ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆದಿದ್ದು, ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ 86 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲ ನಾಮಪತ್ರಗಳ ಪುರಸ್ಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್.ತಿಳಿಸಿದ್ದಾರೆ.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ 13 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎಲ್ಲವೂ ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷ(ಬಿಜೆಪಿ)ದಿಂದ ಚಿದಾನಂದ ಸಿ.ಆರ್, ಆಮ್ ಆದ್ಮಿ ಪಕ್ಷ(ಎಎಪಿ)ದ ಮಂಜೇಗೌಡ ಬಿ.ಎಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಐಎನ್‌ಸಿ)ದಿಂದ ಎಂ.ಎ ಗೋಪಾಲಸ್ವಾಮಿ, ಜನತಾದಳ (ಜಾತ್ಯತೀತ) ಪಕ್ಷದ ಸಿ.ಎನ್. ಬಾಲಕೃಷ್ಣ, ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಆರ್ ರಾಜು, ಉತ್ತಮ ಪ್ರಜಾಕೀಯ ಪಕ್ಷದ ಕಿರಣ್ ಟಿ.ಕೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪವಿತ್ರ ಜೆ.ಕೆ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಹೆಚ್.ಡಿ ರೇವಣ್ಣ, ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿಯ ಶಿವಕುಮಾರ್ ನಾಮಪತ್ರಗಳನ್ನು ಸಲ್ಲಿಸಿದ್ದು, ಎಂ.ಜಿ ನಂಜೇಗೌಡ, ಹೆಚ್.ಎಂ ರವಿ, ನಟರಾಜ ಪಿ.ಎನ್, ಸುಬ್ರಹ್ಮಣ್ಯ ಎಂ ಪಕ್ಷೇತರವಾಗಿ ನಾಮಪತ್ರಗಳನ್ನು ಸಲ್ಲಿಸಿದ್ದು, ಎಲ್ಲವೂ ಕ್ರಮಬದ್ಧವಾಗಿವೆ” ಎಂದು ತಿಳಿಸಿದ್ದಾರೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರ
“ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ 13 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಭಾರತೀಯ ಜನತಾ ಪಕ್ಷದ ಜಿ.ವಿ ಬಸವರಾಜು, ಆಮ್ ಆದ್ಮಿ ಪಕ್ಷದ ಜಿ.ಜಿ ದಯಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ.ಎಂ ಶಿವಲಿಂಗೇಗೌಡ, ಜನತಾದಳ (ಜಾತ್ಯತೀತ) ಪಕ್ಷದ ಎನ್.ಆರ್ ಸಂತೋಷ್, ಬಹುಜನ ಸಮಾಜ ಪಾರ್ಟಿಯ ಎನ್.ಸಿ ಚಂದ್ರಶೇಖರ್, ಉತ್ತಮ ಪ್ರಜಾಕೀಯ ನವೀನ್ ಎಸ್.ಕೆ, ಕರ್ನಾಟಕ ರಾಷ್ಟ್ರ ಸಮಿತಿ ಉಮೆಶ್ ಬಿ.ಎಂ, ಲೋಕಶಕ್ತಿ ಪಕ್ಷದ ಹೊಳೆಯಪ್ಪ ನಾಮಪತ್ರ ಸಲ್ಲಿಸಿದ್ದು, ಬಿ.ಎಸ್ ಅಶೋಕ, ಡಿ ಕಿಶೋರ್ ಕುಮಾರ್, ರವಿ, ಹೆಚ್.ಆರ್ ರಾಜೇಶ್, ಡಿ.ಜಿ ರಂಗಪ್ಪ ಪಕ್ಷೇತರ ಅಭ್ಯರ್ಥಿಗಳಾಗಿ ನಾಮತ್ರ ಸಲ್ಲಿಸಿದ್ದಾರೆ. ಎಲ್ಲ ನಾಮಪತ್ರಗಳೂ ಕ್ರಮಬದ್ಧವಾಗಿವೆ” ಎಂದು ತಿಳಿಸಿದ್ದಾರೆ.
