ತುಮಕೂರು | ಮಾಗಡಿಗೆ ಹೇಮಾವತಿ ನಾಲೆ ನೀರು; ಯೋಜನೆ ವಿರುದ್ಧ ರೈತರ ಪ್ರತಿಭಟನೆ

Date:

Advertisements

ತುಮಕೂರು ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ನಾಲೆಯ ನೀರನ್ನು ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್ ಮೂಲಕ ಮಾಗಡಿಗೂ ತಿರುಗಿಸಲು ಸರ್ಕಾರ ಯೋಜನೆ ರೂಪಿಸಿದೆ. ಕಾಮಗಾರಿಯನ್ನೂ ಆರಂಭಿಸಿದೆ. ಯೋಜನೆಯನ್ನು ವಿರೋಧಿಸಿ ತುಮಕೂರು ಜಿಲ್ಲೆಯ ರೈತರು ಪ್ರತಿಭಟನೆ ನಡೆಸಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಡಿ.ರಾಂಪುರ ಗ್ರಾಮದ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ನಾಲೆಗೆ ಮಣ್ಣು ಹಾಕಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, “ಹೇಮಾವತಿ ನೀರಿಗಾಗಿ ಈ ಹಿಂದೆ ಹೋರಾಟಗಳು ನಡೆದಿದ್ದವು. ನಿರಂತಕ ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ಎಡದಂಡೆ ನಾಲೆಯ ಮೂಲಕ 24.5 ಟಿಎಂಸಿ ನೀರು ಹಂಚಿಕೆ ಮಾಡಿದ್ದು, ಜಿಲ್ಲೆ ನೀರು ಪಡೆಯುತ್ತಿದೆ. ಆದರೆ, ಈಗ ನಮ್ಮ ನೀರನ್ನು ಕಿತ್ತುಕೊಳ್ಳುವ ಯೋಜನೆ ರೂಪಿಸಲಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಅಧಿಕಾರದ ದರ್ಪ ಮೆರೆದಿದ್ದಾರೆ. ಜಿಲ್ಲೆಯಲ್ಲಿನ ಇಬ್ಬರು ಸಚಿವರು ಯೋಜನೆಯ ವಿಚಾರದಲ್ಲಿ ಮೌನವಾಗಿದ್ದಾರೆ. ಯೋಜನೆಯನ್ನು ಕೈಬಿಟ್ಟು, ಕಾಮಗಾರಿ ನಿಲ್ಲಿಸಬೇಕು” ಎಂದು ಆಗ್ರಹಿಸಿದರು.

Advertisements

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, “ಜನ ತೀರ್ಮಾನ ಮಾಡಿದರೆ ಸರ್ಕಾರವೇ ಉರುಳುತ್ತದೆ. ಜೂನ್ 5ರೊಳಗೆ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದ್ದೇವೆ. ಈ ಮಧ್ಯೆ ಎಲ್ಲಿಯೇ ಕೆಲಸ ನಡೆದರೂ ಯಂತ್ರಗಳನ್ನು ತಡೆದು ಕೆಲಸ ನಿಲ್ಲಿಸಬೇಕು. ನೀರಿನ ಅವಶ್ಯಕತೆ ಅರಿತವರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಗೆ ಬಂದಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಏಕಪಕ್ಷೀಯ ನಿರ್ಧಾರಕ್ಕೆ ಬುದ್ದಿ ಕಳಿಸಬೇಕಿದೆ. ಜಿಲ್ಲೆಯ ಕಾಂಗ್ರೆಸ್ ನಾಯಕರನ್ನು ಹೆದರಿಸಿ, ಯೋಜನೆ ಆರಂಭಿಸಿದ್ದಾರೆ. ಅದೇ ದಿಟ್ಟತನವನ್ನು ಮೇಕೆದಾಟು ಯೋಜನೆಯಲ್ಲಿ ತೋರಿಸಬೇಕು” ಎಂದು ಸವಾಲು ಹಾಕಿದ್ದಾರೆ.

WhatsApp Image 2024 05 16 at 5.08.25 PM

ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, “ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತುಟಿ ಬಿಚ್ಚದ ಇಬ್ಬರು ಸಚಿವರಿಗೆ ಯಾವುದೇ ಇಚ್ಛಾಶಕ್ತಿ ಇಲ್ಲ. ಹಾಗೆಯೆ ಸಚಿವ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಡಿಕೆಶಿ ಅವರಿಗೆ ಹೆದರುವ ಜಿಲ್ಲೆಯ ಕಾಂಗ್ರೆಸ್ ಮುಖಂಡರು ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಡಿ.ಕೆ.ಸುರೇಶ್ ಹಾಗೂ ಡಾ.ರಂಗನಾಥ್ ಅವರ ಹಿತಾಸಕ್ತಿಗೆ ರೂಪಗೊಂಡ ಈ ಯೋಜನೆಗೆ ಈಗಾಗಲೇ 200 ಕೋಟಿ ಮಂಜೂರಾಗಿದೆ ಎನ್ನಲಾಗಿದೆ. ಮುಖ್ಯನಾಲೆ ಆಧುನೀಕರಣಕ್ಕೆ 700 ಕೋಟಿ ಬಳಸಿ ಸಿದ್ಧಗೊಂಡ ನಾಲೆಯಲ್ಲಿ ಕುಣಿಗಲ್ ಗೆ ನೀರು ತೆಗೆದುಕೊಂಡು ಹೋಗಲಿ. ಆದರೆ ವಾಮಮಾರ್ಗ ಅನುಸರಿಸಿ ಏಳೆಂಟು ತಾಲ್ಲೂಕು ರೈತರಿಗೆ ಅನ್ಯಾಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದ ಅವರು ಮೂರು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆ ನಿರ್ಣಯಕ್ಕೆ ಬೆಲೆಯೇ ಇಲ್ಲವಾಗಿದೆ. ಈ ಧೋರಣೆಗೆ ಜಿಲ್ಲೆಯ ಎಲ್ಲಾ ಶಾಸಕರು ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತೇವೆ. ಐದು ಬಾರಿ ನಿರಂತರವಾಗಿ ಗೆದ್ದ ಗುಬ್ಬಿ ಶಾಸಕರು ಮೊದಲು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

