‘Yes’, ಮೋದಿ ಹೇಳಿದ್ದು ಸರಿ; ಚುನಾವಣೆ ವೇಳೆ ಅದಾನಿ-ಅಂಬಾನಿ ವಿಷಯ ಚರ್ಚೆಯಾಗಲೇಬೇಕು!

Date:

Advertisements

ಲೋಕಸಭಾ ಚುನಾವಣೆಯ ಮೂರು ಹಂತದ ಮತದಾನ ಮುಗಿದಿದೆ. ಇನ್ನು, ನಾಲ್ಕು ಹಂತಗಳ ಮತದಾನವಷ್ಟೇ ಬಾಕಿ ಇದೆ. ಈಗಾಗಲೇ ಮುಗಿದಿರುವ ಮತದಾನಗಳು ಬಿಜೆಪಿಗೆ ಸೋಲಿನ ಆತಂಕವನ್ನು ಹೆಚ್ಚಿಸಿವೆ. ಈ ಆತಂಕ ಪ್ರಧಾನಿ ಮೋದಿ ಅವರ ದ್ವೇಷ ಭಾಷಣದಲ್ಲಿ ಕಾಣಿಸುತ್ತಿದೆ. ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಮೋದಿ ಅವರು ನಿರಂತರವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ವಿರುದ್ಧ ದ್ವೇಷಪೂರಿತ ಸುಳ್ಳು ಭಾಷಣಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ, ಮೇ 8ರಂದು ತೆಲಂಗಾಣದ ವೇಮುಲವಾಡದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, “ಕಳೆದ ಐದು ವರ್ಷಗಳಿಂದ ಅಂಬಾನಿ–ಅದಾನಿಯನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಮಾಡುತ್ತಿದ್ದ ಶೆಹಜಾದಾ (ರಾಹುಲ್‌ ಗಾಂಧಿ), ಇದೀಗ ಏಕಾಏಕಿ ಅಂಬಾನಿ-ಅದಾನಿ ವಿರುದ್ಧ ಪ್ರಶ್ನಿಸುವುದನ್ನು ನಿಲ್ಲಿಸಿದ್ದಾರೆ. ಈ ಬದಲಾವಣೆಗೆ ಕಾರಣವೇನೆಂದು ಕಾಂಗ್ರೆಸ್‌ ಸ್ಪಷ್ಟಪಡಿಸಲಿ” ಎಂದು ಹೇಳಿದ್ದಾರೆ.

“ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರೊಂದಿಗೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ. ಗುಜರಾತಿನ ಇಬ್ಬರು ಉದ್ಯಮಿಗಳಿಗೆ ಮೋದಿ ಆಡಳಿತವು ಹೆಚ್ಚು ಒಲವು ತೋರಿದೆ. ಪ್ರಧಾನಮಂತ್ರಿ ಈ ಇಬ್ಬರಿಗೆ ದೇಶವನ್ನು ಮಾರಿದ್ದಾರೆ ಅಂತ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು. ಕಳೆದ ಐದು ವರ್ಷದಿಂದ ರಾಹುಲ್ ಗಾಂಧಿ ಇದೇ ಮಾತನ್ನ ಪುನರಾವರ್ತನೆ ಮಾಡುತ್ತಿದ್ದುದ್ದನ್ನು ನೀವು ಕೇಳಿರಬಹುದು. ಐದು ಉದ್ಯಮಿಗಳು, ಐದು ಉದ್ಯಮಿಗಳು, ಐದು ಉದ್ಯಮಿಗಳು ಐದು ವರ್ಷಗಳ ಕಾಲ – ಇದೊಂದೇ ನಿರಂತರವಾಗಿಪುನರಾವರ್ತನೆಯಾಗಿದೆ. ನಂತರ ನಿಧಾನವಾಗಿ ರಾಗ ಬದಲಾಯಿತು, ಅಂಬಾನಿ-ಅದಾನಿ, ಅಂಬಾನಿ-ಅದಾನಿ, ಅಂಬಾನಿ-ಅದಾನಿ ಎಂದಾಯಿತು” ಎಂದು ಮೋದಿ ಹೇಳಿದ್ದಾರೆ.

