ಈ ದಿನ ಸಂಪಾದಕೀಯ | ಆಕಾಶ್ ಆನಂದ್ ಗೆ ಅರ್ಧಚಂದ್ರ ಪ್ರಯೋಗ- ಮಾಯಾವತಿಯವರ ಹಿಂದೆ ಕೆಲಸ ಮಾಡಿರುವ ಶಕ್ತಿಗಳು ಯಾವುವು?

Date:

Advertisements

ಪ್ರಸಕ್ತ ಲೋಕಸಭಾ ಚುನಾವಣೆಯ ಬಿಎಸ್ಪಿ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಆಕಾಶ್ ಬೆಂಕಿ ಕಾರುವ ಭಾಷಣಗಳನ್ನು ಮಾಡತೊಡಗಿದ್ದರು. ಇಂಡಿಯಾ ಮತ್ತು ಎನ್.ಡಿ.ಎ. ಮೈತ್ರಕೂಟಗಳೆರಡನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜಾತಕವನ್ನೂ ಜಾಲಾಡತೊಡಗಿದ್ದರು…

 

ಬಹುಜನ ಸಮಾಜ ಪಾರ್ಟಿಯ ಸರ್ವೋಚ್ಚ ನಾಯಕಿ ಮಾಯಾವತಿ ಅವರ ಹಠಾತ್ ತೀರ್ಮಾನವೊಂದು ರಾಜಕೀಯ ವಿಶ್ಲೇಷಕರನ್ನು ಅಚ್ಚರಿಗೆ ಈಡು ಮಾಡಿದೆ. ಆಕಾಶ್ ಆನಂದ್ ಎಂಬ ಯುವಕನನ್ನು ತಮ್ಮ ಉತ್ತರಾಧಿಕಾರಿ ಎಂದು 2023ರ ಡಿಸೆಂಬರ್ ತಿಂಗಳಲ್ಲಿ ಘೋಷಿಸಿದ್ದರು. ಆತನಿಗೆ ಬಿ.ಎಸ್.ಪಿ.ಯ ರಾಷ್ಟ್ರೀಯ ಸಂಯೋಜಕ ಹುದ್ದೆಯನ್ನೂ ನೀಡಿದ್ದರು.

28ರ ಹರೆಯದ ಆಕಾಶ್ ಬೇರಾರೂ ಅಲ್ಲ, ಮಾಯಾವತಿಯವರ ಒಡಹುಟ್ಟಿದ ತಮ್ಮನಾದ ಆನಂದ್ ಅವರ ಪುತ್ರ. ಲಂಡನ್ ನಲ್ಲಿ ಎಂ.ಬಿ.ಎ. ಪದವಿ ಗಳಿಸಿ 2017ರಲ್ಲಿ ಭಾರತಕ್ಕೆ ಹಿಂತಿರುಗಿದರು. ಅದೇ ವರ್ಷ ಮಾಯಾವತಿಯವರು ಆಕಾಶ್ ಅವರನ್ನು ಬಿ.ಎಸ್.ಪಿ. ಕಾರ್ಯಕರ್ತರಿಗೆ ಪರಿಚಯಿಸಿದರು. 2019ರ ಲೋಕಸಭಾ ಚುನಾವಣೆ ವೇಳೆಗಾಗಲೇ ಆಕಾಶ್ ಬಿ.ಎಸ್.ಪಿ.ಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಸಮಾಜವಾದಿ ಪಾರ್ಟಿಯೊಂದಿಗೆ ಮಾಯಾವತಿಯವರು ಚುನಾವಣಾ ಮೈತ್ರಿ ಮಾಡಿಕೊಂಡಿದ್ದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ ಮತ್ತು ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್ ಜೊತೆ ಆಕಾಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದುಂಟು.

Advertisements

2019ರ ಈ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಜೊತೆ ಸೀಟು ಒಪ್ಪಂದ ಮಾಡಿಕೊಂಡಿದ್ದ ಬಿ.ಎಸ್.ಪಿ. 10 ಸೀಟುಗಳನ್ನು ಗೆದ್ದಿತ್ತು. 27 ಸೀಟುಗಳಲ್ಲಿ ಎರಡನೆಯ ಸ್ಥಾನದಲ್ಲಿತ್ತು. ಉತ್ತರಪ್ರದೇಶವೂ ಸೇರಿದಂತೆ  ನಂತರದ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಕೆಳಜಾರುತ್ತಲೇ ಹೋಯಿತು.

