ಬೀದರ್‌ | ಲೋಕ ಪ್ರಜ್ಞೆ ವಿಸ್ತರಿಸಿಕೊಳ್ಳಲು ವಚನಗಳ ಅನುಸಂಧಾನ ಅಗತ್ಯ : ಡಾ. ಭೀಮಶಂಕರ ಬಿರಾದರ್

Date:

Advertisements
  • ವಚನಗಳು ಕನ್ನಡ ಜಗತ್ತಿಗೆ ವೈಚಾರಿಕ ಮತ್ತು ಬೌದ್ಧಿಕ ನೆಲೆಗಟ್ಟು ರೂಪಿಸಿವೆ.
  • ಜನವಾಣಿಯನ್ನು ದೇವವಾಣಿಯಾಗಿಸಿದ್ದು ಬಸವಣ್ಣನವರು.

ಮನುಷ್ಯನ ಅಸ್ತಿತ್ವ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ವಚನಗಳ ಓದು ಅಗತ್ಯ. ಅರಿವಿನ ದಾರಿಗಾಗಿ, ಲೋಕದ ಗ್ರಹಿಕೆಗಾಗಿ, ಪ್ರಜ್ಞೆಯನ್ನು ವಿಸ್ತರಿಕೊಳ್ಳುವುದಕ್ಕಾಗಿ ವಚನಗಳ ಅನುಸಂಧಾನ ಅಗತ್ಯ ಎಂದು ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಬಸವ ಜಯಂತಿ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, “ಬದುಕಿನ ಹಾಗೂ ಸಮಾಜದ ಹಲವು ಸಂಕೀರ್ಣತೆಗಳನ್ನು ದಾಟಲು ವಚನಗಳು ಸಹಾಯಕವಾಗಿವೆ. ವಚನಗಳಿಗೆ ಮನಶಾಸ್ತ್ರೀಯ, ತತ್ವಶಾಸ್ತ್ರೀಯ, ಸಮಾಜಶಾಸ್ತ್ರೀಯ ಸೇರಿ ಹಲವು ಆಯಾಮಗಳಿವೆ” ಎಂದರು.

ವಚನಗಳು ಕನ್ನಡ ಜಗತ್ತಿಗೆ ವೈಚಾರಿಕ ಮತ್ತು ಬೌದ್ಧಿಕ ನೆಲೆಗಟ್ಟು ರೂಪಿಸಿವೆ. ಜೀವನಶೋಧ ಮತ್ತು ಲೋಕಶೋಧದ ತಾತ್ವಿಕತೆ ವಚನಗಳಲ್ಲಿದೆ. ಬಸವಣ್ಣನವರಷ್ಟು ಸ್ವ ವಿಮರ್ಶೆ ಮತ್ತು ಲೋಕ ವಿಮರ್ಶೆ ಮಾಡಿದವರು ಭಾರತೀಯ ಸಾಂಸ್ಕೃತಿಕ ಲೋಕದಲ್ಲಿ ಮತ್ತೊಬ್ಬರಿಲ್ಲ. ಬಸವಣ್ಣ ದೇಹ, ಮನಸ್ಸು, ದೇವರು, ಜ್ಞಾನ, ಸೇರಿ ಹಲವು ಸಂಗತಿಗಳನ್ನು ಕುರಿತು ತಾತ್ವಿಕವಾಗಿ, ತಾರ್ಕಿಕವಾಗಿ, ಬೌದ್ಧಿಕವಾಗಿ ಚಿಂತನೆ ಮಾಡಿದ ದಾರ್ಶನಿಕ ಎಂದು ಅಭಿಪ್ರಾಯಪಟ್ಟರು.

Advertisements

ನೇತ್ರತ್ವ ವಹಿಸಿದ ಭಾಲ್ಕಿ ಹಿರೇಮಠದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, “ವಿಶ್ವಗುರು ಬಸವಣ್ಣನವರು ಎಲ್ಲ ಕಾಲದ ಬೆಳಕು. ಎಲ್ಲ ಕಾಲ ಮತ್ತು ದೇಶದಲ್ಲಿ ಪ್ರಜ್ಞೆಯ ರೂಪವಾಗಿದ್ದಾರೆ. ಬದುಕಿನಲ್ಲಾಗುವ ಸಾತ್ವಿಕವಾದ ಬದಲಾವಣೆಯೇ ಬಸವ ಚಿಂತನೆ ಎಂದರ್ಥ. ಎಲ್ಲರನ್ನೂ ಒಳಗೊಳ್ಳುವ ಹಾಗೂ ತನ್ನತನವನ್ನು ಅನುಭವಕ್ಕೆ ತಂದುಕೊಳ್ಳುವ ಅನುಭೂತಿ ಬಸವಣ್ಣನವರು ಪ್ರತಿಪಾದಿಸಿದ್ದಾರೆ” ಎಂದು ನುಡಿದರು.

