಿತಿಗಳಾದ ಡಾ. ರವಿಕುಮಾರ್ ನೀಹ, ಗುರುಪ್ರಸಾದ್ ಕಂಟಲಗೆರೆ, ಸಹಪ್ರಾಧ್ಯಾಪಕಿ ಡಾ. ಗೀತಾ ವಸಂತ, ಪ್ರಾಧ್ಯಾಪಕರಾದ ಪ್ರೊ. ಅಣ್ಣಮ್ಮ, ಡಾ. ಪಿ ಎಂ ಗಂಗಾಧರಯ್ಯ ಇದ್ದರು.
