12ನೆಯ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಮತ್ತು ಅಂಧಶ್ರದ್ಧೆ, ಮೂಢನಂಬಿಕೆ ನಿರ್ಮೂಲನೆಗಾಗಿ ರಕ್ತ ಹರಿಸಿದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣವರ ಜಯಂತ್ಯುತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಷಟಸ್ಥಲ ಧ್ವಜರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
“ಜಾತಿ ವ್ಯವಸ್ಥೆ ತೊಲಗಿಸಲು ಬಸವಣ್ಣವರ ನೇತೃತ್ವದಲ್ಲಿ ಕ್ರಾಂತಿ ನಡೆಯಿತು. ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ಶರಣರು ತಮ್ಮ ತತ್ವ ಬಿಟ್ಟುಕೊಡಲಿಲ್ಲ. ಈ ಕಾರಣಕ್ಕಾಗಿಯೇ ಕಲ್ಯಾಣದಲ್ಲಿ ಕ್ರಾಂತಿ ನಡೆಯಿತು ಶರಣರು ತತ್ವಕ್ಕಾಗಿ ರಕ್ತದ ಕಣ ಹರಿಸಿದರು. ಶರಣರು ನಡೆದಾಡಿದ ಪವಿತ್ರ ಭೂಮಿ ಮತ್ತೊಮ್ಮೆ ಜಗದಗಲ ಬೆಳಗಬೇಕಿದೆ. ಶರಣರ ವಿಚಾರಧಾರೆ ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಮುಖ್ಯವಾಗಿದೆ” ಎಂದು ತಿಳಿಸಿದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆ ಧ್ವಜರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವು ಲೋಖಂಡೆ, ಚಂದ್ರಕಾಂತ ಪಾಟೀಲ್, ಜೈರಾಜ ಪಾತ್ರೆ, ಕಿರಣ ಖಂಡ್ರೆ, ಜಗದೀಶ ಖಂಡ್ರೆ, ಹಣಮಂತರಾವ ಚವ್ಹಾಣ, ಓಂಪ್ರಕಾಶ ರೊಟ್ಟೆ, ಡಾ.ಅಮಿತ ಅಷ್ಟೂರೆ, ಅಮರ ಜಲ್ದೆ, ಸುಭಾಷ ಕಾರಾಮುಂಗೆ, ಬಸವರಾಜ ವಂಕೆ, ವಿಜಯಕುಮಾರ ರಾಜಭವನ, ಅನಿಲ ಲೋಖಂಡೆ, ಅಶೋಕ ಬಾವುಗೆ, ಬಸವರಾಜ ಮರೆ, ವಿಶ್ವನಾಥ ಮೋರೆ, ವಿಲಾಸ ಮೋರೆ, ಟಿಂಕು ರಾಜಭವನ ಸೇರಿದಂತೆ ಹಲವರು ಇದ್ದರು.
ಬಸವಣ್ಣನವರ ಚಿಂತನೆ ಜಗತ್ತಿನಾದ್ಯಂತ ಪ್ರಸ್ತುತ : ಜಿಲ್ಲಾಧಿಕಾರಿ
ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಪ್ರಸ್ತುತವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಜಿಲ್ಲಾಡಳಿತ ಬೀದರ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದ ಮಾತನಾಡಿದರು.
“ಸಮಾಜದಲ್ಲಿ ಬೇರೂರಿದ್ದ ಅಂಧ ಶ್ರದ್ದೆಗಳನ್ನು ಹೋಗಲಾಡಿಸಲು ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತಂದರು. ಬಸವಣ್ಣನವರ ಕರ್ಮಭೂಮಿಯಲ್ಲಿ ನಾವು ಜನಿಸಿದ್ದೆವೆ ಎಂದು ಹೇಳಲು ನಮಗೆ ಸಂತೋಷ ಅನಿಸುತ್ತದೆ” ಎಂದು ಹೇಳಿದರು.

ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತೆಯಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಬಸವ ಮಾರ್ಗವನ್ನು ಅನುಸರಿಸುವ ಮೂಲಕ ಹಲವಾರು ವಚನಗಳ ಮೂಲಕ ಹೊಸ ಆಚಾರ ಮತ್ತು ವಿಚಾರಗಳನ್ನು ಸಮಾಜಕ್ಕೆ ನೀಡಿದ್ದರು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, “ಬಸವಣ್ಣನವರು ಆಧ್ಯಾತ್ಮಿಕ ಸಂತ ಮಾತ್ರವಲ್ಲದೆ ಅವರೊಬ್ಬ ಒಳ್ಳೆಯ ಆಡಳಿತಗಾರರಾಗಿದ್ದರು. 770 ಅಮರ ಗಣಂಗಳ ವಚನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? 57 ದಿನದ ಬಳಿಕ ಜೈಲಿನಿಂದ ಹೊರಬಂದ ಕೇಜ್ರಿವಾಲ್ : ಆಪ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಕಾರ್ಯಕ್ರಮದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಗೌರವ ಅಧ್ಯಕ್ಷ ರಾಜೇಂದ್ರಕುಮಾರ ಗಂಧಗೆ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಸೋಮಶೇಖರ್ ಪಾಟೀಲ, ಸಚಿವ ರಹೀಂ ಖಾನ್, ಬಸವ ಕೇಂದ್ರ ಅಧ್ಯಕ್ಷ ಶರಣಪ್ಪ ಮಿಠಾರೆ, ನಗರಸಭೆ ಅಧ್ಯಕ್ಷರ ಮೊಹ್ಮದ್ ಗೌಸ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಕುಶಾಲ ಪಾಟೀಲ ಕಾಶಂಪೂರ, ಶಿವಶರಣಪ್ಪ ವಾಲಿ, ಬಸವರಾಜ ಧನ್ನೂರ, ಸುರೇಶ ಚನ್ನಶೆಟ್ಟಿ, ರಜನೀಶ ವಾಲಿ, ಅಶೋಕ ಕರಂಜಿ, ವಿರೂಪಾಕ್ಷ ಗಾದಗಿ, ವಿಜಯಕುಮಾರ ಸೋನಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.