ಜಮೀನು ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಗದ್ದೇಹಳ್ಳಿ ರೈತ ನಾಗರಾಜು ಅವರಿಗೆ ಜಮೀನು ಖಾತೆ ಮಾಡಿಕೊಡಲು ನರಸಿಂಹಮೂರ್ತಿ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ, ರೈತ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸರ ನಿರ್ದೇಶನದಂತೆ ನರಸಿಂಹಮೂರ್ತಿಗೆ ಹಣ ಕೊಡಲು ರೈತ ನಾಗರಾಜು ತೆರಳಿದ್ದರು. ಈ ವೇಳೆ, ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ನರಸಿಂಹಮೂರ್ತಿ ಅವರನ್ನು ರೆಡ್‌ಹ್ಯಾಂಡ್‌ಆಗಿ ಹಿಡಿದಿದ್ದಾರೆ.