ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈಗ ಜೈಲಿನಿಂದ ಹೊರಗೆ ಇದ್ದಿದ್ದರೆ ನಾನು ಇಂತಹ ವಿವಾದದಲ್ಲಿ ಸಿಲುಕಬೇಕಾಗಿರಲಿಲ್ಲ ಎಂದು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಭಾನುವಾರ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಸ್ವಾತಿ ಮಲಿವಾಲ್ ಪೋಸ್ಟ್ ಮಾಡಿದ್ದಾರೆ. “ನಿರ್ಭಯಾಗೆ ನ್ಯಾಯ ಕೊಡಿಸಲು ನಾವೆಲ್ಲ ಬೀದಿಗಿಳಿಯುತ್ತಿದ್ದ ಕಾಲವಿತ್ತು, ಇಂದು 12 ವರ್ಷಗಳ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಕಣ್ಮರೆಯಾಗಿಸಿ ಫೋನ್ ಫಾರ್ಮಾಟ್ ಮಾಡಿದ ಆರೋಪಿಯನ್ನು ರಕ್ಷಿಸಲು ನಾವೆಲ್ಲರೂ ಬೀದಿಗಿಳಿದಿದ್ದೇವೆಯೇ” ಎಂದು ಸ್ವಾತಿ ಮಲಿವಾಲ್ ಪ್ರಶ್ನಿಸಿದ್ದಾರೆ.
किसी दौर में हम सब निर्भया को इंसाफ़ दिलाने के लिए सड़क पर निकलते थे, आज 12 साल बाद सड़क पर निकले हैं ऐसे आरोपी को बचाने के लिए जिसने CCTV फुटेज ग़ायब किए और Phone format किया?
काश इतना ज़ोर मनीष सिसोदिया जी के लिए लगाया होता। वो यहाँ होते तो शायद मेरे साथ इतना बुरा नहीं होता! pic.twitter.com/kXAAMLgPcg
— Swati Maliwal (@SwatiJaiHind) May 19, 2024
“ಅವರು (ಎಎಪಿ) ಮನೀಶ್ ಸಿಸೋಡಿಯಾ ಅವರಿಗಾಗಿ ಇಷ್ಟು ಬಲ ಪ್ರಯೋಗ ಮಾಡುತ್ತಿದ್ದರು ಎಂದು ನಾನು ಬಯಸುತ್ತೇನೆ. ಸಿಸೋಡಿಯಾ ಇಲ್ಲಿ ಇದ್ದಿದ್ದರೆ ಬಹುಶಃ ವಿಷಯ ಇಷ್ಟು ಕೆಟ್ಟದಾಗುತ್ತಿರಲಿಲ್ಲ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಸ್ವಾತಿ ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ನೀತಿ ಪ್ರಕರಣ | ಸಿಸೋಡಿಯಾ ಜಾಮೀನು ಅರ್ಜಿ; ಸಿಬಿಐ, ಇಡಿಗೆ ಹೈಕೋರ್ಟ್ ನೋಟಿಸ್
ಮೇ 13 ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ. ಸದ್ಯ ಈ ಪ್ರಕಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಭವ್ ಐದು ದಿನಗಳ ಪೊಲೀಸ್ ಕಸ್ಟರಿಯಲ್ಲಿದ್ದಾರೆ.
ಶನಿವಾರ ತಡರಾತ್ರಿ ನಡೆದ ವಿಚಾರಣೆ ವೇಳೆ ದೆಹಲಿ ಪೊಲೀಸರು ತೀಸ್ ಹಜಾರಿ ನ್ಯಾಯಾಲಯಕ್ಕೆ ಸಿಎಂ ಗೃಹ ಸಿಬ್ಬಂದಿ ಒದಗಿಸಿದ್ದ ಸಿಸಿಟಿವಿ ದೃಶ್ಯಾವಳಿಗಳು ಬ್ಲ್ಯಾಕ್ ಆಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಕುಮಾರ್ ತಮ್ಮ ಮೊಬೈಲ್ ಫೋನ್ ನೀಡಿದ್ದರೂ ಪಾಸ್‌ವರ್ಡ್ ನೀಡಿಲ್ಲ. ಇದಲ್ಲದೆ, ಅವರು ಈಗಾಗಲೇ ಒಂದು ದಿನದ ಹಿಂದೆ ತನ್ನ ಫೋನ್ ಅನ್ನು ಫಾರ್ಮ್ಯಾಟ್ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು 2023 ಫೆಬ್ರವರಿ 26 ರಂದು ಸಿಬಿಐ ಬಂಧಿಸಿತ್ತು. ಅಂದಿನಿಂದ ಬಂಧನದಲ್ಲಿಯೇ ಇದ್ದಾರೆ.
Manish Sisodia is in judicial custody on account of the excise case. It’s wishful thinking on her part to think that he would have helped her. Currently only Vandana Singh from her party is directly supporting her.