ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ. ತಾಲೂಕಿನ ಜಂಗೀರಾಂಪೂರ ತಾಂಡಾದಲ್ಲಿ ಸಿಡಿಲು ಬಡಿದು 5 ಮೇಕೆ ಸಾವು ಸಾವನಪ್ಪಿವೆ.
ಸಾವನಪ್ಪಿದ ಮೇಕೆ ಹನುಮಂತ ಮೇಘಪ್ಪ ಎನ್ನುವರಿಗೆ ಸೇರಿವೆ. ಸಿಡಿಲಿನಿಂದ ರೈತ ಹನುಮಂತ ಮೇಘಪ್ಪ ಗಾಯಗೊಂಡಿದ್ದಾರೆ. ಅವರನ್ನು ಲಿಂಗಸೂಗೂರ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಗಾಯಗೊಂಡ ರೈತರ ಆರೋಗ್ಯ ವಿಚಾರಿಸಿದರು. ಮೃತಪಟ್ಟ ಮೇಕೆಗಳಿಗೆ ಪರಿಹಾರ ಹಾಗೂ ಗಾಯಗೊಂಡಿರುವ ಹನುಮಂತ ಮೇಘಪ್ಪ ಅವರ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ಭರವಸೆ ನೀಡಿದರು.