“ಆದರೆ, ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಅವರು ಅಂಬಾನಿ-ಅದಾನಿಯನ್ನು ನಿಂದಿಸುವುದನ್ನು ನಿಲ್ಲಿಸಿದ್ದಾರೆ. ಹಾಗಾದರೆ, ನಾನು ಇಂದು ಅವರನ್ನು ತೆಲಂಗಾಣದ ನೆಲದಲ್ಲಿ ನಿಂತು ಕೇಳುತ್ತಿದ್ದೇನೆ. ಅವರು ಅಂಬಾನಿ-ಅದಾನಿಯಿಂದ ಎಷ್ಟು ಹಣವನ್ನು ತೆಗೆದುಕೊಂಡಿದ್ದಾರೆ? ಅವರಿಂದ ಎಷ್ಟು ಚೀಲ ಕಪ್ಪು ಹಣ ಪಡೆದಿದ್ದಾರೆ” ಎಂದು ಮೋದಿ ಕೇಳಿದ್ದಾರೆ.

Advertisements

ಆದರೆ, ಸತ್ಯವೇನೆಂದರೆ, ಮೋದಿ ಅವರು ಹೇಳುತ್ತಿರುವುದೇ ಸುಳ್ಳು. ಚುನಾವಣೆ ಘೋಷಣೆಯಾದಾಗಿನಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ಅದಾನಿ-ಅಂಬಾನಿ ಬಗ್ಗೆ ಮಾತಾಡೋದನ್ನಾ ನಿಲ್ಲಿಸಿದ್ದಾರಾ? ಖಂಡಿತಾ ಇಲ್ಲ. ಅವರು ನಿರಂತರವಾಗಿ ಮಾತನಾಡುತ್ತಲೇ ಇದ್ದಾರೆ.

ಚುನಾವಣೆ ಘೊಷಣೆಯಾದ ಬಳಿಕವೂ ರಾಹುಲ್ ಮತ್ತು ಖರ್ಗೆ ಹಲವಾರು ಚುನಾವಣಾ ರ್ಯಾಲಿಗಳಲ್ಲಿ ಅಂಬಾನಿ-ಅದಾನಿ ಮತ್ತು ಮೋದಿ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಏಪ್ರಿಲ್ 24ರಂದು ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, “ಈ ದೇಶದಲ್ಲಿ ಏನಾಗುತ್ತಿದೆ ಎಂದರೆ, ಇಬ್ಬರು ಮಾರಾಟಗಾರರು ಮತ್ತು ಇಬ್ಬರು ಖರೀದಿದಾರರು ಇದ್ದಾರೆ. ಮಾರಾಟಗಾರರು ಮೋದಿ ಮತ್ತು ಅಮಿತ್ ಶಾ ಹಾಗೂ ಖರೀದಿದಾರರು ಅಂಬಾನಿ ಮತ್ತು ಅದಾನಿ” ಎಂದು ಹೇಳಿದ್ದಾರೆ.

ಅಲ್ಲದೆ, ಏಪ್ರಿಲ್ 12ರಂದು ಕೊಯಮತ್ತೂರಿನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ನರೇಂದ್ರ ಮೋದಿ ಮತ್ತು ಅದಾನಿ ನೀತಿಗಳು ಎರಡು ರೀತಿಯ ಭಾರತವನ್ನು ಸೃಷ್ಟಿಸಿವೆ. ಒಂದು ಕೋಟ್ಯಾಧಿಪತಿಗಳ ಭಾರತ, ಇನ್ನೊಂದು ಬಡವರ ಭಾರತ” ಎಂದು ವಾಗ್ದಾಳಿ ನಡೆಸಿದ್ದರು.

ಜತೆಗೆ, ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಲ್ಲಿ ಈ ಇಬ್ಬರು ಬಿಲಿಯನೇರ್‌ಗಳ ಬಗ್ಗೆ ಹಾಗೂ ಬೆಳೆಯುತ್ತಿರುವ ಅವರ ಸಂಪತ್ತಿನ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು.