ತಮ್ಮ ಭಾಷಣಗಳು ಆಕ್ರಮಣಕಾರಿಯಾಗಿರುವುದು ಹೌದೆಂದೂ, ತಮ್ಮ ಜನರು ಅನುಭವಿಸಿರುವ ದಮನ ದಬ್ಬಾಳಿಕೆಗಳನ್ನು ಕಂಡು ಕೋಪವನ್ನು ಅದುಮಿಟ್ಟುಕೊಳ್ಳುವುದು ತಮ್ಮಿಂದ ಆಗುತ್ತಿಲ್ಲವೆಂದೂ ಹದಿನೈದು ದಿನಗಳ ಹಿಂದೆ ಇಂಗ್ಲಿಷ್ ದಿನಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಆಕಾಶ್ ಹೇಳಿದ್ದುಂಟು.

ಬಿಜೆಪಿಯ ಮೇಲೆ ಆಕ್ರಮಣಕಾರಿ ದಾಳಿ ನಡೆಸದೆ ಇರುವುದು ಬಿ.ಎಸ್.ಪಿ. ತಂತ್ರಗಾರಿಕೆಯ ಭಾಗವೆಂದೂ, ಮೋದಿಯವರು ಅಥವಾ ಅಮಿತ್ ಶಾ ಅವರ ವಿರುದ್ಧ ಮಾತಾಡಿದರೆ ಪ್ರತೀಕಾರ ಎದುರಿಸಲು ಸಿದ್ಧವಾಗಿರಬೇಕಾಗುತ್ತದೆ. ಇ.ಡಿ. ಮತ್ತು ಸಿ.ಬಿ.ಐ.ಗಳನ್ನು ಎದುರಿಸುವ ಶಕ್ತಿ ನಮ್ಮ ಸಮುದಾಯಗಳಿಗೆ ಇಲ್ಲವೆಂದೂ ಅವರು ಇದೇ ಸಂದರ್ಶನದಲ್ಲಿ ಹೇಳಿದ್ದುಂಟು.

ಮಂಗಳವಾರ ರಾತ್ರಿ ಆಕಾಶ್ ಗೆ ಹಠಾತ್ ಅರ್ಧಚಂದ್ರ ಪ್ರಯೋಗ ಮಾಡಿದ್ದಾರೆ ಮಾಯಾವತಿ. ಉತ್ತರಾಧಿಕಾರಿ ಪದವಿ ಮತ್ತು ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ತೆಗೆದು ಹಾಕಿದ್ದಾರೆ. “ಆಕಾಶ್ ಗೆ ಪ್ರಬುದ್ಧತೆ ಮೂಡುವ ತನಕ ಎರಡೂ ಜವಾಬ್ದಾರಿಗಳಿಂದ ತೆಗೆದು ಹಾಕಲಾಗಿದೆ” ಎಂದು ಸಾರಿದ್ದಾರೆ. ಈ ಕ್ರಮ ಇಷ್ಟಕ್ಕೇ ಸೀಮಿತವಲ್ಲ. ಲೋಕಸಭಾ ಚುನಾವಣೆಯ ಹತ್ತಾರು ಕ್ಷೇತ್ರಗಳ ಬಿ.ಎಸ್.ಪಿ ಉಮೇದುವಾರರನ್ನು ಕಡೆಯ ಗಳಿಗೆಗಳಲ್ಲಿ ಬದಲಾಯಿಸತೊಡಗಿದ್ದಾರೆ. ಈ ಬದಲಾವಣೆಗಳಲ್ಲಿ ವಿಚಿತ್ರ ಸಾಮ್ಯತೆ ಅಥವಾ ಸಂಯೋಗ ಕಂಡು ಬಂದಿದೆ. ಈ ಬದಲಾವಣೆಗಳು ಕಣದಲ್ಲಿರುವ ಬಿಜೆಪಿ ಹುರಿಯಾಳುಗಳಿಗೆ ಅನುಕೂಲಕರವಾಗಿ ಪರಿಣಮಿಸುತ್ತಿವೆ.