“ಶರಣರ ತತ್ವ ಹಾಗೂ ಬಸವ ಚಿಂತನೆ ಸಾತ್ವಿಕತೆಯ ಪ್ರತೀಕವಾಗಿದೆ. ಸಹಜತೆ, ವೈಚಾರಿಕತೆ, ವೈಜ್ಞಾನಿಕತೆ ಬಸವ ತತ್ವದ ಅಂತಃಸತ್ವವಾಗಿದೆ. ಬಸವ ತತ್ತ್ವವನ್ನು ಬದುಕಿನ ಮಹಾಮಾರ್ಗವಾಗಿಸಿದಾಗ ಮಾತ್ರ ಬದುಕಿಗೊಂದು ದಾರ್ಶನಿಕ ಪ್ರಭೆ ದಕ್ಕುತ್ತದೆ. ಬಸವ ದಾರ್ಶನಿಕತೆಯ ದಾರಿಯಲ್ಲಿ ಭಾಲ್ಕಿಯ ಹಿರೇಮಠ ಸಾಗಿದೆ” ಎಂದರು.

ರಾಷ್ಟ್ರೀಯ ಬಸವ ದಳದ ಬಸವಕಲ್ಯಾಣ ತಾಲೂಕಾಧ್ಯಕ್ಷ ರವಿಂದ್ರ ಕೊಳಕೂರ ಮಾತನಾಡಿ, “ಕಾಯಕ ಜೀವಿಗಳನ್ನು ಒಗ್ಗೂಡಿಸಿದ ಮಹಾನ್ ಚೇತನ ಬಸವಣ್ಣ. ಬಸವ ತತ್ತ್ವ, ಶರಣ ಸಂಸ್ಕೃತಿ ಮಕ್ಕಳಲ್ಲಿ ಬಿತ್ತುತಿರುವ ಭಾಲ್ಕಿಯ ಇಬ್ಬರೂ ಪೂಜ್ಯರು ಪ್ರತಃಸ್ಮರಣಿಯರು. ಭಾಲ್ಕಿ ಶ್ರೀಗಳ ಒತ್ತಾಸೆ, ಒತ್ತಡದಿಂದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಕರ್ನಾಟಕ ಸರ್ಕಾರ ಘೋಷಿಸಲು ಸಾಧ್ಯವಾಯಿತು” ಎಂದರು.

ಯುವ ಮುಖಂಡ ಶಿವಕುಮಾರ ಬಿರಾದಾರ ಮಾತನಾಡಿ, “ಜನವಾಣಿಯನ್ನು ದೇವವಾಣಿಯಾಗಿಸಿದ್ದು ಬಸವಣ್ಣನವರು. ಸಮಾನತೆ ಸ್ವಾತಂತ್ರ್ಯ ಎಲ್ಲರಿಗೂ ಕಲ್ಪಿಸಿದ ಬಸವಣ್ಣ ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ ಯನ್ನು ನಿಷ್ಠುರವಾಗಿ ವಿರೋಧಿಸಿದ್ದರು” ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಬಿಸಿಲಿನ ತಾಪಕ್ಕೆ ಉದ್ಯೋಗ ಖಾತ್ರಿ ಕಾರ್ಮಿಕ ಸಾವು

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ಯುವ ಉದ್ಯಮಿಗಳಾದ ಜಗನ್ನಾಥ ಪಾಟೀಲ, ಸೌರಭ ಶಿವಣಕರ, ಪ್ರೇಮ ಖಂಡ್ರೆ, ಪ್ರಾಚಾರ್ಯ ಬಸವರಾಜ ಮೋಳಕೇರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಸೇರಿ ಹಲವರಿದ್ದರು. ಚೇತನ ರಾಜಕುಮಾರ ಸ್ವಾಗತಿಸಿದರು.
ಪೂಜಾ ಮತ್ತು ಸಾಕ್ಷಿ ನಿರೂಪಿಸಿದರು. ಕಾವೇರಿ ರಾಠೋಡ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X