ಲೋಕಸಭಾ ಚುನಾವಣೆಯ ನಡುವೆ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ಮುಗಿದಿರುವ ಮೂರು ಹಂತದ ಮತದಾನವು ಮೋದಿ ಮತ್ತೆ ಪ್ರಧಾನಿ ಆಗಲಾರರು, ಬಿಜೆಪಿ ಅಧಿಕಾರ ಪಡೆಯದು ಎಂಬುದನ್ನು ಸೂಚಿಸುತ್ತಿವೆ. ಈ ಸೂಚನೆಯ ಬೆನ್ನಲ್ಲೇ ಕೆಲ ಮಾಧ್ಯಮಗಳು ತಮ್ಮ ವರಸೆ ಬದಲಿಸುತ್ತಿವೆ. ಮತ್ತೆ, ಪತ್ರಿಕಾ ನೈತಿಕತೆ ಎಡೆಗೆ ಒರಳಲು ಆರಂಭಿಸಿವೆ. ಕಳೆದ 10 ವರ್ಷಗಳಿಂದ ಮೋದಿ ಮತ್ತು ಬಿಜೆಪಿಗೆ ಶರಣಾಗಿದ್ದ ಮಾಧ್ಯಮಗಳು ಈಗ ಮತ್ತೆ ತಲೆ ಎತ್ತಲು ಆರಂಭಿಸಿವೆ. ಅದರಲ್ಲೂ, ಗೋದಿ ಮೀಡಿಯಾಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಆಜ್‌ತಕ್ ಮತ್ತು ಜೀ ನ್ಯೂಸ್‌ಗಳ ಅಚ್ಚರಿಯನ್ನು ಮೂಡಿಸಿವೆ. ಜೀನ್ಯೂಸ್ ತನ್ನ ಇಬ್ಬರು ದೈತ್ಯ ದ್ವೇಷದ ನಿರೂಪಕರಾದ ದೀಪಕ್ ಚೌರಾಸಿಯಾ ಮತ್ತು ಪ್ರದೀಪ್ ಭಂಡಾರಿಯನ್ನು ಹೊರಗಟ್ಟಿದೆ.
ಮೋದಿ ಆಡಳಿತದಲ್ಲಿ ಮಾಧ್ಯಮಗಳ ಬಿಜೆಪಿಗೆ ಶರಣಾಗಿ, ತಮ್ಮ ಪೆನ್ನು-ಮೈಕುಗಳಿಗೆ ಕೇಸರಿ ಬಣ್ಣ ಬಳಿದುಕೊಂಡಿದ್ದವು. ಸದಾ ಮೋದಿ ಭಜನೆ ಮಾಡುತ್ತಿದ್ದವು. ಮೋದಿ ಇಲಿ ಹೋಯಿತು ಎಂದರೆ, ಈ ಮಾಧ್ಯಮಗಳು ಹುಲಿಯೇ ಹೋಯಿತು ಎಂಬಂತೆ ಬಿಂಬಿಸಿ, ಅಬ್ಬರಿಸುತ್ತಿದ್ದವು. ಮೋದಿ ಹೆಸರನ್ನು ಪ್ರವರ್ಧಮಾನಕ್ಕೆ ತಂದು, ಮೋದಿ ಇಮೇಜ್‌ಅನ್ನು ದೈತ್ಯವಾಗಿ ಕಟ್ಟಿದ್ದವು. ಅದರಲ್ಲಿ, ಈ ಜೀ ನ್ಯೂಸ್ ಮತ್ತು ಆಜ್‌ತಕ್‌ನ ಪಾತ್ರ ದೊಡ್ಡದೇ ಆಗಿತ್ತು.
