ಬಿಜೆಪಿಯ ಮತಗಟ್ಟೆ ಏಜೆಂಟರು ತಮ್ಮ ಪಕ್ಷದ ಚಿಹ್ನೆ ಇರುವ ಪೆನ್ನು ಬಳಸಿದ್ದು, ಏಜೆಂಟರು ಮತ್ತು ಮತಗಟ್ಟೆ ಅಧಿಕಾರಿಗಳಿಂದ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗಿದೆ ಎಂದು ಗುಜರಾತ್ ಕಾಂಗ್ರೆಸ್ ಮಂಗಳವಾರ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಬಿಜೆಪಿ ಕಾರ್ಯಕರ್ತರು ಮತದಾರರಿಗೆ ‘ಬೆದರಿಕೆ’ ಹಾಕುತ್ತಿದ್ದಾರೆ. ಇನ್ನು ಸಮಾಜ ವಿರೋಧಿಗಳು ಕೆಲವು ಪ್ರದೇಶಗಳಲ್ಲಿ ಮತದಾನ ಪ್ರಕ್ರಿಯೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಅದರ ಮುಖಂಡರು ಆರೋಪಿಸಿದ್ದಾರೆ.
This is the condition of Election Commission
Gujarat Rajya Sabha MP Shaktisinh Gohil exposed Election Commission where BJP pens were used by officials during duty.
Can the public expect free and fair elections? pic.twitter.com/WBWPrympBH
— Ravinder Kapur. (@RavinderKapur2) May 7, 2024
“ಬಿಜೆಪಿ ರಾಜಕೀಯ ಪಕ್ಷದ ಚಿಹ್ನೆ ಹೊಂದಿರುವ ಸಾಮಾಗ್ರಿ ಮತ್ತು ಪೆನ್ನುಗಳ ಬಳಕೆಯನ್ನು ಮತಗಟ್ಟೆಯಲ್ಲಿ ಮಾಡಿದೆ. ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಮತಗಟ್ಟೆ ಏಜೆಂಟರು ಮತ್ತು ಅಧಿಕಾರಿಗಳು ಉಲ್ಲಂಘಿಸಿರುವುದು ಕಂಡು ಬಂದಿದೆ. ಪೆನ್ನುಗಳು ಬಿಜೆಪಿಯ ಚಿತ್ರ/ಚಿಹ್ನೆಯನ್ನು ಹೊಂದಿವೆ ಮತ್ತು ಅದನ್ನು ಮತಗಟ್ಟೆಗಳಲ್ಲಿ ಬಳಸಲಾಗುತ್ತಿದೆ” ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಮೋದಿ, ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್
ಪ್ರತಿ ಮತಗಟ್ಟೆಯನ್ನು ಬಿಜೆಪಿಯ ಚಿಹ್ನೆಯ ಧ್ವಜ ಮತ್ತು ತೋರಣಗಳಿಂದ ಅಲಂಕರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಬಿಜೆಪಿ ಹೀಗೆ ಮಾಡಿದೆ ಎಂದು ಕೂಡಾ ದೂರಿನಲ್ಲಿ ತಿಳಿಸಲಾಗಿದೆ.
19 ದೂರುಗಳನ್ನು ದಾಖಲಿಸಿದ ಕಾಂಗ್ರೆಸ್!
ಗುಜರಾತ್‌ನಲ್ಲಿ ಮೇ 7ರಂದು ಲೋಕಸಭೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಒಟ್ಟು 19 ದೂರುಗಳನ್ನು ದಾಖಲಿಸಿದೆ. ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹ ಗೋಹಿಲ್ ದೂರು ದಾಖಲು ಮಾಡಿದ್ದಾರೆ.