ಬೆಂಗಳೂರಿನಲ್ಲಿ ಕೆಲ ತಿಂಗಳಿನಿಂದ ತಲೆದೋರಿರುವ ನೀರಿನ ಕೊರತೆ ಕುಂಬಾರಿಕೆ ಟೌನ್ ಮತ್ತು ಬೆನ್ಸನ್ ಟೌನ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಪರಿಣಾಮ ಬೀರಿದೆ. ಕುಂಬಾರರು, ಸಣ್ಣ ತಿನಿಸು ಮಾಲೀಕರು ಹಾಗೂ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ವಾರಕ್ಕೆ ಕೆಲವು ಗಂಟೆ ಮಾತ್ರ ನೀರು ಬರುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಪ್ರದೇಶಗಳಲ್ಲಿ ವಾರಕ್ಕೆ ಕೆಲವು ಗಂಟೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನೀರು ಸರಬರಾಜು ಯಾವಾಗ ಆರಂಭವಾಗುತ್ತದೆ ಎಂಬುದು ತಮಗೆ ತಿಳಿದಿಲ್ಲ ಎಂದೆನ್ನುತ್ತಾರೆ ಇಲ್ಲಿನ ನಿವಾಸಿಗಳು. ಸದಾಕಾಲ ನಲ್ಲಿಗಳನ್ನು ತೆರೆದು ಅಲ್ಲಿ ಬಿಂದಿಗೆಗಳನ್ನು ಇಟ್ಟು ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ನೀರಿಗಾಗಿಯೇ ತಮ್ಮ ಎಲ್ಲ ಕೆಲಸಗಳನ್ನೂ ಬಿಟ್ಟು ಕಾಯಬೇಕಾದ ಪರಿಸ್ಥಿತಿ ಇದ್ದು, ಇದರಿಂದ ರೋಸಿ ಹೋಗಿರುವ ಜನ ಅಧಿಕಾರಿಗಳಿಗೆ ಸೂಕ್ತ ಸಂದರ್ಭದಲ್ಲಿ ನೀರು ಬಿಡುವಂತೆ ಒತ್ತಾಯಿಸುತ್ತಿದ್ದಾರೆ.
ನೀರು ಸರಬರಾಜು ಯಾವಾಗ ಪುನರಾರಂಭವಾಗುತ್ತದೆ ಎಂದು ತಿಳಿದಿಲ್ಲದ ಕಾರಣ ಅವರು ನೀರನ್ನು ಮಿತವಾಗಿ ಬಳಸುತ್ತಾರೆ. ಅದು ಮರುದಿನ ಅಥವಾ ಮುಂದಿನ ವಾರವೂ ಆಗಿರಬಹುದು.
“ಇಲ್ಲಿ ನೀರು ಯಾವಾಗ ಬರುತ್ತದೆ ಎಂಬ ಬಗ್ಗೆ ತಿಳಿದಿಲ್ಲ. ಹಾಗಾಗಿ, ಯಾವಾಗಲೂ ಟ್ಯಾಪ್ ತೆರೆದು ಬಿಂದಿಗೆ ಇಟ್ಟಿರುತ್ತೇವೆ. ನೀರು ಜಿನುಗುವ ಶಬ್ದ ಕೇಳಿದಾಗ ಕೂಡಲೇ ಉಳಿದ ನಿವಾಸಿಗಳಿಗೂ ಮಾಹಿತಿ ನೀಡುತ್ತೇವೆ” ಎಂದು ಕುಂಬಾರ ರಾಜಶೇಖರ್ ಹೇಳಿದರು.
“ಸುಮಾರು 200 ಕುಟುಂಬಗಳಿವೆ. ಪ್ರತಿ ಕುಟುಂಬವು ಕನಿಷ್ಠ ನಾಲ್ಕು ಸದಸ್ಯರನ್ನು ಹೊಂದಿದೆ. ಪ್ರತಿ ದಿನವೂ ನೀರು ಸರಬರಾಜು ಮಾಡಿದರೂ, ನಾವು ಎಷ್ಟು ಸಂಗ್ರಹಿಸಬಹುದು?” ಎಂದು ಪ್ರಶ್ನಿಸಿದರು.