ಈ ಎರಡೂ ಮಾಧ್ಯಮಗಳೂ ಸೇರಿದಂತೆ, ಪ್ರಮುಖ ಗೋದಿ ಮಾಧ್ಯಮಗಳು, 2020ರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕಿಗೆ ಆರಂಭದಲ್ಲಿ ಚೀನಾ ಕಾರಣವೆಂದು ಚೀನಾ ಮೇಲೆ ಯುದ್ಧೋಪಾದಿಯಲ್ಲಿ ದಾಳಿ ನಡೆಸಿದ್ದವು. ಬಳಿಕ, ತಬ್ಲಿಗಿಗಳೇ ಕಾರಣವೆಂದು ಮುಸ್ಲಿಮರನ್ನು ದೂಷಿಸಿದ್ದವು. ರೈತ ಹೋರಾಟದ ಸಮಯದಲ್ಲಿ ಅನ್ನ ಹಾಕುವ ರೈತರನ್ನೇ ‘ಖಲಿಸ್ತಾನಿಗಳು, ಭಯೋತ್ಪದಕರು’ ಎಂಬ ಹಣೆಪಟ್ಟಿ ಕಟ್ಟಿ ರೈತರ ವಿರುದ್ಧವೇ ದೇಶಾದ್ಯಂತ ದ್ವೇಷ ಸೃಷ್ಟಿಸಿದ್ದವು.
ಮೋದಿಯ ರಫೇಲ್ ಹಗರಣ, ಕೃಷಿ ವಿರೋಧಿ ನೀತಿಗಳು, ರೈಲ್ವೆ-ವಿಮಾನ ಖಾಸಗೀಕರಣ, ನೋಟ್ ಬ್ಯಾನ್, ಸಿಎಎಯಂತಹ ಜನವಿರೋಧಿ ನೀತಿಗಳನ್ನು ಸಮರ್ಥಿಸಿಕೊಂಡು, ಪ್ರಶ್ನಿಸಿದವರನ್ನೇ ದೇಶದ್ರೋಹಿಗಳೆಂದು ಪಟ್ಟಕಟ್ಟುವಲ್ಲಿ ಜೀ, ಆಜ್‌ತಕ್ ಮಾಧ್ಯಮಗಳು ಯಶಸ್ವಿಯಾಗಿದ್ದವು.
ಮಾತ್ರವಲ್ಲದೆ, ಮೋದಿ ಪ್ರಶ್ನಾತೀತ ನಾಯಕ, ಚೌಕಿದಾರ್, ಅಭಿವೃದ್ಧಿಯ ಹರಿಕಾರ, ಪಾಕ್-ಚೀನಾಗಳ ಪಾಲಿಗೆ ದುಸ್ವಪ್ನ, ವಿಶ್ವಗುರು, ಭಾರತೀಯರಿಗಾಗಿ ರಷ್ಯಾ-ಉಕ್ರೇನ್ ಯುದ್ಧವನ್ನೇ ನಿಲ್ಲಿಸಿದ ಮಹಾನ್ ವೀರ ಎಂದೆಲ್ಲ ಬಲೂನಿನಲ್ಲಿ ಗಾಳಿ ತುಂಬಿದಂತೆ, ಮೋದಿ ಇಮೆಜನ್ನ ಉಬ್ಬಿಸಿದ್ದವು.
ಅದರಲ್ಲೂ, ಜೀ ವಾಹಿನಿಯಲ್ಲಿ ಪ್ರದೀಪ್ ಭಂಡಾರಿ ಮತ್ತು ದೀಪಕ್ ಚೌರಾಸಿ ಅವರು ‘ಜನ್ ಕಿ ಬಾತ್’, ‘ತಾಲ್ ತೊಕ್ಕೆ’, ‘ಅಪ್ನಾ ಸವಾಲ್’, ‘24ಕಿ ಸರ್ಕಾರ್’ ಹೆಸರಿನಲ್ಲಿ ಪ್ರೈಮ್ ಟೈಮ್ ಕಾರ್ಯಕ್ರಮಗಳ ಮೂಲಕ ಮೋದಿ ಬಗ್ಗೆ ಕೊಂಡಾಡುವ ಅಥವಾ ಕಾಂಗ್ರೆಸ್ ಮತ್ತು ಮುಸ್ಲಿಮರ ದ್ವೇಷದ ಬಿತ್ತುವ ಕಾರ್ಯಕ್ರಮಗಳನ್ನೇ ನಡೆಸುತ್ತಿದ್ದರು.