ಬೇಲೂರು ವಿಧಾನಸಭಾ ಕ್ಷೇತ್ರ
ಬೇಲೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು 13 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಭಾರತೀಯ ಜನತಾ ಪಕ್ಷದ ಹೆಚ್.ಕೆ ಸುರೇಶ್, ಆಮ್ ಆದ್ಮಿ ಪಕ್ಷದ ಪರ್ವತೇಗೌಡ ಹೆಚ್.ಪಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಶಿವರಾಮ್, ಜನತಾದಳ(ಜಾತ್ಯತೀತ)ದ ಕೆ.ಎಸ್ ಲಿಂಗೆಶ್, ಬಹುಜನ ಸಮಾಜ ಪಾರ್ಟಿಯ ಗಂಗಧಾರ್ ಡಿ.ಎಸ್, ಕರ್ನಾಟಕ ರಾಷ್ಟ್ರ ಸಮಿತಿ ಆದೇಶ್.ಸಿ.ಎನ್, ಆರ್‌ಪಿಐ ಕರ್ನಾಟಕ ಪಕ್ಷದ ಡಿ.ಡಿ ಲೊಕೇಶ್ ನಾಮಪತ್ರ ಸಲ್ಲಿಸಿದ್ದು, ದಿನೆಶ್ ಹೆಚ್.ಆರ್, ಪರಮೇಶ್ ಎನ್.ಎಂ, ಪ್ರದೀಪ್ ಹೆಚ್.ಸಿ, ಭವ್ಯ ಸಿ.ಆರ್, ಡಿ.ಆರ್ ಮಲ್ಲಿಕಾರ್ಜುನ, ಮಹೇಶ್ ಬಿ ಆರ್ ಎಂಬವರು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲ ನಾಮಪತ್ರಗಳೂ ಕ್ರಮಬದ್ಧವಾಗಿವೆ” ಎಂದರು.
ಹಾಸನ ವಿಧಾನಸಭಾ ಕ್ಷೇತ್ರ
ಹಾಸನ ವಿಧಾನಸಭಾ ಕ್ಷೇತ್ರದಿಂದ 11 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಭಾರತೀಯ ಜನತಾ ಪಕ್ಷದ ಪ್ರೀತಮ್ ಜೆ.ಗೌಡ, ಆಮ್ ಆದ್ಮಿ ಪಕ್ಷದ ಎ.ಟಿ ಯೋಗೀಶ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಕೆ ರಂಗಸ್ವಾಮಿ, ಜನತಾದಳ (ಜಾತ್ಯತೀತ) ಪಕ್ಷದ ಹೆಚ್.ಪಿ ಸ್ವರೂಪ್, ಬಹುಜನ ಸಮಾಜ ಪಾರ್ಟಿಯ ಹೆಚ್.ಪಿ ಮಲ್ಲಯ್ಯ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಸ್ವರೂಪ್ ಬಿ.ಎಂ ನಾಮಪತ್ರ ಸಲ್ಲಿಸಿದ್ದು, ಆರ್.ಜಿ ಸತೀಶ್, ಹೆಚ್.ಪಿ ಸ್ವಾಮಿ, ಕಾವ್ಯ ಹೆಚ್.ಜಿ, ಕೆ.ಪಿ ಶಿವಕುಮಾರ್ ಎಂಬುವವರು ಪ್ರತ್ಯೇಕ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಎಲ್ಲ ನಾಮಪತ್ರಗಳೂ ಕ್ರಮಬದ್ಧವಾಗಿವೆ” ಎಂದಿದ್ದಾರೆ.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ
“ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ 8 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಭಾರತೀಯ ಜನತಾ ಪಕ್ಷದ ಜಿ ದೇವರಾಜೇಗೌಡ, ಆಮ್ ಆದ್ಮಿ ಪಕ್ಷದ ಗೀತಾ ಬಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶ್ರೇಯಸ್ ಎಂ.ಪಟೇಲ್, ಜನತಾದಳ (ಜಾತ್ಯತೀತ) ಪಕ್ಷದ ಹೆಚ್ ಡಿ ರೇವಣ್ಣ, ಬಹುಜನ ಸಮಾಜ ಪಾರ್ಟಿಯ ತಾರೇಶ್ ಹೆಚ್.ಎಸ್, ಕರ್ನಾಟಕ ರಾಷ್ಟ್ರ ಸಮಿತಿ ಬಿ.ಕೆ ನಾಗರಾಜ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಹೆಚ್.ಡಿ ರೇವಣ್ಣ ನಾಮಪತ್ರ ಸಲ್ಲಿಸಿದ್ದು, ಡಿ.ಆರ್ ರಂಗಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ” ಎಂದು ತಿಳಿಸಿದ್ದಾರೆ.
