ತುಮಕೂರು | ಹೇಮಾವತಿ ನಾಲೆ ಕಾಮಗಾರಿ ನಿಲ್ಲಿಸದಿದ್ದರೆ ಬೆಂಕಿ ಹಚ್ತೀವಿ: ಜೆಡಿಎಸ್‌ ಶಾಸಕ ಎಂ.ಟಿ ಕೃಷ್ಣಪ್ಪ

Date:

Advertisements

ತುಮಕೂರು ಜಿಲ್ಲೆಗೆ ಜೀವನಾಡಿ ಹೇಮಾವತಿ ನೀರನ್ನು ಪ್ರತಿ ವರ್ಷ ನಿಯಮಾನುಸಾರ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಹೇಮಾವತಿ ನಾಲೆಯ ನೀರನ್ನು ಮಾಗಡಿಯತ್ತ ತಿರುಗಿಸಲು ‘ಹೆಮಾವತಿ ಎಕ್ಸ್‌ಪ್ರೆಸ್‌ ಕೆನಾಲ್’ ಕಾಮಗಾರಿಯನ್ನು ಸರ್ಕಾರ ಆರಂಭಿಸಿದೆ. ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ, ಕೆಲಸ ನಡೆಯುವ ಸ್ಥಳಕ್ಕೆ ನುಗ್ಗಿ ಎಲ್ಲದಕ್ಕೂ ಬೆಂಕಿ ಹಚ್ಚುತ್ತೇವೆ ಎಂದು ತುರುವೇಕೆರೆ ಜೆಡಿಎಸ್‌ ಶಾಸಕ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಗದ್ದೇಹಳ್ಳಿ, ಕರಿಕಲ್ಲು ಬಾರೆ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಕಾಮಗಾರಿ ಸ್ಥಗಿತಗೊಳಿಸುವಂತೆ ಕಾಮಗಾರಿ ಯೂನಿಟ್ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

“ತುಮಕೂರು ಬರಗಾಲದ ಜಿಲ್ಲೆಯಾಗಿದೆ. ಜಿಲ್ಲೆಗೆ ಹೇಮಾವತಿ ನಾಲೆ ನೀರು ಬಂದ ನಂತರ ರೈತಾಪಿ ವರ್ಗ ಕೊಂಚ ಉಸಿರಾಡುತಿದ್ದಾರೆ. ಪ್ರತಿ ಹಳ್ಳಿಗಳ ಕೆರೆಗೆ ನೀರು ಹರಿಯುತ್ತಿತ್ತು. ಹೇಗೋ ಬದುಕು ನಡೆಸುತ್ತಿದ್ದ ನಮ್ಮ ರೈತರ ಬಾಯಿಗೆ ಮಣ್ಣು ಹಾಕುವ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಚುನಾವಣೆಯ ಸಮಯದಲ್ಲಿ ತರಾತುರಿ ಪೂಜೆ ಮಾಡಿ ಎಕ್ಸ್‌ಪ್ರೆಸ್ ಕೆನಾಲ್ ಕೆಲಸ ಶುರು ಮಾಡಲಾಗಿದೆ. ಆದರೆ, ನಿಯಮಾನುಸಾರ ಈ ಯೋಜನೆಗೆ ಇನ್ನೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಸ್ಥಳೀಯ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದ ಸರ್ಕಾರ ಪ್ರಭಾವಿಗಳ ಆಣತಿಯಂತೆ ಕೆಲಸ ಮಾಡುತ್ತಿದೆ. ಅಧಿಕಾರಿಗಳು ಕೂಡಲೇ ಕೆಲಸ ಸ್ಥಗಿತ ಮಾಡಬೇಕು” ಎಂದು ಹೇಳಿದ್ದಾರೆ.

Advertisements

“ಸರ್ಕಾರಿ ಜಮೀನು ಜಾಗ ಹುಡುಕಿ ಕೆಲಸ ನಡೆಸಿರುವುದು ಸರಿಯಲ್ಲ. ರೈತರ ಭೂಮಿ ವಶಕ್ಕೆ ಪಡೆಯಲು ಯಾವ ಪ್ರಕ್ರಿಯೆ ಆರಂಭಿಸದೆ? ಏಕಾಏಕಿ ಕಾಮಗಾರಿ ನಡೆಸಿರುವುದು ಕಾಂಗ್ರೆಸ್ ದೌರ್ಜನ್ಯ ಬಿಂಬಿಸುತ್ತದೆ. ಅತೀ ಹೆಚ್ಚು ಭೂಮಿ ಸಿ.ಎಸ್ ಪುರ ಹೋಬಳಿಯಲ್ಲಿ ಯೋಜನೆಗೆ ಭೂಮಿ ಪಡೆಯುವ ಬಗ್ಗೆ ಚುನಾಯಿತ ಶಾಸಕನಾಗಿ ನನ್ನ ಗಮನಕ್ಕೆ ತಂದಿಲ್ಲ. ಇದರ ಬಗ್ಗೆ ಸೂಕ್ತ ಚರ್ಚೆ ನಡೆಯಬೇಕಿದೆ. ನಿಯಮಾನುಸಾರ ನಮಗೆ 24 ಟಿಎಂಸಿ ನೀರು ನೀಡಬೇಕು. ಈವರೆವಿಗೂ ನಿಯಮದಷ್ಟು ನೀರು ಕೊಟ್ಟಿಲ್ಲ. ಆದರೂ, ಕೊಟ್ಟ ನೀರನ್ನು ಹಂಚಿಕೊಂಡು ರೈತರು ಅನುಸರಣೆಯಲ್ಲಿ ಕೃಷಿ ನಡೆಸಿದ್ದಾರೆ. ಮಾಗಡಿಗೆ 3 ಟಿಎಂಸಿ ನೀರು ಎಂದು ಹೇಳಿ ಈಗ 11 ಟಿಎಂಸಿ ನೀರು ತೆಗೆದುಕೊಂಡು ಹೋಗಲಿದ್ದಾರೆ. ನಮ್ಮ ಜಿಲ್ಲೆಯ ರೈತರ ಮೇಲೆ ದಬ್ಬಾಳಿಕೆ ನಡೆಸಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ರೈತರು ಒಗ್ಗೂಡಿ ಈ ಕಾಮಗಾರಿ ನಿಲ್ಲಿಸಲು ಉಗ್ರ ಹೋರಾಟ ಮಾಡಬೇಕಿದೆ” ಎಂದಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೋರಪ್ಪನಹಳ್ಳಿ ಕುಮಾರ್, ಹೋಬಳಿ ಅಧ್ಯಕ್ಷ ಜಗದೀಶ್, ಮುಖಂಡರಾದ ನಂಜೇಗೌಡ, ನರಸಿಂಹಮೂರ್ತಿ, ಶಾಸಕರ ಪುತ್ರ ವೆಂಕಟೇಶ್, ಮೂರ್ತಪ್ಪ, ರಾಮಣ್ಣ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X