ಅಂತಹ, ದ್ವೇಷ ಬಿತ್ತುವ ಮಹಾನ್ ನಿರೂಪಕರಗಳನ್ನು ಇದೀಗ, ಜೀ ವಾಹಿನಿ ದಿಢೀರ್ ಬೆಳವಣಿಗೆಯಲ್ಲಿ ಸಂಸ್ಥೆಯಿಂದ ಹೊರಹಾಕಿದೆ. ಮಾಧ್ಯಮಗಳಿಂದಲೇ ವಿಶ್ವಗುರುವಾಗಿದ್ದ ಮೋದಿ ಪರವಾಗಿದ್ದ ಹಲವಾರು ಪತ್ರಕರ್ತರನ್ನು ಮನೆಗೆ ಕಳಿಸಲು ಜೀ ನ್ಯೂಸ್ ಮುಂದಾಗಿದೆ. ಅಲ್ಲದೆ, ಬಿಜೆಪಿ ಮತ್ತು ಮೋದಿ ಪರವಾದ ಎಲ್ಲ ಪ್ರಸಾರಗಳನ್ನು ನಿರ್ಬಂಧಿಸಿದೆ. ನೆಲದ ವಾಸ್ತವತೆಯನ್ನು ತೋರಿಸಲು ಪ್ರಾರಂಭಿಸಿದೆ.
ಅದೇ ರೀತಿ, ಆಜ್ ತಕ್‌ನಲ್ಲಿ ಪ್ರೈಮ್‌ಟೈಮ್ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ, ಕೋಮು ದ್ವೇಷ ಬಿತ್ತುವ ಮೂಲಕ, ಮೋದಿ ಭಜನೆ ಮಾಡುತ್ತಿದ್ದ ಸುದೀರ್ ಚೌದರಿ ಮತ್ತು ಅಜಂನಾ ಓಂ ಕಷ್ಯಪ್ ಅವರು ಈಗ ದ್ವೇಷ ವಿಷಯದಲ್ಲಿ ಮೌನವಾಗಿದ್ದಾರೆ. ಮೋದಿಯೇ ಖುದ್ದು ದ್ವೇಷದ ಭಾಷಣ ಮಾಡಿದರೂ, ಅದರ ಬಗ್ಗೆ ಚರ್ಚೆ ಮಾಡುವುದನ್ನೂ ನಿಲ್ಲಿಸಿದ್ದಾರೆ.
ಬದಲಾಗಿ, ಸುದೀರ್ ಚೌದರಿ ಅವರು ತಮ್ಮ ಅದೇ ಪ್ರೈಮ್‌ಟೈಮ್ ಕಾರ್ಯಕ್ರಮದಲ್ಲಿ ಮೋದಿಯ ದ್ವೇಷ ಭಾಷಣ ಮತ್ತು ಸುಳ್ಳುಗಳ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುತ್ತಿದ್ದಾರೆ. ಮೋದಿ ಹೇಳಿದ ಸುಳ್ಳಿನ ಹಿಂದಿನ ಸತ್ಯವೇನು? ಅಸಲಿಯತ್ತೇನು? ಎಂಬುದನ್ನು ಬಿಚ್ಚಿಡುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಪ್ರಶ್ನಿಸುತ್ತಿದ್ದಾರೆ.
