ರಾಜ್ಯಾದ್ಯಂತ ರೈಲು ನಿಲ್ದಾಣಗಳಿಂದ 22 ಮಕ್ಕಳನ್ನು ರಕ್ಷಿಸಿದ ಆರ್‌ಪಿಎಫ್‌

Date:

Advertisements

ಏಪ್ರಿಲ್‌ನಲ್ಲಿ ನೈಋತ್ಯ ರೈಲ್ವೆ ವಲಯದಾದ್ಯಂತ 4 ಹುಡುಗಿಯರು ಸೇರಿದಂತೆ 22 ಮಕ್ಕಳನ್ನು ರಕ್ಷಿಸುವಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪ್ರಮುಖ ಪಾತ್ರ ವಹಿಸಿದೆ.

ಕಳೆದುಹೋದ ಮಕ್ಕಳನ್ನು ರಕ್ಷಿಸಲು ವಿಶೇಷವಾಗಿ ರಚಿಸಲಾದ ಆರ್‌ಪಿಎಫ್‌ನ `ನನ್ಹೆ ಫರಿಶ್ತೆ’ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ನಾನಾ ಕಾರಣಗಳಿಂದ ಮಕ್ಕಳು ತಮ್ಮ ಕುಟುಂಬದಿಂದ ಬೇರ್ಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆರ್‌ಪಿಎಫ್‌ನ ಮತ್ತೊಂದು ಕಾರ್ಯಾಚರಣೆಯ ಉಪಲಬ್ಧ ಅಡಿಯಲ್ಲಿ, ₹13,67,887 ಮೌಲ್ಯದ ಟಿಕೆಟ್‌ಗಳನ್ನು ವಶಪಡಿಸಿಕೊಂಡಿದೆ. ಅಕ್ರಮವಾಗಿ ಟಿಕೆಟ್‌ ಮಾರಾಟ ಮಾಡುತ್ತಿದ್ದ 24 ಮಂದಿಯನ್ನು ಬಂಧಿಸಿದೆ.

Advertisements

“ರೈಲ್ವೆ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್ ಹಾವಳಿ ತಡೆಯಲು ಕರ್ನಾಟಕ ಮತ್ತು ಗೋವಾದಾದ್ಯಂತ ಟ್ರಾವೆಲ್ ಏಜೆನ್ಸಿಗಳು / ಏಜೆಂಟ್‌ಗಳಲ್ಲಿ ವಿಶೇಷ ಕಾರ್ಯಚರಣೆ ನಡೆಸಲಾಗಿದೆ. 23 ಪ್ರಕರಣಗಳಲ್ಲಿ, 24 ಮಂದಿಯನ್ನು ಬಂಧಿಸಿ ರೈಲ್ವೇ ಕಾಯ್ದೆಯ ಸೆಕ್ಷನ್ 143 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ₹2,88,515 ಮೌಲ್ಯದ ಒಟ್ಟು 94 ನೇರ ಮುಂಗಡ ಟಿಕೆಟ್ ಮತ್ತು ₹10,79,371 ಮೌಲ್ಯದ 751 ಬಳಸಿದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆರ್‌ಪಿಎಫ್‌ನ ‘ಆಪರೇಷನ್ ನಾರ್ಕೋಸ್’ ಅಡಿಯಲ್ಲಿ ಏಪ್ರಿಲ್‌ನಲ್ಲಿ ನಡೆದ ಆರು ಘಟನೆಗಳಲ್ಲಿ ಮೂವರನ್ನು ಬಂಧಿಸಿ ₹49,90,500 ಮೌಲ್ಯದ 50.88 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವೈಟ್ ಟಾಪಿಂಗ್ ಕಾಮಗಾರಿ; ಚಿಕ್ಕಪೇಟೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಭಾರಿ ಕುಸಿತ

ಆರ್‌ಪಿಎಫ್‌ನ ಕಾರ್ಯಾಚರಣೆ ‘ಯಾತ್ರಿ ಸುರಕ್ಷಾ’ ಪ್ರಯಾಣಿಕರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾಗಿರುವ ಮೂವರನ್ನು ಬಂಧಿಸಿದೆ. 106 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಪ್ರಯಾಣಿಕರಿಂದ ಕಳವು ಮಾಡಿದ್ದ ₹4.77 ಲಕ್ಷ ನಗದು ಹಾಗೂ ₹70,000 ಮೌಲ್ಯದ ನಾಲ್ಕು ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ವಸ್ತುಗಳನ್ನು ಸಂತ್ರಸ್ತರಿಗೆ ಹಿಂತಿರುಗಿಸಲಾಗಿದೆ.

‘ಆಪರೇಷನ್ ಸತಾರ್ಕ್’ ಅಡಿಯಲ್ಲಿ 42 ಘಟನೆಗಳಲ್ಲಿ ₹8,34,776 ಮೌಲ್ಯದ 961 ಮದ್ಯದ ಬಾಟಲಿಗಳನ್ನು (7,67,799 ಮಿಲಿ) ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X