ಆದರೆ, ಅವುಗಳನ್ನು ಬದಿಗೆ ಸರಿಸಿರುವ ಮೋದಿ, ‘ಅದಾನಿ-ಅಂಬಾನಿ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲ’ ಎಂದಿದ್ದಾರೆ. ಅದಾಗ್ಯೂ, ಅವರು ಹೇಳಿದ್ದು ಸರಿ. ಚುನಾವಣೆಯ ಸಮಯದಲ್ಲಿ ಅಂಬಾನಿ-ಅದಾನಿ ಮತ್ತು ಮೋದಿ ಸ್ನೇಹದ ಬಗ್ಗೆ ಹೆಚ್ಚಾಗಿ ಮಾತನಾಡಲೇಬೇಕು. ಮುಂದಿನ ಸರ್ಕಾರದ ಆಯ್ಕೆಗಾಗಿ ಮತ  ಚಲಾಯಿಸುವಾಗ ಭಾರತದ ಜನರು ‘ಅಂಬಾನಿ-ಅದಾನಿ’ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇದನ್ನೇ ಈ ದೇಶದ ಸುಮಾರು 52% ಜನರು ಹೇಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ, ಇಂಡಿಯಾ ಟುಡೆ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಪ್ರಕಾರ 52% ಜನರು ‘ಮೋದಿ ಸರ್ಕಾರವು ದೊಡ್ಡ ಉದ್ಯಮಗಳಿಗೆ ಸಹಾಯ ಮಾಡಲು ಆರ್ಥಿಕ ನೀತಿಗಳನ್ನು ರಚಿಸಿದೆ’ ಎಂದು ಹೇಳಿದ್ದಾರೆ. ಆ ದೊಡ್ಡ ಉದ್ಯಮಿಗಳಲ್ಲಿ ಹೆಚ್ಚಿನ ಲಾಭ ಪಡೆಯುತ್ತಿರುವವರು ಈ ಅಂಬಾನಿ-ಅದಾನಿಗಳೇ ಎಂಬುದು ಸ್ಪಷ್ಟ.

ಈ ಸುದ್ದಿ ಓದಿದ್ದೀರಾ? ಮೋದಿ ಕುರ್ಚಿ ಅಲುಗಾಡುತ್ತಿದೆ, ಅಂಬಾನಿ – ಅದಾನಿಗಳ ವಿರುದ್ಧವೇ ವಾಗ್ದಾಳಿ ಆರಂಭಿಸಿದ್ದಾರೆ: ಖರ್ಗೆ

ಮುಂದಿನ ಚುನಾವಣಾ ರ್ಯಾಲಿಗಳಲ್ಲಿ ಕಾಂಗ್ರೆಸ್‌ ಮತ್ತು ಇತರ ವಿಪಕ್ಷಗಳು ಕೂಡ ಅಂಬಾನಿ-ಅದಾನಿ ಬಗ್ಗೆ ಹೆಚ್ಚು ಮಾತನಾಡಬೇಕು. ಅಂದಹಾಗೆ, ಮೋದಿ ಅವರು ಅಂಬಾನಿ-ಅದಾನಿ ವಿರುದ್ಧ ಮಾತನಾಡಿದರೆ ಅದಕ್ಕಿಂತ ಉತ್ತಮ ಬೆಳವಣಿಗೆ ಮತ್ತೊಂದಿಲ್ಲ. ಒಂದು ವೇಳೆ, ಮೋದಿ ಅವರು ಅಂಬಾನಿ-ಅದಾನಿ ವಿರುದ್ಧ ಮಾತನಾಡುವುದಾದರೆ, ಕೆಲವು ವಿಚಾರಗಳನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳಲ್ಲಿ ಪ್ರಮುಖ ಅಂಶಗಳು ಇಲ್ಲಿವೆ;