ಪ್ರಸಕ್ತ ಲೋಕಸಭಾ ಚುನಾವಣೆಯ ಬಿ.ಎಸ್.ಪಿ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಆಕಾಶ್ ಬೆಂಕಿ ಕಾರುವ ಭಾಷಣಗಳನ್ನು ಮಾಡತೊಡಗಿದ್ದರು. ಇಂಡಿಯಾ ಮತ್ತು ಎನ್.ಡಿ.ಎ. ಮೈತ್ರಕೂಟಗಳೆರಡನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜಾತಕವನ್ನೂ ಜಾಲಾಡತೊಡಗಿದ್ದರು. ಬಿಜೆಪಿ ಸರ್ಕಾರ ಕೇವಲ ಬುಲ್ಡೋಜರ್ ಸರ್ಕಾರವಲ್ಲ, ಬದಲಿಗೆ ಅದು ಭಯೋತ್ಪಾದಕ ಸರ್ಕಾರ. ಪ್ರಜೆಗಳನ್ನು ಗುಲಾಮರನ್ನಾಗಿ ಮಾಡಿದೆ. ಇಂತಹ ಸರ್ಕಾರವನ್ನು ಕಿತ್ತುಹಾಕಿ. ನಾನು ಬಿಜೆಪಿ ಸರ್ಕಾರವನ್ನು ತಾಲಿಬಾನಿ ಸರ್ಕಾರ ಅಥವಾ ಭಯೋತ್ಪಾದಕ ಸರ್ಕಾರ ಎಂದು ಕರೆದದ್ದು ಚುನಾವಣಾ ಆಯೋಗವನ್ನು ಒಂದು ವೇಳೆ ಚುಚ್ಚಿದೆಯಾದರೆ, ಆಯೋಗವೇ ಖುದ್ದಾಗಿ ಉತ್ತರಪ್ರದೇಶದ ಹಳ್ಳಿ ಹಳ್ಳಿಗಳಿಗೆ ಬಂದು ನೋಡಲಿ, ನನ್ನ ಸೋದರ ಸೋದರಿಯರು ಎಂತಹ ದುಸ್ಥಿತಿಯಲ್ಲಿ ಬದುಕಿದ್ದಾರೆಂದು ತಿಳಿಯುತ್ತದೆ. ನಾನು ಹೇಳಿದ್ದರಲ್ಲಿ ತಥ್ಯವಿದೆಯೇ ವಿನಾ ತಪ್ಪೇನೂ ಇಲ್ಲವೆಂದು ಅರಿವಾಗುತ್ತದೆ ಎಂದೂ ಇತ್ತೀಚಿನ ಭಾಷಣವೊಂದರಲ್ಲಿ ಕೆಂಡ ಕಾರಿದ್ದರು. ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಅವರ ಮೇಲೆ ಎಫ್.ಐ.ಆರ್. ದಾಖಲಾಗಿತ್ತು.

ಮೊದಲ ಎರಡು ಸುತ್ತುಗಳ ಮತದಾನದಲ್ಲಿ ಎನ್.ಡಿ.ಎ. ಮತ್ತು ‘ಇಂಡಿಯಾ’ ಎರಡೂ ಮೈತ್ರಿಕೂಟದ ಅಭ್ಯರ್ಥಿಗಳಿಗೂ ಸಮನಾಗಿ ಸವಾಲೆಸೆಯಬಲ್ಲ ಬಿ.ಎಸ್.ಪಿ. ಹುರಿಯಾಳುಗಳನ್ನು ಕಣಕ್ಕಿಳಿಸಿದ್ದರು ಮಾಯಾವತಿ. ಆದರೆ ಉಳಿದ ಸುತ್ತುಗಳ ಪರಿದೃಶ್ಯ ಬೇರೆಯೇ ಆಗಿ ಹೋಗಿದೆ. ಮಾಯಾವತಿಯವರು ಇಲ್ಲಿಯ ತನಕ ಸುಮಾರು ಹದಿನಾಲ್ಕು ಕ್ಷೇತ್ರಗಳಲ್ಲಿ ಉಮೇದುವಾರರನ್ನು ಬದಲಾಯಿಸಿದ್ದಾರೆ. ಬಹುತೇಕ ಬದಲಾವಣೆಗಳು ಸಮಾಜವಾದಿ ಪಾರ್ಟಿ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳ ಮತಗಳನ್ನು ಗಣನೀಯವಾಗಿ ಒಡೆಯುವ ದಟ್ಟ ಸಾಧ್ಯತೆಗಳಿವೆ. ಜಾತಿಗತ ಸಮೀಕರಣ ಮತ್ತು ಧಾರ್ಮಿಕ ಧೃವೀಕರಣಗಳು ನಮ್ಮ ಚುನಾವಣೆಗಳ ವಾಸ್ತವತೆಗಳೇ ಆಗಿ ಹೋಗಿವೆ.

ಚುನಾವಣೆ ಮೈತ್ರಿಕೂಟಗಳಿಂದ ಮಾಯಾವತಿಯವರು ಈ ಸಲ ದೂರ ಉಳಿದಾಗಲೇ ಪ್ರಶ್ನೆಗಳೆದ್ದಿದ್ದವು. ಮಾಯಾವತಿಯವರ ಹಿಂದೆ ಕಾಣದ ಶಕ್ತಿಗಳು ಕೆಲಸ ಮಾಡಿವೆಯೇ,  ಅವರು ವಿವಶರಾಗಿದ್ದಾರೆಯೇ, ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಉತ್ತರಗಳು ಕಾಲಗರ್ಭದಲ್ಲಿ ಅಡಗಿವೆ. ಚುನಾವಣೆಯ ನಂತರ ಹೊರಬೀಳಬಹುದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X