ಚುನಾವಣಾ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವ ಬೆಂಬಲಿಗನ ನೆಪದಲ್ಲಿ ಬಂದು ಈಶಾನ್ಯ ದೆಹಲಿಯ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಹೂವಿನ ಹಾರವೊಂದನ್ನು ತಂದು, ಕನ್ಹಯ್ಯ ಕುಮಾರ್ ಕೊರಳಿಗೆ ಹಾಕಿದ ಬಳಿಕ ಕೆನ್ನೆಗೆ ಬಾರಿಸಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಹಾಗೂ ಇತರ ಕಾರ್ಯಕರ್ತರು ಆತನನ್ನು ಹಿಡಿದಿದ್ದಾರೆ. ಹಲ್ಲೆಗೈದಾತನ ವಿವರ ಇನ್ನೂ ಲಭ್ಯವಾಗಿಲ್ಲ. ಈಶಾನ್ಯ ದೆಹಲಿಯ ಓಸ್ಮಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ತಾರ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
Manoj Tiwari’s supporters and BJP workers are resorting to violence against Kanhaiya Kumar as they are fearing defeat in Northeast Delhi.
BJP is a party of goons….shameful! pic.twitter.com/ihilxS6pU6
— Shantanu (@shaandelhite) May 17, 2024
ಈ ಘಟನೆಯ ವೇಳೆಯಲ್ಲಿಯೇ ಆಮ್ ಆದ್ಮಿ ಪಕ್ಷದ ಮಹಿಳಾ ಕೌನ್ಸಿಲರ್ ಛಾಯಾ ಶರ್ಮಾ ಅವರೊಂದಿಗೂ ಬಿಜೆಪಿ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ದೂರಿನಲ್ಲಿ, ಶುಕ್ರವಾರ ಸಂಜೆ 4 ಗಂಟೆಗೆ ಕರ್ತಾರ್ ನಗರದ ಸತ್ಯನಾರಾಯಣ ಭವನದ ಕೌನ್ಸಿಲರ್ ಕಚೇರಿ ಚೌತಾ ಪುಷ್ಮದಲ್ಲಿ ನಡೆದ ಸಭೆಯ ನಂತರ ಸುಮಾರು 7-8 ಜನರು ಬಂದು ಕನ್ನಯ್ಯಾ ಕುಮಾರ್‌ಗೆ ಹಾರ ಹಾಕಿ ಕಪಾಳಮೋಕ್ಷ ಮಾಡಿದರು. ಈ ವೇಳೆ ನಾನೂ ಕೂಡ ಅಲ್ಲಿ ಉಪಸ್ಥಿತಳಿದ್ದೆ. ನನ್ನ ಜುಟ್ಟು ಹಿಡಿದು ಎಳೆದಾಡಿದ್ದಾರೆ. ಇದಾದ ಬಳಿಕ ನನಗೆ ಹಾಗೂ ನನ್ನ ಪತಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಅಲ್ಲದೇ 30 ರಿಂದ 40 ಜನರ ಮೇಲೆ ಕಪ್ಪು ಮಸಿ ಎರಚಲಾಗಿದೆ. ಘಟನೆಯ ವೇಳೆ ಮೂರ್ನಾಲ್ಕು ಮಹಿಳೆಯರು ಕೂಡ ಗಾಯಗೊಂಡಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.
कांग्रेस नेता कन्हैया कुमार को थप्पड़ मारने की कोशिश करने वाले को भीड़ ने बुरी तरह गिरा गिराकर मारा। pic.twitter.com/jesd79PdWp
— Lutyens Media (@LutyensMediaIN) May 17, 2024
ಕನ್ಹಯ್ಯ ಕುಮಾರ್ ಅವರಿಗೆ ಹಲ್ಲೆ ನಡೆಸಲು ಯತ್ನಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪೂರ್ವ ಯೋಜಿತ ಕೃತ್ಯ ಶಂಕೆ
ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾದ ಕನ್ಹಯ್ಯ ಕುಮಾರ್, ಬಿಜೆಪಿ ಅಭ್ಯರ್ಥಿಯಾದ ಮನೋಜ್ ತಿವಾರಿ ವಿರುದ್ಧ ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರಿಂದ ಸಹಿಸದ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಬೆಂಬಲಗನೋರ್ವ, ಪೂರ್ವ ಯೋಜಿತವಾಗಿ ಈ ಕೃತ್ಯ ಎಸಗಿರುವ ಅನುಮಾನ ದಟ್ಟವಾಗಿದೆ.
This BJP goon with a jungle on his face attacked our Kanhaiya Kumar.
Will Delhi police act?
IYC workers should set-up a 2 min meeting with this criminal.. pic.twitter.com/Ke3s8Eej5e
— Shantanu (@shaandelhite) May 17, 2024
ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಿಡಿಯೋ ಮಾಡುತ್ತಿದ್ದ ಬಲಪಂಥೀಯ ಸುದ್ದಿ ಹರಡುವ ಸುದರ್ಶನ್ ನ್ಯೂಸ್‌ನ ವ್ಯಕ್ತಿ, “ಈಗ ಕನ್ಹಯ್ಯ ಕುಮಾರ್‌ಗೆ ಹೊಡೆತ ಬೀಳಲಿದೆ ಎಂದು ಹಿಂದಿಯಲ್ಲಿ ಹೇಳುತ್ತಿರುವುದು ಕೇಳಿಸಿದೆ.
Today, Congress candidate Kanhaiya Kumar was attacked by a mob in northeast Delhi during the election campaign. This is the video of Sudarshan TV in which the cameraman can be heard foretelling about the attack. It seems that Sudarshan news knew about the attack beforehand. pic.twitter.com/VFL4BkkWHP
— Waquar Hasan (@WaqarHasan1231) May 17, 2024
ಹಲ್ಲೆಗೈದಿದ್ದ ಬಿಜೆಪಿ ಕಾರ್ಯಕರ್ತನನ್ನು ಕೂಡಲೇ ಹಿಡಿದ ಸ್ಥಳದಲ್ಲಿದ್ದವರು, ಆತನ ಮೇಲೂ ಹಲ್ಲೆಗೈದಿರುವುದಾಗಿ ತಿಳಿದುಬಂದಿದೆ.
The attack on Congress leader Kanhaiya Kumar was pre-planned. The guy recording the video can be heard saying “Kanhaiya will be beaten up.”
The faces of these goons are clearly visible in the video, will @DelhiPolice take any action or do these goons have political protection? pic.twitter.com/De9PoPjyfh
— Abhishek (@AbhishekSay) May 17, 2024
