ಕಾರಿನ ಮಾಲೀಕನ ಅಜಾಗರೂಕತೆಯಿಂದ ನಾಲ್ಕು ವರ್ಷದ ಬಾಲಕ ಬಲಿಯಾದ ಘಟನೆ ಬೆಂಗಳೂರಿನ ಜೈ ಭೀಮಾನಗರದ ಮುರಗೇಶ್ ಪಾಳ್ಯದಲ್ಲಿ ಭಾನುವಾರ ನಡೆದಿದೆ.
ಆರವ್ (5) ಮೃತ ದುರ್ದೈವಿ. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಮುರುಗೇಶಪಾಳ್ಯ ರಸ್ತೆಯಲ್ಲಿ ದುರ್ಘಟನೆ ನಡೆದಿದೆ.
ಮೃತ ಆರವ್ ತನ್ನ ಮನೆ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದನು. ಇದೇ ಸಮಯದಲ್ಲಿ, 15 ವರ್ಷದ ಬಾಲಕ ತನ್ನ ತಂದೆಯ ಜತೆಗೆ ಕಾರು ತೊಳೆಯುತ್ತಿದ್ದಾಗ, ಬಾಲಕ ಕಾರಿನ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತ ಏಕಾಏಕಿ ಎಕ್ಸಿಲೇಟರ್ ತುಳಿದಿದ್ದಾನೆ.
ಪರಿಣಾಮ ಕಾರು ರಭಸವಾಗಿ ಚಲಿಸಿದೆ. ಅಲ್ಲೇ ಆಟವಾಡುತ್ತಿದ್ದ ಆರವ್ ಮೇಲೆ ಹರಿದಿದೆ. ಕಾರು ಗುದ್ದಿದ ರಭಸಕ್ಕೆ ಆರವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಳೆಗಾಲದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಮರ ಕಟಾವು ತಂಡಗಳು
ಡ್ರೈವಿಂಗ್ ಮಾಡಿದ ಕಾರು ಚಾಲಕನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಾಲಕನ ಮೃತದೇಹವನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೂ ಘಟನೆಯಲ್ಲಿ ಮಗುವಿಗೆ ಗುದ್ದಿದ ನಂತರ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೂ ಕಾರು ಗುದ್ದಿದೆ ಎಂದು ತಿಳಿದುಬಂದಿದೆ.