ಹಾವೇರಿ ಲೋಕಸಭಾ ಕ್ಷೇತ್ರದ ಚುನಾಚಣೆಯಲ್ಲಿ ಅಂತಿಮವಾಗಿ ಶೇ.77.60 ರಷ್ಟು ಮತದಾನವಾಗಿದೆ. ಮತ ಎಣಿಕೆ ಕಾರ್ಯ ಜೂನ್ 4ರಂದು ದೇವಗಿರಿ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ತಿಳಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 9,02,119 ಮಂದಿ ಪುರುಷರು, 8,90,572 ಮಂದಿ ಮಹಿಳೆಯರು ಹಾಗೂ 8ಮಂದಿ ಇತರರು ಸೇರಿದಂತೆ ಒಟ್ಟಾರೆ 17,92,774 ಮಂದಿ ಮತದಾರ ಪೈಕಿ 7,13,613 ಮಂದಿ ಪುರುಷರು, 6,77,577 ಮಂದಿ ಮಹಿಳೆಯರು ಹಾಗೂ 24 ಮಂದಿ ಇತರರು ಸೇರಿದಂತೆ 13,91,214 ಮಂದಿ ಮತದಾರರು ಮತ ಚಲಾಯಿಸಿದ್ದಾರೆ.
ಶಿರಹಟ್ಟಿ ಕ್ಷೇತ್ರದಲ್ಲಿ 84,753 ಮಂದಿ ಪುರುಷರು, 81,276 ಮಂದಿ ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ 1,66,031 ಮಂದಿ ಮತದಾರರು, ಗದಗ ಕ್ಷೇತ್ರದಲ್ಲಿ 85,697 ಮಂದಿ ಪುರುಷರು, 84,890 ಮಂದಿ ಮಹಿಳೆಯರು ಹಾಗೂ ಇತರೆ ನಾಲ್ಕು ಮಂದಿ ಸೇರಿ 1,70,591 ಮಂದಿ ಮತದಾರರು, ರೋಣ ಕ್ಷೇತ್ರದಲ್ಲಿ 88,625 ಮಂದಿ ಪುರುಷರು, 86,319 ಮಹಿಳೆಯರು ಹಾಗೂ ಇತರೆ ನಾಲ್ಕು ಮಂದಿ ಸೇರಿ 1,74,948 ಮಂದಿ ಮತದಾರರು, ಹಾನಗಲ್ ಕ್ಷೇತ್ರದಲ್ಲಿ 91,945 ಮಂದಿ ಪುರುಷರು, 85,852 ಮಂದಿ ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ 1,77,799 ಮಂದಿ ಮತದಾರರು ಮತ ಚಲಾಯಿಸಿದ್ದಾರೆ.
“ಹಾವೇರಿ ಕ್ಷೇತ್ರದಲ್ಲಿ 95,437 ಪುರುಷರು, 88,812 ಮಹಿಳೆಯರು ಹಾಗೂ ಇತರೆ ಏಳು ಮಂದಿ ಸೇರಿ 1,84,256 ಮಂದಿ ಮತದಾರರು, ಬ್ಯಾಡಗಿ ಕ್ಷೇತ್ರದಲ್ಲಿ 90,080 ಮಂದಿ ಪುರುಷರು, 84,264 ಮಂದಿ ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ 1,74,346 ಮಂದಿ ಮತದಾರರು, ಹಿರೇಕೆರೂರು ಕ್ಷೇತ್ರದಲ್ಲಿ 80,299 ಮಂದಿ ಪುರುಷರು, 75,218 ಮಂದಿ ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ 1,55,519 ಮಂದಿ ಮತದಾರರು ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ 96,777 ಮಂದಿ ಪುರುಷರು, 90,946 ಮಂದಿ ಮಹಿಳೆಯರು ಹಾಗೂ ಇತರೆ ಒಬ್ಬರು ಸೇರಿ 11,87,724 ಮಂದಿ ಮತದಾರರು ಮತಚಲಾಯಿಸಿದ್ದಾರೆ.
ಶಿರಹಟ್ಟಿ ಕ್ಷೇತ್ರದಲ್ಲಿ ಶೇ.72.19, ಗದಗ ಕ್ಷೇತ್ರದಲ್ಲಿ ಶೇ.74.30, ರೋಣ ಕ್ಷೇತ್ರದಲ್ಲಿ ಶೇ.73.16, ಹಾನಗಲ್ ಕ್ಷೇತ್ರದಲ್ಲಿ ಶೇ.82.38, ಹಾವೇರಿ ಕ್ಷೇತ್ರದಲ್ಲಿ ಶೇ.77.29, ಬ್ಯಾಡಗಿ ಕ್ಷೇತ್ರದಲ್ಲಿ ಶೇ.82.02, ಹಿರೇಕೆರೂರು ಕ್ಷೇತ್ರದಲ್ಲಿ ಶೇ.82.63 ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.78.53ರಷ್ಟು ಮತದಾನವಾಗಿದೆ.
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಶೇ.82.68 ರಷ್ಟು ಹೆಚ್ಚು ಮತದಾನವಾದರೆ, ಶಿರಹಟ್ಟಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ.72.19 ರಷ್ಟು ಮತದಾನ ದಾಖಲಾಗಿದೆ. ಕಳೆದ 2019ರ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಶೇ.74.01 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.77.60 ರಷ್ಟು ಮತದಾನವಾಗಿದ್ದು, ಶೇ.3.59 ರಷ್ಟು ಅಧಿಕ ಮತದಾನವಾಗಿದೆ.
ಜಿಲ್ಲೆಯಲ್ಲಿ ಶೇ.79.82 ಮತದಾನ: ಲೋಕಸಭಾ ಚುನಾಚಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.79.82 ರಷ್ಟು ಮತದಾನವಾಗಿದೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಮತಯಂತ್ರಗಳ ಸ್ಟ್ರಾಂಗ್‍ರೂಮ್‍ಗೆ ಬಿಗಿ-ಭದ್ರತೆ
ಹಾನಗಲ್ ಕ್ಷೇತ್ರದಲ್ಲಿ ಶೇ.82.36, ಶಿಗ್ಗಾಂವ ಕ್ಷೇತ್ರದಲ್ಲಿ ಶೇ.77.24, ಹಾವೇರಿ ಕ್ಷೇತ್ರದಲ್ಲಿ ಶೇ.77.24, ಬ್ಯಾಡಗಿ ಕ್ಷೇತ್ರದಲ್ಲಿ ಶೇ.81.98, ಹಿರೇಕೆರೂರು ಕ್ಷೇತ್ರದಲ್ಲಿ ಶೇ.82.62 ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.78.5 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಕಳೆದ 2019ರ ಚುನಾವಣೆಯಲ್ಲಿ 75.5 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.4.32ರಷ್ಟು ಅಧಿಕ ಮತದಾನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
