ಲೈಂಗಿಕ ಹಗರಣ ಹಾಗೂ ಭೂಕಬಳಿಕೆ ಆರೋಪದಲ್ಲಿ ಬಂಧಿತರಾಗಿರುವ ಸ್ಥಳೀಯ ಟಿಎಂಸಿ ನಾಯಕ ಶಹಜಹಾನ್ ಶೇಖ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ 70 ಮಹಿಳೆಯರಿಗೆ 2 ಸಾವಿರ ರೂ. ನೀಡಲಾಗಿದೆ ಎಂಬ ಹೇಳಿಕೆಯನ್ನು ಸ್ಥಳೀಯ ಬಿಜೆಪಿ ನಾಯಕನೊಬ್ಬ ಹೇಳುತ್ತಿರುವ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.
45 ನಿಮಿಷಗಳ ಈ ವಿಡಿಯೋದಲ್ಲಿ ಸಂದೇಶ್‌ಖಾಲಿ ಮಂಡಲ್‌ನ ಅಧ್ಯಕ್ಷ ಗಂಗಾಧರ್ ಕಾಯಲ್ ಎಂಬಾತ ಮಹಿಳೆಯರು ಹಣ ಸ್ವೀಕರಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾನೆ. ಈ ಮೊದಲು ಇದೇ ವ್ಯಕ್ತಿ ಮಹಿಳೆಯರ ಅತ್ಯಾಚಾರ ಆರೋಪ ಸುಳ್ಳು ಎಂದು ಕೆಲ ದಿನಗಳ ಹಿಂದೆ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.
ಲೈಂಗಿಕ ಹಗರಣ ಹಾಗೂ ಭೂಕಬಳಿಕೆ ಆರೋಪದಲ್ಲಿ ಬಂಧಿತನಾಗಿರುವ ಶೇಖ್ ಶಹಜಹಾನ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ 70 ಮಹಿಳೆಯರು ತಲಾ 2 ಸಾವಿರ ರೂ ಸ್ವೀಕರಿಸಿದ್ದಾರೆ ಎಂದು ಹೇಳುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.
“50 ಮತಗಟ್ಟೆಗಳಲ್ಲಿ 2.5 ಲಕ್ಷ ರೂ. ನಗದು ಅಗತ್ಯವಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುವ ಶೇ.30 ಮಂದಿ ಮಹಿಳೆಯರೆ ಆಗಿರುತ್ತಾರೆ. ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿ ಅವರನ್ನು ತೃಪ್ತಿಪಡಿಸಲು ಅವರಿಗೆ ಉತ್ತಮ ಸಂಭಾವನೆ ನೀಡಬೇಕು. ಈ ಸಂದರ್ಭದಲ್ಲಿ ಮಹಿಳೆಯರು ಪೊಲೀಸರ ಮುಂದೆ ಮೊದಲ ಸಾಲಿನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು” ಎಂದು ದೃಶ್ಯದಲ್ಲಿ ಗಂಗಾಧರ್ ಕಾಯಲ್ ಹೇಳುತ್ತಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಟಿಎಂಸಿ ವಕ್ತಾರ ರಿಜು ದತ್, ಸಂದೇಶ್‌ಖಾಲಿಯನ್ನು ಪ್ರಚೋದಿಸುವ ಬಿಜೆಪಿಯ ನಕಲಿ ನಿರೂಪಣೆಗಳು ನಿಜವಾಗುತ್ತಿವೆ. ಈಗ ಬಿಡುಗಡೆಯಾಗುತ್ತಿರುವ ವಿಡಿಯೋಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಡಿಯೋಗಳನ್ನು ಕೆಲವು ದಿನಗಳಿಂದ ಟಿಎಂಸಿ ಹಂಚಿಕೊಳ್ಳುತ್ತಿದೆ.
ಮೇ.4 ರಂದು ಬಿಡುಗಡೆಗೊಂಡಿದ್ದ ವಿಡಿಯೋದಲ್ಲಿ ಪ್ರತಿಪಕ್ಷದ ನಾಯಕ ಸುವೆಂದು ಅಧಿಕಾರಿಯ ಆದೇಶದ ಮೇರೆಗೆ ಪ್ರತಿಭಟನೆಗಳನ್ನು ನಡೆಸಲಾಗಿದ್ದು, ಇದರ ಹಿಂದಿನ ಸಂಪೂರ್ಣ ಪಿತೂರಿ ಸುವೆಂದು ಎಂದು ಸಂದೇಶ್‌ಖಾಲಿ ಮಂಡಲ್‌ನ ಅಧ್ಯಕ್ಷ ಗಂಗಾಧರ್ ಕಾಯಲ್ ಹೇಳಿದ್ದ.
ಆದರೆ ಟಿಎಂಸಿ ನಾಯಕರ ಈ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ನಾಯಕರು ಚುನಾವಣೆಗಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ,
