ಐರಾವತ ಬಸ್‌ನಲ್ಲಿ ಮಗುವಿನಂತೆ ಮಲಗಿ ಅಲ್ಲ, ‘ಚುನಾವಣಾ ಆಯೋಗ’ದಂತೆ ಮಲಗಿ!

Date:

Advertisements

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಐರಾವತ ಬಸ್ ಸೇವೆಯ ಧ್ಯೇಯವಾಕ್ಯ ಮಗುವಿನಂತೆ ಮಲಗಿ ಎಂಬುವುದನ್ನು ಕೊಂಚ ತಿರುಚಿ ಕೇರಳ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಗೇಲಿ ಮಾಡಿದೆ.

ಈ ಬಗ್ಗೆ ಎಕ್ಸ್‌ ಪೋಸ್ಟ್ ಮಾಡಿರುವ ಕೇರಳ ಕಾಂಗ್ರೆಸ್ “ಕರ್ನಾಟಕ ಆರ್‌ಟಿಸಿ ನೀವು ‘ಇಸಿಐನಂತೆ ಮಲಗಬಹುದಾದ’ ಹೊಸ ಐಷಾರಾಮಿ ಕೋಚ್‌ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ ಎಂಬ ಮಾಹಿತಿ ನಮಗೆ ಲಭಿಸಿದೆ! ಇದು ನಿಜವೇ” ಪರೋಕ್ಷವಾಗಿ ಚುನಾವಣಾ ಆಯೋಗವನ್ನು ಲೇವಡಿ ಮಾಡಿದೆ.

ಈ ಎಕ್ಸ್‌ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಪೋಸ್ಟ್‌ ಅನ್ನು ಟೀಕೆ ಮಾಡಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಕೇರಳ ಕಾಂಗ್ರೆಸ್‌ನ ಹಾಸ್ಯ ಪ್ರಜ್ಞೆಯನ್ನು ಮೆಚ್ಚುವುದಾಗಿ ಹೇಳಿಕೊಂಡಿದ್ದಾರೆ.

Advertisements

ಇದನ್ನು ಓದಿದ್ದೀರಾ?  ಮೋದಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ: ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಕರ್ನಾಟಕದ ನೆಟ್ಟಿಗರು ಇದು ಕರ್ನಾಟಕ ಆರ್‌ಟಿಸಿ ಅಲ್ಲ, ಕೆಎಸ್‌ಆರ್‌ಟಿಸಿ ಎಂದೂ ಕೂಡಾ ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಪೋಸ್ಟ್ ಚೆನ್ನಾಗಿದೆ. ಆದರೆ ಅದು ಕರ್ನಾಟಕ ಆರ್‌ಟಿಸಿ ಅಲ್ಲ, ಕೆಎಸ್‌ಆರ್‌ಟಿಸಿ” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

“ಚುನಾವಣಾ ಆಯೋಗ ನಿದ್ರಿಸಿರುವಂತೆ ನಟಿಸಬಹುದು ಮತ್ತು ಬಿಜೆಪಿಯು ಕ್ಷಣಿಕ ನಿಟ್ಟುಸಿರು ಬಿಡಬಹುದು. ಆದರೆ ಈ ದೇಶದಲ್ಲಿ ಅಸಹ್ಯ ದಂಗೆಕೋರರ ಕಾಲರ್‌ ಹಿಡಿಯಲು ಕರ್ತವ್ಯ ಬದ್ಧ ಮತ್ತು ಜಾಗರೂಕ ಶಕ್ತಿಗಳಿವೆ” ಎಂದು ಕೇರಳ ಕಾಂಗ್ರೆಸ್ ಮತ್ತೊಂದು ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದೆ.

ಇದನ್ನು ಓದಿದ್ದೀರಾ?  ಮುಸ್ಲಿಮರು, ಕಾಂಗ್ರೆಸರನ್ನು ಗುರಿಯಾಗಿಸುವ ಬಿಜೆಪಿಯ ವಿಡಿಯೋ ಅಳಿಸುವಂತೆ ‘ಎಕ್ಸ್’ಗೆ ಚುನಾವಣಾ ಆಯೋಗ ನಿರ್ದೇಶನ

ವಿವಾದಾದತ್ಮಕ ಪೋಸ್ಟ್‌ ಸಂಬಂಧ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯಾರಿಗೆ ಕರ್ನಾಟಕ ಪೊಲೀಸ್ ಸಮನ್ಸ್ ನೀಡಿದ ವರದಿಯನ್ನು ಉಲ್ಲೇಖಿಸಿ ಕೇರಳ ಕಾಂಗ್ರೆಸ್ ಈ ಪೋಸ್ಟ್ ಮಾಡಿದೆ.

ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಬಿಜೆಪಿ ನಾಯಕರ ದ್ವೇಷ ಭಾಷಣದ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಸರಿಯಾದ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಚುನಾವಣಾ ಆಯೋಗದ ಈ ನಡೆಯನ್ನು ನಿರಂತರವಾಗಿ ಟೀಕಿಸುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X