ಅಂಜನಾ ಕಷ್ಯಪ್ ಅವರು ಗ್ರೌಂಡ್ ರಿಪೋರ್ಟ್ ಮಾಡುತ್ತಿದ್ದಾರೆ. ದೇಶದ ಜನರು ವಾಸ್ತವವಾಗಿ ಏನು ಹೇಳುತ್ತಿದ್ದಾರೆ ಎಂಬುದನ್ನು ವರದಿ ಮಾಡಿ, ಪ್ರಸಾರ ಮಾಡುತ್ತಿದ್ದಾರೆ. ಜನರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿಯನ್ನು ಪ್ರಶ್ನಿಸುತ್ತಿದ್ದಾರೆ.
ಈ ಮೂಲಕ ಆಜ್ ತಕ್ ಮತ್ತು ಜೀ ನ್ಯೂಸ್ – ಎರಡು ಅಗ್ರ ಗೋದಿ ಮೀಡಿಯಾಗಳು ಮರಳಿ ಟ್ರ್ಯಾಕ್‌ಗೆ ಬರುತ್ತಿವೆ. ಇದಕ್ಕೆ, ಮೂಲ ಕಾರಣ, ಬಿಜೆಪಿಯ ಹೀನಾಯ ಸೋಲನ್ನು ಈ ಮಾಧ್ಯಮಗಳು ಗ್ರಹಿಸಿವೆ. ಹೀಗಾಗಿಯೇ, ಚುನಾವಣೆ ಮುಗಿಯುವ ವೇಳೆಗೆ ಗೋದಿ ಮೀಡಿಯಾ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಈ ಎರಡೂ ಚಾನೆಲ್‌ಗಳು ಯತ್ನಿಸುತ್ತಿವೆ. ಇನ್ನು, ಕೆಲವೇ ದಿನಗಳಲ್ಲಿ ಉಳಿದ ಮಾಧ್ಯಮಗಳೂ ಟ್ರ್ಯಾಕ್‌ಗೆ ಮರಳುವ ಸಾಧ್ಯತೆಗಳಿವೆ. ಇದು, ಇವತ್ತಿನ ಪರಿಸ್ಥಿತಿಯಲ್ಲಿ ಉತ್ತಮ ಬೆಳೆವಣಿಗೆಯೇ ಆಗಿದೆ.
ಏನೇ ಇರಲಿ, ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆದಾಗಲೇ ಬಿಜೆಪಿ ಸೋಲು ಖಚಿತ ಎಂಬುದು ಬಹುತೇಕ ಸ್ಪಷ್ಟವಾಗಿತ್ತು. 2ನೇ ಮತ್ತು 3ನೇ ಹಂತದ ಮತದಾನವು ಬಿಜೆಪಿ ಸೋಲುತ್ತದೆ ಎಂಬ ಸಂದೇಶವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಜೆಪಿ ಸೋಲು, ವಿಪಕ್ಷಗಳ ಮೈತ್ರಿ ಅಧಿಕಾರಕ್ಕೆ ಬಂದರೆ, ತಮ್ಮ ಪತ್ರಿಕಾ ಧೋರಣೆ ಪ್ರಶ್ನೆಗೆ ಸಿಲುಕುತ್ತದೆ ಎಂಬುದನ್ನು ಅರಿತಿರುವ ಮಾಧ್ಯಮಗಳು ಈಗಲೇ ತಮ್ಮ ವರಸೆಗಳನ್ನು ಬದಲಿಸುತ್ತಿವೆ. ಆದರೆ, ಜೂನ್ 4ರಂದು ಫಲಿತಾಂಶ ಏನಾಗಲಿದೆ. ನಂತರದಲ್ಲಿ ಈ ಮಾಧ್ಯಮಗಳ ವರಸೆ ಹೇಗಿರಲಿದೆ. ಕಾದು ನೋಡೋಣ…
EVEN IF “I N D I A” ALLIANCE FORM A GOVT, WHAT IS THE CHANCE OF STABILITY ? WILL INDIA AFFORD A UNSTABLE GOVT ?