ಅರಕಲಗೂಡು ವಿಧಾನಸಭಾ ಕ್ಷೇತ್ರ
“ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಒಟ್ಟು 17 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಭಾರತೀಯ ಜನತಾ ಪಕ್ಷದ ಹೆಚ್. ಯೋಗಾ ರಮೇಶ್, ಆಮ್ ಆದ್ಮಿ ಪಕ್ಷದ ಜಿ.ಟಿ ಜವರೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಚ್.ಪಿ ಶ್ರೀಧರ್ ಗೌಡ, ಜನತಾದಳ (ಜಾತ್ಯತೀತ)ದ ಎ.ಮಂಜು, ಬಹುಜನ ಸಮಾಜ ಪಾರ್ಟಿಯ ಹರೀಶ್ ಎ.ಪಿ, ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ ಕೇಶವಮೂರ್ತಿ ಹೆಚ್.ಟಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ದಿವಾಕರ್ ಗೌಡ ಸಿ.ಡಿ, ಭಾರತೀಯ ಡಾ. ಬಿ.ಆರ್ ಅಂಬೇಡ್ಕರ್ ಜನತಾ ಪಾರ್ಟಿಯ ಮಂಜುನಾಥ ಹೆಚ್.ಪಿ, ಉತ್ತಮ ಪ್ರಜಾಕೀಯ ಪಕ್ಷದ ಶಿವರಾಜ್ ಜಿ.ಆರ್ ನಾಮಪತ್ರ ಸಲ್ಲಿಸಿದ್ದು, ಎಂ.ಟಿ ಕೃಷ್ಣೇಗೌಡ, ಪುಟ್ಟರಾಜ, ಪುನೀತ್ ಬಿ.ಆ ರ್, ಎ.ಎಂ ಮಲ್ಲೇಶ್, ವಿಜಯ ಭಾರತಿ, ಎಮ್.ಸಿ ವಿಶ್ವನಾಥ, ಎಮ್.ಆರ್ ಶಿವಣ್ಣ , ಶ್ರೀನಿವಾಸ್ ಎಂ.ಜಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ” ಎಂದಿದ್ದಾರೆ.
ಸಕಲೇಶಪುರ ವಿಧಾನಸಭಾ ಕ್ಷೇತ್ರ
ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಒಟ್ಟು 11 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಭಾರತೀಯ ಜನತಾ ಪಕ್ಷದ ಎಸ್.ಮಂಜುನಾಥ, ಆಮ್ ಆದ್ಮಿ ಪಕ್ಷದ ಕೆ.ಸ್ ಪವನ್ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುರಳಿ ಮೋಹನ್, ಜನತಾದಳ(ಜಾತ್ಯತೀತ)ದ ಕುಮಾರಸ್ವಾಮಿ ಹೆಚ್.ಕೆ, ಬಹುಜನ ಸಮಾಜ ಪಾರ್ಟಿಯ ಡಿ ಶಿವಮ್ಮ, ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ ಪ್ರದೀಪ್ ಬಿ.ವಿ, ಕರುನಾಡ ಪಾರ್ಟಿಯ ಹೆಚ್.ಎಸ್ ಕುಮಾರಸ್ವಾಮಿ, ಭಾರತೀಯ ಡಾ. ಬಿ.ಆರ್ ಅಂಬೇಡ್ಕರ್ ಜನತಾ ಪಾರ್ಟಿಯ ಮಂಜುನಾಥ ಹೆಚ್.ಪಿ, ಉತ್ತಮ ಪ್ರಜಾಕೀಯ ಪಕ್ಷದ ಪ್ರತಾಪ್ ನಾಮಪತ್ರಗಳನ್ನು ಸಲ್ಲಿಸಿದ್ದು, ರವಿ ಜಿ.ಸಿ, ಲೋಕೇಶ್ ಕುಮಾರ್ ಕೆ, ವೇಣು ಎಂ.ಆರ್ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲ ಅಭ್ಯರ್ಥಿಗಳ ನಾಮಪತ್ರಗಳೂ ಕ್ರಮಬದ್ಧವಾಗಿವೆ” ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್.ತಿಳಿಸಿದ್ದಾರೆ.