  1. ಕಳೆದ ಹತ್ತು ವರ್ಷಗಳಲ್ಲಿ ಅದಾನಿ ಮತ್ತು ಅಂಬಾನಿ – ಇಬ್ಬರೂ ತಮ್ಮ ಸಂಪತ್ತಿನಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರು ಆಹಾರಕ್ಕಾಗಿ ಪರದಾಡಿದ್ದರು. ಇಡೀ ಮನುಕುಲವೇ ಸಂಕಷ್ಟದಲ್ಲಿತ್ತು. ಆರ್ಥಿಕತೆ ಸ್ಥಗಿತಗೊಂಡು ಲಕ್ಷಾಂತರ ಭಾರತೀಯರು ಆದಾಯವಿಲ್ಲದೆ ಹೆಣಗಾಡುತ್ತಿದ್ದರು. ಆದರೆ, ಅಂತಹ ಸಮಯದಲ್ಲೂ ಅಂಬಾನಿ ಮತ್ತು ಅದಾನಿಗಳ ಆದಾಯ ಮಾತ್ರ ಏರಿಕೆ ಕಂಡಿದೆ. ಕೊರೊನಾ ಸಮಯದಲ್ಲಿ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಅದಾನಿ ನಂತರದ ಸ್ಥಾನದಲ್ಲಿದ್ದರು. ವಿಶ್ವದ ಅಗ್ರ 15 ಶ್ರೀಮಂತ ವ್ಯಕ್ತಿಗಳಲ್ಲಿ ಈ ಇಬ್ಬರ ಹೆಸರು ಇವೆ. ಒಟ್ಟಾರೆಯಾಗಿ, ಭಾರತದ ಆರ್ಥಿಕತೆ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಯಿತು. ಮನೆಯಲ್ಲಿ ಉಳಿತಾಯವಿಲ್ಲದಂತಾಯಿತು. ವೇತನ ಕುಸಿತವಾಯಿತು. ಪ್ರಮುಖವಾಗಿ ದೇಶವು 45 ವರ್ಷಗಳಲ್ಲಿಯೇ ಹೆಚ್ಚು ನಿರುದ್ಯೋಗಕ್ಕೆ ತುತ್ತಾಯಿತು. ಆದರೂ, ಅಂಬಾನಿ-ಅದಾನಿಗಳ ಆದಾಯ ಗಣನೀಯವಾಗಿ ಏರಿಕೆಯಾಗಿತ್ತು.
  2. ಯುಎಸ್‌ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು, ಅದಾನಿ ಗ್ರೂಪ್ ವಿರುದ್ಧ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಅಕೌಂಟಿಂಗ್ ವಂಚನೆಯ ಆರೋಪ ಮಾಡಿದೆ. ಈ ಆರೋಪ ಕೇಳಿಬಂದು 15 ತಿಂಗಳುಗಳಾಗಿವೆ. ಭಾರತದಲ್ಲಿ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (ಸೆಬಿ) ಈ ಪ್ರಕರಣವನ್ನು ತನಿಖೆ ಮಾಡುವ ಜವಾಬ್ದಾರಿ ಹೊತ್ತಿದೆ. ಈ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂಬ ವಿರೋಧ ಪಕ್ಷದ ಒತ್ತಾಯಕ್ಕೆ ಮೋದಿ ಸರ್ಕಾರ ಒಪ್ಪಲಿಲ್ಲ. ಹಿಂಡೆನ್‌ಬರ್ಗ್ ವರದಿಯ ಬಳಿಕ, ಹಲವಾರು ಹಣಕಾಸು ಪತ್ರಕರ್ತರು ಅದಾನಿ ಗ್ರೂಪ್ ವಂಚನೆಯ ಬಗ್ಗೆ ಹೆಚ್ಚಿನ ಪುರಾವೆಗಳನ್ನು ಬಹಿರಂಗಪಡಿಸಿದ್ದಾರೆ. ಅಕ್ರಮಗಳು ನಡೆದಿವೆ ಎಂದು ಸೆಬಿ ದೃಢಪಡಿಸಿದೆ. ಅದರೂ ಸಹ, ಅದಾನಿ ಗ್ರೂಪ್ ಮೇಲೆ ಇದುವರೆಗೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲಾಗಿಲ್ಲ.
