ಹರಿಯಾಣದ ನುಹ್ ಜಿಲ್ಲೆಯ ತೌರು ಬಳಿ ಶನಿವಾರ ಮುಂಜಾನೆ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 8 ಮಂದಿ ಸಜೀವ ದಹನಗೊಂಡಿದ್ದಾರೆ.
ಬಸ್‌ನಲ್ಲಿ 64 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದ್ದು, ಈ ಪೈಕಿ 20 ಮಂದಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಇನ್ನೂ ಹಲವಾರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
#WATCH | Haryana: Eight people were killed and over 20 injured after the bus they were travelling in caught fire on the Kundli-Manesar-Palwal (KMP) Expressway in Nuh. The bus was returning from Vrindavan. pic.twitter.com/16IuWriUgo
— ANI (@ANI) May 18, 2024
ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಕಾರುಗಳ ನಡುವೆ ಢಿಕ್ಕಿ ಯುವತಿ ಸಜೀವ ದಹನ; ಗಾಯಗೊಂಡಿದ್ದ ಮೂವರು ಸಾವು
ಬಸ್‌ನಲ್ಲಿ ಪಂಜಾಬ್‌ನ ಹೋಶಿಯಾರ್‌ಪುರ ಮತ್ತು ಲುಧಿಯಾನ ನಿವಾಸಿಗಳಿದ್ದರು. ಈ ಪ್ರಯಾಣಿಕರು ಮಥುರಾ ಮತ್ತು ವೃಂದಾವನಕ್ಕೆ ಪ್ರಯಾಣಿಸಿ ವಾಪಸ್ ಬರುತ್ತಿದ್ದರು ಎಂದು ವರದಿಯಾಗಿದೆ. ಇವರೆಲ್ಲರೂ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.
#WATCH | Nuh, Haryana: Meena Rani, one of the injured says, “We were returning from Vrindavan. We don’t know how the fire broke out. 10 people have died. 64 people were there on the bus…” pic.twitter.com/S2DgovbYWq
— ANI (@ANI) May 18, 2024
“ನಾವು ವೃಂದಾವನದಿಂದ ವಾಪಸ್ ಬರುತ್ತಿದ್ದೆವು. ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದು ಹೇಗೆ ಎಂದು ನಮಗೆ ತಿಳಿದಿಲ್ಲ. ಹತ್ತು ಜನರು ಸಾವನ್ನಪ್ಪಿದ್ದಾರೆ. ನಾವು 64 ಜನರು ಬಸ್‌ನಲ್ಲಿದ್ದೆವು” ಎಂದು ಗಾಯಾಳು ಮೀನಾ ರಾಣಿ ತಿಳಿಸಿದ್ದಾರೆ.