ಆರ್​ಸಿಬಿ-ಸಿಎಸ್‌ಕೆ ಪಂದ್ಯದ ಟಿಕೆಟ್​ ಖರೀದಿಸಲು ಹೋಗಿ ₹3 ಲಕ್ಷ ಕಳೆದುಕೊಂಡ ಅಭಿಮಾನಿ

Date:

Advertisements

ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ​(ಸಿಎಸ್ ಕೆ)​ ಹಾಗೂ ಆರ್​ಸಿಬಿ ಪಂದ್ಯದ ಟಿಕೆಟ್​ ಖರೀದಿಸಲು ಹೋದ ಬೆಂಗಳೂರು ನಗರದ ಅಭಿಮಾನಿಯೊಬ್ಬ ಬರೋಬ್ಬರಿ ₹3 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.

ಬದ್ಧ ಎದುರಾಳಿಗಳಾಗಿರುವ, ಪ್ಲೇ ಆಫ್​ ಹಂತಕ್ಕೇರಲು ಮಹತ್ವದ ಪಂದ್ಯವಾಗಿರುವ ಕಾರಣ ಈ ಪಂದ್ಯದ ಕಾವು ಹೆಚ್ಚಾಗಿದೆ. ಹೀಗಾಗಿ ಈ ಪಂದ್ಯ ನೋಡಲು ಅಭಿಮಾನಿಗಳು ಕಾಳಸಂತೆಯಲ್ಲಿ ದುಬಾರಿ ಬೆಲೆ ಕೊಟ್ಟು ಟಿಕೆಟ್​ ಖರೀದಿ ಮಾಡುತ್ತಿದ್ದಾರೆ.

ಪದ್ಮ ಸಿನ್ಹಾ ವಿಜಯ್‌ ಕುಮಾರ್‌ ಎನ್ನುವಾತ ಐಪಿಎಲ್_2024 ಟಿಕೆಟ್ಸ್_24 ಎಂಬ ಖಾತೆಯ ಮೂಲಕ ಪಂದ್ಯಗಳ ಟಿಕೆಟ್​ ಬುಕ್ಕಿಂಗ್​ ಮಾಡಿಕೊಡಲಾಗುವುದು ಎಂದು ಹೇಳಿ ತನ್ನ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಮಾಹಿತಿ ಎಲ್ಲವನ್ನೂ ಹಂಚಿಕೊಂಡು, ಪ್ರತಿ ಟಿಕೆಟ್‌ಗೆ ₹2,300 ದರದಂತೆ 3 ಟಿಕೆಟ್‌ಗೆ ₹7,900 ನಿಗದಿ ಪಡಿಸಿದ್ದ. ಈ ಮೂಲಕ ಟಿಕೆಟ್‌ ಖರೀದಿಸಲು ಬರುವವರ ವಿಶ್ವಾಸ ಸಂಪಾದಿಸಿದ್ದ. ಇದನ್ನು ನಂಬಿದ ಬೆಂಗಳೂರು ಮೂಲದ 28 ವರ್ಷದ ಅಭಿಮಾನಿಯೊಬ್ಬ ಟಿಕೆಟ್​ ಖರೀದಿಸಲು ಮುಂದಾಗಿ ತನ್ನ ಖಾತೆಯಲ್ಲಿದ್ದ ₹3 ಲಕ್ಷ ಕಳೆದುಕೊಂಡಿದ್ದಾನೆ.

Advertisements

ವಿಜಯ್‌ ಕುಮಾರ್‌ ಆನ್‌ಲೈನ್‌ ಪಾವತಿ ಭರವಸೆ ನೀಡಿದ್ದಂತೆ ಈ ಅಭಿಮಾನಿಗೆ 3 ಇ-ಟಿಕೆಟ್‌ಗಳನ್ನು ವರ್ಗಾಯಿಸಿದ್ದಾನೆ. ಆದರೆ, ಹಣ ಪಾವತಿ ನಿಲ್ಲದೆ ಆಗಾಗ ಈ ಅಭಿಮಾನಿಯ ಖಾತೆಯಿಂದ ₹7,900ಗಳಂತೆ ಹಣ ವರ್ಗಾವಣೆ ಆಗಿ ₹3 ಲಕ್ಷ ಗಳಿಗೂ ಅಧಿಕ ಮೊತ್ತ ವಂಚಕನ ಖಾತೆಗೆ ಸೇರಿದೆ. ಈ ವೇಳೆ ಅಭಿಮಾನಿ ವಿಜಯ್‌ ಕುಮಾರ್‌ಗೆ ಕರೆ ಮಾಡಿ ವಿಚಾರಿಸಿದಾಗ ತಾಂತ್ರಿಕ ದೋಷ ಕಾರಣ ಹೀಗಾಗಿದ್ದು, ಹಣವನ್ನು ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದಾನೆ.

ಆ ಬಳಿಕವೂ ಕೂಡ ಹಣ ವರ್ಗಾವಣೆ ನಡೆದ ಕಾರಣ ಅನುಮಾನಗೊಂಡ ಅಭಿಮಾನಿ ಪೊಲೀಸರಿಗೆ ದೂರು ನೀಡಿದ್ದಾನೆ. ಹಣ ಪಾವತಿಯನ್ನು ತಡೆಯುವ ಹೊತ್ತಿಗಾಗಲೇ ₹3 ಲಕ್ಷ ಗಳಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದು, ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

Download Eedina App Android / iOS

X