  1. ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾದ ಮೋದಿ ಸರ್ಕಾರ, ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಿತು. ಸಂಸತ್ತಿನಲ್ಲಿ ಮೊಯಿತ್ರಾ ಅವರು ನಿರ್ದಿಷ್ಟವಾಗಿ ಅದಾನಿ ಗ್ರೂಪ್ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಎತ್ತಿದ್ದರು. ಅವರ ಪ್ರಶ್ನೆಗಳಿಗೆ ಮೋದಿ ಸರ್ಕಾರ ಇನ್ನೂ ಉತ್ತರ ನೀಡಿಲ್ಲ. ಅದಾನಿ ಗ್ರೂಪ್ ಅನ್ನು ಉಲ್ಲೇಖಿಸಿ ಸಂಸತ್‌ನಲ್ಲಿ ಹಲವಾರು ಬಾರಿ ಪ್ರಶ್ನೆಗಳನ್ನು ಎತ್ತಿದ್ದಕ್ಕೆ ರಾಹುಲ್ ಗಾಂಧಿ ಅವರನ್ನು ‘ಮೋದಿ ಉಪನಾಮ’ದಲ್ಲಿ ಮಾನನಷ್ಟ ಮೊಕದ್ದಮೆಯ ನೆಪವೊಡ್ಡಿ ಸಂಸತ್ತಿನಿಂದ ಅನರ್ಹಗೊಳಿಸಲಾಗಿತ್ತು.
  2. ಪ್ರಾನ್ಸ್‌ ಸಹಯೋಗದಲ್ಲಿ ಭಾರತದ ಎಚ್‌ಎಎಲ್‌ ರಫೇಲ್ ಯುದ್ಧ ವಿಮಾನ ತಯಾರಿಸಲು ಯುಪಿಎ ಸರ್ಕಾರ ಮಾಡಿಕೊಂಡಿದ್ದ ರಫೇಲ್‌ ಒಪ್ಪಂದವನ್ನು ಮೋದಿ ಸರ್ಕಾರ ಮರುಒಪ್ಪಂದ ಮಾಡಿಕೊಂಡಿತು. ಅದನ್ನು ಎಚ್‌ಎಎಲ್‌ನಿಂದ ಕಸಿದುಕೊಂಡು, ಅದಾನಿಗೆ ನೀಡಿತು. ಆ ಮೂಲಕ ಸಾವಿರಾರು ಕೋಟಿ ರೂ. ಲಾಭವನ್ನು ಅದಾನಿಗೆ ಮಾಡಿಕೊಟ್ಟಿತು.
  3. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿಯೂ ಅದಾನಿ ಮತ್ತು ಅಂಬಾನಿ ಪ್ರಥಮ ಸ್ಥಾನಕ್ಕೆ ಹೇಗೆ ಬೆಳೆದರು? ಏಕೆಂದರೆ, ತನ್ನ ಅಧಿಕಾರದ ಅವಧಿಯಲ್ಲಿ ಮೋದಿ ಸರ್ಕಾರವು ಹಲವಾರು ನೀತಿಗಳನ್ನು ರೂಪಿಸಿದೆ. ಅವಯಗಳು ಸ್ಥಾಪಿತ ಕಾರ್ಪೊರೇಟ್ ಹಿತಾಸಕ್ತಿಗಳ ಪರವಾಗಿವೆ. ವಿವಾದಾತ್ಮಕ ಕೃಷಿ ಕಾನೂನುಗಳು, ವಿಮಾನ ನಿಲ್ದಾಣ ಖಾಸಗೀಕರಣ, ಬದಲಾದ ಗಣಿಗಾರಿಕೆ ನಿಯಮಗಳು ಸೇರಿದಂತೆ ಹಲವಾರು ನೀತಿಗಳು ಬಂಡವಾಳಶಾಹಿಗಳ, ಅದರಲ್ಲೂ ಅಂಬಾನಿ-ಅದಾನಿಗಳ ಪರವಾಗಿವೆ.

ಇಷ್ಟೊಂದು ಪುರಾವೆಗಳು ಮೋದಿ ಸರ್ಕಾರ ಅಂಬಾನಿ-ಅದಾನಿಗಳಿಗೆ ಹೇಗೆಲ್ಲಾ ನೆರವು ನೀಡಿತು ಎಂಬುದನ್ನು ಬಹಿರಂಗ ಪಡಿಸುತ್ತದೆ. ಹೀಗಿರುವಾಗ, ಚುನಾವಣೆಯ ಸಮಯದಲ್ಲಿ ಅಂಬಾನಿ-ಅದಾನಿ ಮತ್ತು ಮೋದಿ ಸ್ನೇಹದ ಬಗ್ಗೆ ಹೆಚ್ಚಾಗಿ ಮಾತನಾಡದಿದ್ದರೆ, ಸರಿಯೇ? ಖಂಡಿತಾ ಮಾತನಾಡಲೇಬೇಕು.

ಮೂಲ: ದಿ ವೈರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X