ಕಳೆದ ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ನೀರಿನ ಲಭ್ಯತೆ ಇದ್ದರೂ, ಯಾವುದೇ ಮುನ್ಸೂಚನೆ ನೀಡದೆ ಆಗಾಗ್ಗೆ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಮತ್ತೊಬ್ಬರು ದೂರಿದರು.
ತಮ್ಮ ಕಸುಬಿಗಾಗಿ ಗಂಟೆಗಟ್ಟಲೆ ಒಟ್ಟಿಗೆ ಕೂರುವ ಕುಂಬಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನೀರು ತುಂಬಿಸುವ ಮತ್ತು ಮನೆಯಲ್ಲಿ ಸಾಕಷ್ಟು ನೀರು ಇರುವುದನ್ನು ಖಾತ್ರಿಪಡಿಸುವ ನಿರಂತರ ಚಿಂತೆ ಅವರನ್ನು ತೊಂದರೆಗೊಳಿಸುತ್ತದೆ. ಇದು ಮಾನಸಿಕವಾಗಿ ಕುಗ್ಗಿಸುತ್ತದೆ. ನಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತದೆ. ನೇರ ಗ್ರಾಹಕರ ಮಾರಾಟಕ್ಕಿಂತ ಹೆಚ್ಚಾಗಿ ಚಿಲ್ಲರೆ ವ್ಯಾಪಾರಿಗಳ ಮೇಲೆ ಅವಲಂಬಿತವಾಗಿದ್ದರೂ, ಇದು ನಮ್ಮ ದೈನಂದಿನ ಗುರಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಬೆನ್ಸನ್ ಟೌನ್‌ನಲ್ಲಿ ಬೀದಿ ಆಹಾರದ ಅಂಗಡಿ ನಿರ್ವಹಿಸುತ್ತಿರುವ ಸಲೀಂ, “ಅಂಗಡಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬೋರ್‌ವೆಲ್ ನೀರನ್ನು ಬಳಸುತ್ತಿದ್ದೇವೆ. ಕುಡಿಯುವ ನೀರಿನ ಅಗತ್ಯವಿರುವುದರಿಂದ ಅಡುಗೆ ಮಾಡುವುದು ಸಮಸ್ಯೆಯಾಗಿ ಉಳಿದಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಾತ್ ರೂಮ್‌ನಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆ
“ಬೋರ್‌ವೆಲ್‌ಗಳು ಕಡಿಮೆ ನೀರನ್ನು ನೀಡುತ್ತವೆ. ಹೆಚ್ಚಿನ ಜನರು ಬೋರ್‌ವೆಲ್‌ಗಳನ್ನೇ ಅವಲಂಬಿಸಿದ್ದಾರೆ. ಅಡುಗೆ ಮಾಡಲು ಕುಡಿಯುವ ನೀರಿನ ಅಗತ್ಯವಿದೆ. ಅದಕ್ಕೂ ನೀರು ಸಾಲುತ್ತಿಲ್ಲ. ಬೋರ್ವೆಲ್ಗಳು ಕಡಿಮೆ ನೀರನ್ನು ನೀಡುವುದರಿಂದ ಆ ನೀರು ಕೂಡ ಸಾಲುತ್ತಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿಲ್ಲ. ಎಷ್ಟು ನೀರು ತುಂಬಬೇಕು. ಎಷ್ಟು ಸಂಗ್ರಹಿಸಬೇಕು ಹಾಗೂ ಎಷ್ಟು ಸಮಯದವರೆಗೆ ನೀರಿಗಾಗಿ ಕಾಯಬೇಕು? ಎಂದು ಪ್ರಶ್ನಿಸಿದರು.