ಶಾಸಕ ಜಿ. ಬಿ.ಜ್ಯೋತಿ ಗಣೇಶ್ ಮಾತನಾಡಿ, “ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಶ್ರೀರಂಗ ಯೋಜನೆ ಪೈಪ್ ಲೈನ್ ಕಾಮಗಾರಿ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಿದ ಯುಡಿಯೂರಪ್ಪ ಅವರು ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಲಿಂಕ್ ಕೆನಾಲ್ ಯೋಜನೆ ರದ್ದುಗೊಳಿಸಿತ್ತು. ಮರಳಿ ಆರಂಭಿಸಿರುವ ಕಾಂಗ್ರೆಸ್ ಸರ್ಕಾರ ಒಬ್ಬ ಪ್ರಭಾವಿ ಆಣತಿಯಂತೆ ನಡೆದುಕೊಂಡಿದೆ. ಈ ನಿಟ್ಟಿನಲ್ಲಿ ರೈತರಿಗೆ ಅರಿವು ಮೂಡಿದೆ. ಆಕ್ರೋಶದ ಕಟ್ಟೆ ಒಡೆಯುವ ಮುನ್ನ ಯೋಜನೆ ಕೈಬಿಡಿ” ಎಂದು ಒತ್ತಾಯಿಸಿದರು.,

‘ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, “ನೀರಿಗಾಗಿ ಹೋರಾಟದಲ್ಲಿ ಜೈಲಿಗೆ ಹೋಗಲು ಸಿದ್ಧ. ಕುಣಿಗಲ್ ಭಾಗಕ್ಕೆ ಹಂಚಿಕೆಯಾದ 3 ಟಿಎಂಸಿ ನೀರು ಮುಖ್ಯ ನಾಲೆಯ ಮೂಲಕ ತೆಗೆದುಕೊಳ್ಳಲಿ. ಆದರೆ ಈ ಹೋರಾಟದ ಬಗ್ಗೆ ತಪ್ಪು ಕಲ್ಪನೆ ಅವರಲ್ಲಿದೆ. ಇದು ಬೇರೆ ಜಿಲ್ಲೆಗೆ ಮಾಗಡಿಗೆ ಹೇಮೆ ಹರಿಸುವ ಬಗ್ಗೆ ನಡೆದ ಯೋಜನೆಯ ವಿರೋಧದ ಹೋರಾಟ ಎಂಬುದು ಮನವರಿಕೆಯಾಗಬೇಕು” ಎಂದರು.

ಮಾಜಿ ಶಾಸಕ ಮಸಾಲ ಜಯರಾಮ್ ಮಾತನಾಡಿ, “ಹೇಮಾವತಿ ನೀರು ಹಂಚಿಕೆಗೆ ನೀರಿಲ್ಲ. ಹೇಗೆ ಮಾಗಡಿಗೆ ನೀರು ಕೊಂಡೊಯ್ಯುತ್ತಿರಿ. ನಮ್ಮ ಹಕ್ಕಿನ 24 ಟಿಎಂಸಿ ನೀರು ನಮಗೆ ಸಾಲದು. ಅದನ್ನು ಕಿತ್ತುಕೊಳ್ಳುವ ಹಕ್ಕು ನಿಮಗಿಲ್ಲ. ಎಲ್ಲಾ ಭಾಗ್ಯ ಕೊಟ್ಟ ಕಾಂಗ್ರೆಸ್ ಸರ್ಕಾರ ವಿಷದ ಭಾಗ್ಯ ಕೊಟ್ಟು ನಿಮ್ಮ ರೈತರಿಗೆ ವಿಷ ಕೊಟ್ಟು ಆಮೇಲೆ ನೀರು ತೆಗೆದುಕೊಂಡು ಹೋಗಲಿ” ಎಂದರು.

ಪ್ರತಿಭಟನಾ ಸಭೆಯಲ್ಲಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ದೊಡ್ಡಗುಣಿ ರೇಣುಕಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಮಠದ ಕಾರದ ಬಸವ ಶ್ರೀಗಳು, ಸಿದ್ದರಬೆಟ್ಟ ಶ್ರೀಗಳು, ಶಿವಗಂಗೆ ಮಹಾಲಕ್ಷ್ಮಿ ಪೀಠದ ಜ್ಞಾನನಂದಪುರಿ ಸ್ವಾಮೀಜಿ, ಮಾಜಿ ಶಾಸಕರಾದ ಸುಧಾಕರ್ ಲಾಲ್, ಎಂ.ಡಿ.ಲಕ್ಷ್ಮೀನಾರಾಯಣ್, ಮುಖಂಡರಾದ ಶಾಂತಕುಮಾರ್, ಅನಿಲ್ ಕುಮಾರ್, ಲೋಕೇಶ್ವರ, ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜ್, ಅಂಜಿನಪ್ಪ, ಕಳ್ಳಿಪಾಳ್ಯ ಲೋಕೇಶ್, ಭೈರಪ್ಪ, ಪಂಚಾಕ್ಷರಿ, ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X