ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಯುಕೆಯಿಂದ ಹಿಂದಿರುಗಿದ್ದು ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಸುಮಾರು ಒಂದು ತಿಂಗಳ ನಂತರ ರಾಘವ್ ಚಡ್ಡಾ ಈಗ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ರಾಘವ್ ಚಡ್ಡಾ ಅವರು ತನ್ನ ಕಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಗಂಭೀರ ಸ್ಥಿತಿ ಎದುರಾಗಿತ್ತು ಎಂದು ವರದಿಯಾಗಿದೆ.
#WATCH | Delhi: AAP MP Raghav Chadha arrives at the residence of Delhi CM Arvind Kejriwal
He was in UK and had undergone eye surgery there pic.twitter.com/XUGuqxHBIY
— ANI (@ANI) May 18, 2024
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಈ ತಿಂಗಳ ಆರಂಭದಲ್ಲಿ ಚಡ್ಡಾ ಅವರು ತುರ್ತು ಕಣ್ಣಿನ ಶಸ್ತ್ರಚಿಕಿತ್ಸೆ-ವಿಟ್ರೆಕ್ಟಮಿ-ಗೆ ಒಳಗಾಗಿದ್ದರು. ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಸಂದರ್ಭದಲ್ಲಿ ಚಡ್ಡಾ ಅವರ ಗೈರುಹಾಜರಿಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು.
ಇದನ್ನು ಓದಿದ್ದೀರಾ? ಶಸ್ತ್ರಚಿಕಿತ್ಸೆಗಾಗಿ ಯುಕೆಯಲ್ಲಿರುವ ರಾಘವ್ ಚಡ್ಡಾ, ದೃಷ್ಟಿ ಕಳೆದುಕೊಳ್ಳುವ ಗಂಭೀರ ಸ್ಥಿತಿಯಿತ್ತು: ದೆಹಲಿ ಸಚಿವ
ಅಬಕಾರಿ ನೀತಿ ಪ್ರಕರಣದ ಆರೋಪಪಟ್ಟಿಯಲ್ಲಿ ರಾಘವ್ ಚಡ್ಡಾ ಹೆಸರೂ ಇದೆ ಎಂದು ಹೇಳಲಾಗಿತ್ತು. ಇದಾದ ಬಳಿಕ ಚಡ್ಡಾ ನಾಪತ್ತೆಯಾದರೆ ಎಂದು ಪ್ರಶ್ನಿಸಲಾಗುತ್ತಿತ್ತು. ಆದರೆ ಎಎಪಿ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಸ್ಪಷ್ಟನೆಯನ್ನು ನೀಡಿದ್ದರು.
ರಾಘವ್ ಚಡ್ಡಾ ಅವರು ಚುನಾವಣಾ ಪ್ರಚಾರಕ್ಕೆ ಗೈರುಹಾಜರಾಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸೌರಭ್ ಭಾರದ್ವಾಜ್, “ರಾಘವ್ ಚಡ್ಡಾ ಕಣ್ಣುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅದಾದ ಬಳಿಕ ಚಿಕಿತ್ಸೆ ಪಡೆಯಲು ಯುಕೆಗೆ ಅವರು ತೆರಳಿದರು. ಸ್ಥಿತಿ ಗಂಭೀರವಾಗಿದ್ದು, ಸಕಾಲಿಕ ಚಿಕಿತ್ಸೆ ನೀಡದಿದ್ದರೆ ಕುರುಡುತನದ ಸಾಧ್ಯತೆಯಿದೆ ಎಂದು ನನಗೆ ತಿಳಿಸಲಾಗಿತ್ತು” ಎಂದು ಏಪ್ರಿಲ್ ಕೊನೆಯಲ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ನೀತಿ ಪ್ರಕರಣ | ಇ.ಡಿ ಆರೋಪ ಪಟ್ಟಿಯಲ್ಲಿ ರಾಘವ್ ಚಡ್ಡಾ ಹೆಸರು ಉಲ್ಲೇಖ
“ರಾಘವ್ ಚಡ್ಡಾ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರು ಗುಣಮುಖರಾದ ತಕ್ಷಣ ಭಾರತಕ್ಕೆ ಹಿಂದಿರುಗಲಿದ್ದಾರೆ. ಬಳಿಕ ಪಕ್ಷದ ಪ್ರಚಾರದಲ್ಲಿ ಸೇರಲಿದ್ದಾರೆ” ಎಂದು ಸೌರಭ್ ಭಾರದ್ವಾಜ್ ತಿಳಿಸಿದ್ದರು.