ರೆಸ್ಟೋರೆಂಟ್‌ನ ಪರವಾನಗಿ ನವೀಕರಣಕ್ಕೆ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ನಿರಂಜನ್ ಎಂಜಿ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಅರಳು ಮಲ್ಲಿಗೆ ಗ್ರಾಮ ಪಂಚಾಯತಿ ಪಿಡಿಒ ನಿರಂಜನ್ ಎಂ.ಜಿ ಅವರು ನರಸಿಂಹ ಮೂರ್ತಿ ಎಂಬವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮೂರ್ತಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಯುಕ್ತ ಮಾರ್ಗದರ್ಶನದಂತೆ ಮೂರ್ತಿ ಅವರು ತಾಲೂಕು ಪಂಚಾಯತಿ ಆವರಣದಲ್ಲಿ ನಿರಂಜನ್‌ಗೆ ಲಂಚ ನೀಡಲು ತೆರಳಿದ್ದರು. ಈ ವೇಳೆ, ದಾಳಿ ನಡೆಸಿದ ಪೊಲೀಸರು, ನಿರಂಜನ್ ಅವರನ್ನು ವಶಕ್ಕೆ ಪಡೆದಿದ್ದಾರೆ.